ಮದುವೆಯ ನಂತರ ಪ್ರತಿ ಜೋಡಿಯೂ ಕಾಣುವ ಕನಸು ತಮ್ಮದೇ ಕರುಳ ಕುಡಿ ಮಡಿಲಿಗೆ ಬರಲಿ ಅಂತ. ಇಂತಹದ್ದೊಂದು ಕನಸು ಒಂದಿಡೀ ದಾಂಪತ್ಯ ಬದುಕಲ್ಲಿ ಸಾರ್ಥಕ್ಯ ಭಾವ ಮೂಡಿಸುತ್ತದೆ. ಆದರೆ ಕೆಲವರಿಗೆ ಮಾತ್ರ ಬಯಸಿದಷ್ಟು ಬಾರಿ ಇಂತಹದ್ದೊಂದು ಕನಸು ನನಸಾಗುವುದೇ ಇಲ್ಲ. ಇದು ನೋವು, ನಿರಾಷೆ, ಹತಾಷೆ ರೂಪದಲ್ಲಿ ಅವರ ಬದುಕಿನ ಖುಷಿಯನ್ನು ಚೂರೇಚೂರಾಗಿ ಕಿತ್ತುಕೊಳ್ಳಲಾರಂಭಿಸುತ್ತದೆ. ಅದರಲ್ಲೂ ಸಮಾಜದ ಕೊಂಕು ಮಾತುಗಳಿಂದಲೂ ಅವರು ಎಲ್ಲರೊಡನೆ ಬೆರೆಯಲು ಹಿಂಜರಿಯುವಂತಾಗುತ್ತದೆ.ವಿಜ್ಞಾನ, ತಂತ್ರಜ್ಞಾನ ಎಷ್ಟೇ ಮುಂದುವರೆದರೂ ಸಮಸ್ಯೆಯ ಮೂಲ ಹುಡುಕಿ ಚಿಕಿತ್ಸೆ ನೀಡಿದರೂ ಕೆಲವರಿಗೆ ಮಾತ ತಮ್ಮದೇ ಕುಡಿಯನ್ನು ಪಡೆಯಲು ಸಾಧ್ಯ.

ಸಂತಾನಹೀನತೆ ಅಂತ ಗುರುತು ಹಿಡಿಯಲಿಕ್ಕೆ ಮದುವೆಯಾಗಿ ಎರಡು ವರ್ಷಗಳಾಗಬಹುದು. ಮದುವೆಯಾಗಿ ವರ್ಷದೊಳಗೆ ಯಾವುದೇ ಸಂತಾನ ನಿರೋಧಕ ಬಳಸದೆ ಸಂಭೋಗ ಮಾಡಿದರೂ ಗರ್ಭ ಧರಿಸದಿದ್ದರೆ ಸಮಸ್ಯೆ ಇದೆ ಅಂತಲೇ ಅರ್ಥ. ಸಮಸ್ಯೆಗೆ ಗಂಡಹೆಂಡತಿಯರಿಬ್ಬರದ್ದೂ ಸಮಪಾಲು. ಆದರೆ ಇವತ್ತಿಗೂ ಸಮಸ್ಯೆಯ ಮೂಲ ಸ್ತ್ರಿ ಅಂತಲೇ ಬಿಂಬಿಸಲಾಗುತ್ತಿದೆ.ಇದಕ್ಕೆ ಸಾಮಾನ್ಯ ಕಾರಣಗಳೆಂದರೆ ಗರ್ಭಕೋಶದ ಗಡ್ಡೆ,ಪಾಲಿಸ್ಟಿಕ್ ಒವೇರಿಯನ್ ಡೀಸಿಸ್, ಬೊಜ್ಜು, ಪೌಷ್ಟಿಕಾಂಶ ಕೊರತೆ, ಮಾನಸಿಕ ಒತ್ತಡ, ಧೂಮಪಾನ, ಮದ್ಯಪಾನ ಮತ್ತಿತರ ಕಾರಣಗಳಿಂದ ಸಂತಾನ ಹೀನತೆ ಉಂಟಾಗುತ್ತದೆ.
ಋತುಚಕ್ರದಲ್ಲಿ ಏರುಪೇರು ಪ್ರಮುಖ ಪಾತ್ರ ವಹಿಸುತ್ತದೆ. ರಕ್ತ ಸ್ರಾವ ಹೆಚ್ಚಾಗುವುದು, ಅನಿಯಮಿತ ಮುಟ್ಟು, ಕೂದಲು ಉದುರುವುದು, ಸಂಭೋಗದಲ್ಲಿ ನಿರಾಸಕ್ತಿಯೂ ಕಾರಣವಿರಬಹುದು.

ಈ ಎಲ್ಲ ಸಮಸ್ಯೆಗಳಿಗೆ ಹೋಮಿಯೋಪಥಿ ಚಿಕಿತ್ಸೆ ನೀಡಲಿದೆ. ಯಾವುದೇ ರೀತಿಯ ಶಸ್ತ್ರ ಚಿಕಿತ್ಸೆ ಇಲ್ಲದೆ, ಕೃತಕ ಗರ್ಭಧಾರಣೆ ಇಲ್ಲದೆ ನೈಸರ್ಗಿಕವಾಗಿಯೇ ಗರ್ಭ ಧರಿಸಲು ಔಷಧೋಪಚಾರ ಮಾಡಲಾಗುತ್ತದೆ. ಯಾವುದೇ ಹಾರ್ಮೋನ್ ಮಾತ್ರೆ ಬಳಸದೆ ನೈಸರ್ಗಿಕವಾಗಿ ಹಾರ್ಮೋನ್‌ಗಳನ್ನು ಸಮತೋಲನದಲ್ಲಿಟ್ಟು ಆನುವಂಶಿಕ ಧಾತುಗಳನ್ನು ಅವರವರ ವ್ಯಕ್ತಿತ್ವದ ಮೂಲಕ ಅರಿತುಕೊಂಡು ಚಿಕಿತ್ಸೆ ನೀಡಲಾಗುತ್ತದೆ.

Leave a Reply

Your email address will not be published. Required fields are marked *