ಜೀವನದಲ್ಲಿ ಮನುಶ್ಯನಿಗೆ ಕಷ್ಟಗಳು ಕಾಡುವುದು ಸರ್ವೇಸಾಮಾನ್ಯ. ಆದರೆ ಪ್ರತಿಯೊಂದು ಕಷ್ಟಗಳಿಗೂ ಅದರದೇ ಆದ ಪರಿಹಾರಗಳು ಇರುತ್ತದೆ, ನಂತರ ಕಷ್ಟಗಳೆಲ್ಲ ಕಳೆದು ಒಳ್ಳೆಯ ಸಮಯ ಮೂಡುತ್ತದೆ ಎಂಬ ನಂಬಿಕೆ ಮನಸ್ಸಿನಲ್ಲಿ ಯಾವಾಗಲೂ ಇರಬೇಕು, ಅಂದಿಗೆ ಜೀವನದ ಸಕಲ ಕಷ್ಟಗಳು ನೆರವೇರುವಂತೆ ಭಗವಂತನಲ್ಲಿ ಪ್ರಾರ್ಥನೆಯನ್ನು ಸದಾ ಮಾಡುತ್ತಿರಬೇಕು. ಮಕ್ಕಳಾಗದ ಸಮಸ್ಯೆ ನಿಮ್ಮನ್ನು ಕಾಡುತ್ತಿದ್ದರೆ ಅಥವಾ ಹಣಕಾಸಿನ ಸಮಸ್ಯೆ ನಿಮಗಿದೆ ಎಂದರೆ ತಪ್ಪದೇ ಈ ಶ್ರೀ ಋಷ್ಯಶೃಂಗೇಶ್ವರ ಸ್ವಾಮಿ ದೇವಸ್ಥಾನಕ್ಕೆ ಒಮ್ಮೆ ಭೇಟಿ ನೀಡಿ. ನಿಮ್ಮ ಸಕಲ ಸಮಸ್ಯೆಗಳನ್ನು ಪರಿಹರಿಸುತ್ತಾನಂತೆ ಈ ಭಗವಂತ.
ದಶರಥನ ಪುತ್ರ ಸಂತಾನ ಪ್ರಾಪ್ತಿ: ಸಕಲ ವೈಭವದಿಂದ ಅಯೋಧ್ಯೆಯನ್ನು ದಶರಥ ಮಹಾರಾಜನು ಆಳುತ್ತಿರುತ್ತಾನೆ, ಪುತ್ರ ಸಂತಾನವಿಲ್ಲದ ದೊಡ್ಡ ಕೊರತೆ ಆತನ ಮನಸ್ಸನ್ನು ಕೊರೆಯುತ್ತಿರುತ್ತದೆ, ಋಷ್ಯಶೃಂಗರ ಮಹಾಮಹಿಮೆಯನ್ನು ಅರಿತಿದ್ದ ಮಹಾಮಂತ್ರಿ ಸುಮಂತ್ರನ ಸೂಕ್ತ ಸಲಹೆಯಂತೆ ದಶರಥ ಮಹಾರಾಜನು ಈ ಮಹಾಮಹಿಮ ವಿಭಾಂಡ ಪುತ್ರನನ್ನು ತನ್ನ ದೇಶಕ್ಕೆ ಕರೆಸಿ ಅವರಿಂದ ಪುತ್ರಕಾಮೇಷ್ಟಿಯಾಗವನ್ನು ಮಾಡಿಸುತ್ತಾನೆ, ಯಾಗದಿಂದ ಸಂತೃಪ್ತನಾದ ಯಜ್ಞೇಶ್ವರದೇವ ನಿಂದ ಪ್ರಾಪ್ತವಾದ ಪಾಯಸವನ್ನು ದಶರಥನು ಕೌಸಲ್ಯೆಗೂ, ಕೈಕೆಗೂ ನೀಡುತ್ತಾನೆ, ಇವರಿಬ್ಬರೂ ತಮಗೆ ಲಭ್ಯವಾದ ಪಾಯಸದಲ್ಲಿ ಅರ್ಧಾರ್ಧ ಭಾಗವನ್ನು ಸುಮಿತ್ರೆಗೆ ನೀಡಿ ಸೇವಿಸುತ್ತಾರೆ, ಇದರ ಪರಿಣಾಮವಾಗಿ ಕೌಸಲ್ಯೆಗೆ ರಾಮ, ಕೈಕೆಗೆ ಭರತ, ಸುಮಿತ್ರೆಗೆ ಲಕ್ಷ್ಮಣ ಮತ್ತು ಶತೃಘ್ನರ ಜನನವಾಗಿ ಲೋಕ ಕಲ್ಯಾಣಕ್ಕೆ ನಾಂದಿಯಾಗುತ್ತದೆ, ಕೆಲಕಾಲ ಅಂಗದೇಶವನ್ನಾಳಿದ ನಂತರ ಋಷ್ಯಶೃಂಗರು ತಪಸ್ಸನ್ನಾಚರಿಸುವ ಹಂಬಲದಿಂದ ಪತ್ನಿ ಶಾಂತಾಸಮೇತರಾಗಿ ಶೃಂಗಗಿರಿಗೆ ಮರಳುತ್ತಾರೆ.
