ನಮಸ್ತೆ ಪ್ರಿಯ ಓದುಗರೇ, ಇಂದಿನ ಲೇಖನದಲ್ಲಿ ಹುರಿಗಡಲೆ ಅಥವಾ ಈ ಪುಟಾಣಿಯನ್ನು ಸೇವನೆ ಮಾಡುವುದರಿಂದ ಯಾವ ರೀತಿಯ ಲಾಭಗಳು ಆಗುತ್ತವೆ ಎನ್ನುವುದರ ಬಗ್ಗೆ ಒಂದಿಷ್ಟು ಮಾಹಿತಿಯನ್ನು ತಿಳಿದುಕೊಳ್ಳೋಣ. ಈ ಲೇಖನವನ್ನು ಸಂಪೂರ್ಣವಾಗಿ ಓದಿ. ಸ್ನೇಹಿತರೆ ಯಾವಾಗಲಾದರೂ ನಾವು ಟೈಂ ಪಾಸ್ಗಾಗಿ ಈ ಹುರಿಗಡಲೆ ಅಥವಾ ಪುಟಾಣಿ ಯನ್ನ ತಿನ್ನುತ್ತಾ ಇರುತ್ತೇವೆ. ಕೆಲವರು ಈ ಹುರಿಗಡಲೆ ಇಂದ ಕೂಡಲೇ ಗ್ಯಾಸ್ ಆಗುತ್ತದೆ ಎಂದು ಇದನ್ನು ಸೇವನೆ ಮಾಡದೆ ಹೋಗುತ್ತಾರೆ. ಆದ್ರೆ ದಿನಾಲೂ ನಾವು ಒಂದು ಮುಷ್ಠಿಯಷ್ಟು ಹುರಿಗಡಲೆ ತಿನ್ನುತ್ತಾ ಬಂದರೆ ನಮ್ಮ ದೇಹದಲ್ಲಿ ನಾವು ಅನೇಕ ರೀತಿಯ ಬದಲಾವಣೆಯನ್ನು ಕಾಣಬಹುದು. ಹೌದು ಸ್ನೇಹಿತರೆ, ಈ ಹುರುಗಡಲೆಯಲ್ಲಿ ಕ್ಯಾಲ್ಸಿಯಂ ಕಾರ್ಬೊನೇಟ್, ಕಬ್ಬಿಣ ಜೀವಸತ್ವಗಳು ಹಾಗೂ ಫೈಬರ್ ಅಂಶ ಸಮೃದ್ಧವಾಗಿದೆ.

 

ಈ ಕಾರಣದಿಂದ ಇವುಗಳನ್ನು ಸೇವನೆ ಮಾಡುವುದರಿಂದ ನಮಗೆ ಎಷ್ಟೇ ನಿಶ್ಯಕ್ತಿ ಇದ್ರೂ ಕೂಡ ತ್ವರಿತವಾಗಿ ಶಕ್ತಿ ನೀಡುತ್ತದೆ. ಸ್ನೇಹಿತರೆ ಒಂದು ಕಪ್ ಹುರಿಗಡಲೆ ಯಲ್ಲಿ 15 ಗ್ರಾಂ ಅಷ್ಟು ಪ್ರೊಟೀನ್ ಇರುತ್ತದೆ ಮತ್ತು 13 ಗ್ರಾಂ ಅಷ್ಟು ಫೈಬರ್ ಇರುತ್ತದೆ. ಹಾಗಾಗಿ ಇದು ನಮ್ಮ ಆರೋಗ್ಯಕ್ಕೆ ತುಂಬಾನೆ ಮುಖ್ಯವಾಗುತ್ತದೆ. ಇದನ್ನು ಸೇವನೆ ಮಾಡುವುದರಿಂದ ನಮ್ಮ ದೇಹಕ್ಕೆ ಅಗತ್ಯವಾದ ಶಕ್ತಿಯನ್ನು ಒದಗಿಸುತ್ತದೆ. ಇನ್ನೂ ಸಕ್ಕರೆ ಕಾಯಿಲೆ ಇದ್ದವರು ಈ ಹುರಿಗಡಲೆ ಯನ್ನ ಸೇವನೆ ಮಾಡಬಹುದು. ಸಾಮಾನ್ಯವಾಗಿ ಸಕ್ಕರೆ ಕಾಯಿಲೆ ಇದ್ದವ ರೀಗೆ ತುಂಬಾ ಹಸಿವು ಆಗುತ್ತಾ ಇರುತ್ತದೆ, ಅಂಥವರು ಒಂದು ಹಿಡಿ ಹುರಿಗಡಲೆ ತಿನ್ನುವುದರಿಂದ ಅವರ ಹಸಿವು ಕಡಿಮೆ ಆಗುತ್ತದೆ ಮತ್ತು ಇದರಲ್ಲಿರುವ ಪೌಷ್ಟಿಕಾಂಶಗಳು ರಕ್ತದಲ್ಲಿರುವ ಸಕ್ಕರೆ ಮಟ್ಟವನ್ನು ನಿಯತ್ರಿಸುತ್ತದೆ. ಇನ್ನೂ ನಿಯಮಿತವಾಗಿ ಈ ಹುರಿಗಡಲೆ ಸೇವನೆ ಮಾಡುವುದರಿಂದ ನಮ್ಮ ಜೀರ್ಣಾಂಗ ವ್ಯವಸ್ಥೆ ಬಲ ಗೊಳ್ಳುತ್ತದೆ. ಇದ್ರಲ್ಲಿ ಇರುವ ಉತ್ತಮವಾದ ಫೈಬರ್ ಅಂಶ ನಮ್ಮ ಹೊಟ್ಟೆಯ ಎಲ್ಲಾ ಸಮಸ್ಯೆಗಳಿಗೆ ಪರಿಹಾರ ಸಿಗುತ್ತದೆ. ಮಲಬದ್ದತೆ ಸಮಸ್ಯೆ ನಿವಾರಣೆ ಆಗುತ್ತದೆ. ಇನ್ನೂ ಯಾರು ಡಯೆಟ್ ಅಥವ ವೇಟ್ ಲಾಸ್ ಮಾಡಲು ಇಚ್ಚಿಸುತ್ತರೋ ಅಂಥವರಿಗೆ ಇದು ತುಂಬಾ ಒಳ್ಳೆಯದು ಎಂದು ಹೇಳಲಾಗುತ್ತದೆ.

