ನಮಸ್ತೇ ಆತ್ಮೀಯ ಪ್ರಿಯ ಓದುಗರೇ, ಮಧುಮೇಹ ಎಂಬ ಕಾಯಿಲೆ ಇದ್ದವರು ಅವರು ಪಡುವ ಪಾಡು ಅಷ್ಟಿಷ್ಟಲ್ಲ. ಆ ನೋವು ಅವರಿಗೆ ಮಾತ್ರ ಗೊತ್ತು. ಮಧುಮೇಹ ಅನ್ನುವುದು ದೀರ್ಘಕಾಲದ ವರೆಗೆ ಕಾಡುವ ಕಾಯಿಲೆ ಆಗಿದೆ. ಒಮ್ಮೆ ಈ ಕಾಯಿಲೆ ಅವರಿಸಿಕೊಂಡರೆ ಜೀವನ ಪರ್ಯಂತ ಬಿಟ್ಟು ಹೋಗುವುದಿಲ್ಲ. ಅದಕ್ಕಾಗಿ ನಾವು ಕಟ್ಟು ನಿಟ್ಟಿನ ಆಹಾರ ಪದ್ಧತಿಯನ್ನು ಅಳವಡಿಸಿಕೊಳ್ಳಬೇಕಾಗುತ್ತದೆ. ಸಕ್ಕರೆ ಕಾಯಿಲೆ ಇದ್ದವರು ತಮ್ಮ ಆಹಾರ ಪದ್ಧತಿಯಲ್ಲಿ ತಿನ್ನುವ ಆಹಾರ ಇಷ್ಟವಿಲ್ಲದೆ ಇದ್ದರೂ ಸೇವನೆ ಮಾಡಬೇಕಾಗುತ್ತದೆ.
ಹಾಗೂ ಇಷ್ಟವಾದ ಆಹಾರವನ್ನು ಸೇವನೆ ಮಾಡುವ ಹಾಗಿಲ್ಲ. ಮುಖ್ಯವಾಗಿ ಸಿಹಿ ಆಹಾರಗಳು ತಿಂಡಿ ತಿನಿಸುಗಳು. ಇದರಿಂದ ದೇಹದಲ್ಲಿ ಸಕ್ಕರೆಯ ಅಂಶ ಹೆಚ್ಚುತ್ತದೆ. ಸಿಹಿ ಪದಾರ್ಥಗಳನ್ನು ತಿಂದು ಮಧುಮೇಹ ರೋಗವನ್ನು ಹೆಚ್ಚಿಸಿಕೊಳ್ಳುವ ಬದಲು ಸರಿಯಾದ ಆಹಾರವನ್ನು ಸೇವನೆ ಮಾಡುವುದು ಒಳ್ಳೆಯದು.bಹಾಗಾದರೆ ಇಂದಿನ ಲೇಖನದಲ್ಲಿ ನಾವು ನಿಮಗೆ ಬೀಟ್ರೂಟ್ ಸೇವನೆ ಮಾಡುವುದರಿಂದ ಏನೆಲ್ಲ ಲಾಭಗಳು ಆಗುತ್ತದೆ ಅಂತ ತಿಳಿಯೋಣ.
ಬೀಟ್ ರೂಟ್ ರಕ್ತದ ಬಣ್ಣವನ್ನೇ ಹೊಂದಿರುವಂತಹ ತರಕಾರಿ. ಇದನ್ನು ಜ್ಯೂಸ್ ಮಾಡಿ ಕುಡಿದರೆ ದೇಹಕ್ಕೆ ಸಿಗುವ ಆರೋಗ್ಯ ಲಾಭಗಳು ಹೀಗಿವೆ.bಬೀಟ್ರೂಟ್ ಅನ್ನು ಹಸಿಯಾಗಿ ತಿಂದರೂ ಕೂಡ ಬಾಯಿಗೆ ರುಚಿಯನ್ನು ನೀಡುತ್ತದೆ.bಇದನ್ನು ಸಲಾಡ್ ಅಥವಾ ಪಲ್ಯ ಮಾಡಿ ಸೇವನೆ ಮಾಡಿದರೆ ಬಾಯಿಗೆ ರುಚಿ ಅನ್ನಿಸುತ್ತದೆ. ಇನ್ನೂ ಬೀಟ್ರೂಟ್ ನಲ್ಲಿರುವ ಬೀಟಾ ಸೈಯಾನಿನ್ ಎಂಬ ಪೋಷಕಾಂಶ ಪ್ರಮುಖ ಆಂಟಿ ಆಕ್ಸಿಡೆಂಟ್ ಆಗಿದೆ ಹಾಗೂ ಇದು ಕ್ಯಾನ್ಸರ್ ಕಾರಕ ಫ್ರೀ ರ್‍ಯಾಡಿಕಲ್ ಎಂಬ ಕಣಗಳ ವಿರುದ್ಧ ಹೋರಾಡುತ್ತದೆ.