ಕಿಗ್ಗಾ : ಇತ್ತ ತಂದೆ ವಿಭಾಂಡಕ ಮಹರ್ಷಿಗಳು ಪರಮೇಶ್ವರನಲ್ಲಿ ಐಕ್ಯಗೊಂಡ ವಿಷಯ ತಿಳಿದ ಋಷ್ಯಶೃಂಗರು ತಮ್ಮ ಕಿವಿಗೆ ಕೇಳಿಬಂದ ದೇವವಾಣಿಯ ಆದೇಶದಂತೆ ಸಹ್ಯಾದ್ರಿ ಪರ್ವತಶ್ರೇಣಿಯ ಪಶ್ಚಿಮ ದಿಕ್ಕಿನಲ್ಲಿ ಬರುವ ನೃಸಿಂಹ ಪರ್ವತದಲ್ಲಿ ನೃಸಿಂಹನನ್ನು ಕುರಿತು ತಪಸ್ಸನ್ನು ಆಚರಿಸಲಾರಂಭಿಸುತ್ತಾರೆ. ಇವರ ತಪಸ್ಸಿಗೆ ಮೆಚ್ಚಿ ಪ್ರತ್ಯಕ್ಷರಾದ ನೃಸಿಂಹ ದೇವರು ಋಷ್ಯಶೃಂಗರಿಗೆ ‘ಶಿವಪಂಚಾಕ್ಷರಿ ಮಂತ್ರ ಉಪದೇಶಿಸಿ ಪರ್ವತದ ಬುಡದಲ್ಲಿರುವ ಪ್ರಸ್ತುತ ಕಿಗ್ಗಾ ಎಂದು ಕರೆಯಲ್ಪಡುವ ಸ್ಥಳದಲ್ಲಿ ಚಂದ್ರಮೌಳೇಶ್ವರರನ್ನು ಕುರಿತು ತಪಸ್ಸನ್ನಾಚರಿಸಲು ಆದೇಶಿಸುತ್ತಾರೆ.
ಅದರಂತೆ ಪತ್ನಿ ಸಮೇತರಾಗಿ ತಪಸ್ಸನ್ನಾಚರಿಸಿ ಪರಮಾತ್ಮನಲ್ಲಿ ಲೀನವಾಗುವ ಸಂಕಲ್ಪದಿಂದ ತ್ರಿಕರ್ಣಶುದ್ಧ ತಪಸ್ಸಿನ ಫಲವಾಗಿ ಚಂದ್ರಮೌಳೇಶ್ವರರ ದರ್ಶನವಾಗುತ್ತದೆ. ತಮ್ಮ ನಿರೀಕ್ಷೆಗೂ ಮೊದಲು ಪ್ರತ್ಯಕ್ಷನಾದ ಭಗವಂತನ ದರ್ಶನದಿಂದ ಅತ್ಯಂತ ಸಂತೋಷ ಉಂಟಾದ ಅವಸರದಲ್ಲಿ ವರ ಬೇಡುವಾಗ ವಿಚಲಿತರಾದ ಋಷ್ಯಶೃಂಗರು ‘ನಾನು ನಿನ್ನಲ್ಲಿ ಐಕ್ಯವಾಗಬೇಕು’ ಎಂದು ಕೇಳುವುದರ ಬದಲಾಗಿ ‘ನೀನು ನನ್ನಲ್ಲಿ ಐಕ್ಯನಾಗು’ ಎಂಬ ಕೋರಿಕೆಯಂತೆ ಚಂದ್ರಮೌಳೇಶ್ವರರು ಈ ಮಹಾಮಹಿಮನಲ್ಲಿ ಐಕ್ಯಗೊಳ್ಳುತ್ತಾರೆ. ವರ ಕೋರಿಕೆಯಲ್ಲಿ ಉಂಟಾದ ಮಾತಿನ ವ್ಯತ್ಯಾಸದಿಂದಾಗಿ ಈ ಪ್ರದೇಶ ‘ಕಗ್ಗ’ ಎಂಬ ಹೆಸರಿನೊಂದಿಗೆ ಗುರುತಿಸಿಕೊಂಡು ಕಾಲಾನುಕ್ರಮದಲ್ಲಿ ‘ಕಿಗ್ಗ’ ಋಷ್ಯಶೃಂಗಪುರ ಎಂದು ಕರೆಯಲ್ಪಟ್ಟಿತೆಂದು ನಂಬಲಾಗಿದೆ. ಭಕ್ತಾದಿಗಳು ತಮ್ಮ ತಮ್ಮ ಅಭಿಲಾಷೆಯಂತೆ ಸುವೃಷ್ಠಿ ಪ್ರಾಪ್ತಿ ಹಾಗೂ ಸಂತಾನ ಪ್ರಾಪ್ತಿಗಾಗಿ ಪ್ರಾರ್ಥಿಸುತ್ತಾ ಬರುತ್ತಲಿದ್ದಾರೆ.
ಶ್ರೀ ಋಶ್ಯಶೃಂಗೇಶ್ವರ ಸ್ವಾಮಿ ದೇವಸ್ಥಾನ ವಿಳಾಸ : ಶ್ರೀ ಋಷ್ಯಶೃಂಗೇಶ್ವರ ಸ್ವಾಮಿ ದೇವಸ್ಥಾನ, ಕಿಗ್ಗಾ ಅಂಚೆ, ಶೃಂಗೇರಿ ತಾಲ್ಲೂಕು, ಚಿಕ್ಕಮಂಗಳೂರು ಜಿಲ್ಲೆ. ಪಿನ್-577139. ದೂರವಾಣಿ ಸಂಖ್ಯೆ : 08265-258722.