 

ಯಾಕಂದ್ರೆ ಇದನ್ನು ಸೇವನೆ ಮಾಡುವುದರಿಂದ ಹೊಟ್ಟೆಯ ಹಸಿವು ಕಡಿಮೆ ಆಗುತ್ತದೆ. ಹೊಟ್ಟೆ ಹಸಿವು ಆದಾಗ ಇದನ್ನು ಒಂದು ಮುಷ್ಟಿಯಾಷ್ಟು ಸೇವನೆ ಮಾಡುವುದರಿಂದ ಹೊಟ್ಟೆ ತುಂಬಿದ ಹಾಗಾಗುತ್ತೆ. ಇದನ್ನು ನಿಯಮಿತವಾಗಿ ಸೇವನೆ ಮಾಡುವುದರಿಂದ ನಮ್ಮ ಮೂಳೆಗಳು ಬಲಿಷ್ಠವಾಗಿ ಸದೃಢವಾಗಿ ಬೆಳೆಯಲು ಸಾಧ್ಯವಾಗುತ್ತದೆ. ಯಾಕೆಂದರೆ ಇದರಲ್ಲಿ ಉತ್ತಮವಾದ ಕ್ಯಾಲ್ಸಿಯಂ ಮತ್ತು ಕಬ್ಬಿಣದ ಅಂಶ ಇರುವುದರಿಂದ ಇದನ್ನು ನಿಯಮಿತವಾಗಿ ಸೇವನೆ ಮಾಡುವುದರಿಂದ ನಮ್ಮ ಮೂಳೆಯ ಆರೋಗ್ಯ ಉತ್ತಮವಾಗಿರುತ್ತದೆ. ಯಾರಿಗೆ ರಕ್ತಹೀನತೆ ಸಮಸ್ಯೆ ಇರುತ್ತದೆ ಅಂಥವರಿಗೆ ಇದು ಉತ್ತಮವಾದ ಫುಡ್ ಎಂದು ಹೇಳಲಾಗುತ್ತದೆ. ಯಾಕೆಂದರೆ ಇದ್ರಲ್ಲಿ ಇರುವ ಕಬ್ಬಿಣದ ಅಂಶ ನಮ್ಮ ದೇಹದಲ್ಲಿ ರಕ್ತಹೀನತೆ ಉಂಟಾಗಲು ಬಿಡುವುದಿಲ್ಲ. ಸೋ ನೊಡಿದ್ರಲ್ವ ಸ್ನೇಹಿತರೆ ಹುರಿಗಡಲೆ ನಮ್ಮ ದೇಹದ ಶಕ್ತಿ ಜಾಸ್ತಿ ಮಾಡುತ್ತದೆ ಎಂದು. ಈ ಮಾಹಿತಿ ನಿಮಗೆ ಪ್ರಯೋಜನಕಾರಿ ಎನ್ನಿಸಿದರೆ ದಯವಿಟ್ಟು ಲೈಕ್ ಮಾಡಿ ಶೇರ್ ಮಾಡಿ. ಶುಭದಿನ.

Leave a Reply

Your email address will not be published. Required fields are marked *