ಈ ಮೂಲಕ ಕೆಲವಾರು ಬಗೆಯ ಕ್ಯಾನ್ಸರ್ ಗಳಿಗೆ ಬೀಟ್ರೂಟ್ ರಕ್ಷಣೆ ನೀಡುತ್ತದೆ. ಅಲ್ಲದೇ ಬೀಟ್ರೂಟ್ ರಸದಲ್ಲಿರುವ ಉರಿಯೂತ ನಿವಾರಕ ಗುಣ ರಕ್ತ ಮತ್ತು ಅಸ್ಥಿಮಜ್ಜೆಯ ಕ್ಯಾನ್ಸರ್ ಅನ್ನು ಗುಣಪಡಿಸಲು ನೆರವಾಗುತ್ತದೆ. ಈ ಕಾರ್ಯದಲ್ಲಿಯೂ ಬೀಟಾಸೈಯಾನಿನ್ ನೆರವು ನೀಡುತ್ತದೆ. ಕೆಲವಾರು ಬಗೆಯ ಕ್ಯಾನ್ಸರ್ ಗಳಿಗೆ ನೀಡುವ ಔಷಧಿಗಳಲ್ಲಿ ಎಂಬುದು ಒಂದಾಗಿದ್ದು ಬೀಟ್ರೂಟ್ ಈ ಔಷಧಿಯಂತೆಯೇ ಕಾರ್ಯನಿರ್ವಹಿಸುತ್ತದೆ.ಪ್ರತೀ ನಿತ್ಯ ಒಂದು ಲೋಟ ಬೀಟ್ ರೂಟ್ ಜ್ಯೂಸ್ ಕುಡಿದರೆ ಅದರಿಂದ ತ್ರಾಣ ಹೆಚ್ಚಾಗುತ್ತದೆ.
ನೈಟ್ರೇಟ್ ಅಂಶವು ನೈಟ್ರೇಟ್ ಆಕ್ಸೈಡ್ ಆಗಿ ಪರಿವರ್ತನೆಗೊಳ್ಳೂವ ಮೂಲಕ ವ್ಯಾಯಾಮ ಮತ್ತು ದೈಹಿಕ ಚಟುವಟಿಕೆ ವೇಳೆ ಆಮ್ಲಜನಕದ ಸರಬರಾಜು ಹೆಚ್ಚಿಸುವುದು ಮತ್ತು ಆಯಾಸ ಕಡಿಮೆ ಮಾಡುವುದು. ಜ್ಯೂಶ್ ನ್ನು ನಿಯಮಿತವಾಗಿ ಕುಡಿದರೆ ಅದರಿಂದ ದೈಹಿಕವಾಗಿ ಶಕ್ತಿ ಬರುವುದು. ಆಂಟಿಆಕ್ಸಿಡೆಂಟ್ ಗುಣ ಹೊಂದಿರುವಂತಹ ಬೀಟ್ ರೂಟ್ ಜ್ಯೂಸ್ ಕ್ಯಾನ್ಸರ್ ನ್ನು ಹಲವಾರು ವಿಧದಿಂದ ತಡೆಯುವುದು. ಇದರಲ್ಲಿ ಇರುವಂತಹ ವಿಟಮಿನ್ ಸಿ ಮತ್ತು ಬೆಟಾಲೈನ್ಸ್ ಅಂಶವು ಕ್ಯಾನ್ಸರ್ ಕಾರಕವಾಗಿರುವಂತಹ ಫ್ರೀ ರ್ಯಾಡಿಕಲ್ ನ್ನು ದೇಹದಿಂದ ಹೊರಗೆ ಹಾಕಲು ನೆರವಾಗುವುದು.
ಇದು ಡಿಎನ್ ಎ ಮತ್ತು ಅಣುಗಳಿಗೆ ಆಗುವ ಹಾನಿ ತಪ್ಪಿಸುವುದು.ಬೀಟ್ ರೂಟ್ ಕೂಡ ಮಣ್ಣಿನ ಅಡಿಯಲ್ಲಿ ಸಿಗುವ ತರಕಾರಿಯಾಗಿದ್ದು, ಅದ್ಭುತವಾದ ತರಕಾರಿ ಎಂದೇ ಹೇಳಬಹುದು. ಬೀಟ್ ರೂಟ್ ನಲ್ಲಿ ಹಲವಾರು ವಿಧದ ವಿಟಮಿನ್, ಖನಿಜಾಂಶಗಳಿವೆ. ಇದು ಚರ್ಮದ ಸಮಸ್ಯೆ ಮತ್ತು ನೆರಿಗೆ ವಿರುದ್ಧ ಹೋರಾಡುವುದು ಮಾತ್ರವಲ್ಲದೆ ಚರ್ಮಕ್ಕೆ ಪುನಶ್ಚೇತನ ನೀಡುವುದು. ನಿಯಮಿತವಾಗಿ ಬೀಟ್ರೂಟ್ ಜ್ಯೂಸ್ ಕುಡಿದರೆ ಅದರಿಂದ ಆರೋಗ್ಯಕಾರಿ ಮತ್ತು ಕಾಂತಿಯುತ ಚರ್ಮ ಪಡೆಯಬಹುದು.
ಬೀಟ್ ರೂಟ್ ಜ್ಯೂಸ್ ನಿತ್ಯವೂ ಕುಡಿದರೆ ಅದರಿಂದ ವಯಸ್ಸಾಗುವ ಲಕ್ಷಣಗಳನ್ನು ತಡೆಯಬಹುದಾಗಿದೆ. ಇನ್ನೂ ಇದರ ಬಗ್ಗೆ ಹೇಳುತ್ತಾ ಹೋದರೆ ಮಾತುಗಳೇ ಸಾಲದು ಅಷ್ಟೊಂದು ಲಾಭದಾಯಕ ಈ ಬೀಟ್ರೂಟ್. ಇದನ್ನು ಎಲ್ಲರೂ ಆತಂಕ ಭಯ ಇಲ್ಲದೇ ಸೇವನೆ ಮಾಡಬಹುದು. ಆದರೆ ಮಧುಮೇಹಿಗಳು ಮಿತವಾಗಿ ಸೇವನೆ ಮಾಡಿ. ಶುಭದಿನ.