ನಮಸ್ತೇ ಆತ್ಮೀಯ ಪ್ರಿಯ ಓದುಗರೇ, ಮಧುಮೇಹಿಗಳಿಗೆ ಆಹಾರವನ್ನು ಸರಿಯಾದ ಕ್ರಮದಲ್ಲಿ ತೆಗೆದುಕೊಳ್ಳುವುದು ಒಂದು ದೊಡ್ಡ ಸವಾಲು ಆಗಿದೆ. ಆಹಾರದಲ್ಲಿ ಇರುವ ಸಕ್ಕರೆಯ ಮಟ್ಟವು ಹೆಚ್ಚುತ್ತದೆ ಎಂಬ ಚಿಂತೆ ಇರುತ್ತದೆ. ಹೀಗಾಗಿ ಮಧುಮೇಹಿಗಳು ಆಹಾರವನ್ನು ಜಾಗೃತೆಯಿಂದ ತೆಗೆದುಕೊಳ್ಳಲು ಹೇಳುತ್ತಾರೆ. ಅದರಲ್ಲೂ ವಿಶೇಷವಾಗಿ ತರಕಾರಿ ಹಣ್ಣುಗಳಲ್ಲಿ ಸಕ್ಕರೆಯ ಅಂಶವಿದೆಯೋ ಇಲ್ಲವೋ ಎನ್ನುವುದನ್ನು ಮುಖ್ಯವಾಗಿ ಪರಿಶೀಲನೆ ಮಾಡಿ ತೆಗೆದುಕೊಳ್ಳಬೇಕು.
ದಿನಕ್ಕೊಂದು ಸೇಬು ತಿಂದರೆ ವೈದ್ಯರಿಂದ ದೂರವಿರಬಹುದು ಅನ್ನುವ ಗಾದೆ ಮಾತು ನೀವು ಕೇಳಿರಬಹುದು. ಹಾಗಾದರೆ ಮಧುಮೇಹಿಗಳು ಸೇಬು ತಿನ್ನಬಹುದೇ ಅಥವಾ ಇಲ್ಲವೇ ಅಂತ ತಿಳಿಯೋಣ ಬನ್ನಿ. ಸೇಬು ಬಹಳ ಉತ್ತಮ ಎಂದು ವೈದ್ಯರು ಹೇಳುತ್ತಾರೆ. ಏಕೆಂದರೆ ಇದರಲ್ಲಿ ಇರುವ ಕಾರ್ಬೋಹೈಡ್ರೇಟ್ ಗಳು ಕಡಿಮೆ ಇದ್ದರೂ ಅವುಗಳಲ್ಲಿ ಇರುವ ಫೈಬರ್ ಅಂಶವು ನಿಮಗೆ ವಿಶೇಷವಾದ ಲಾಭಗಳನ್ನು ನೀಡುತ್ತದೆ. ಸೇಬುವಿನಲ್ಲಿ ಇರುವ ಫ್ರಕ್ಟೋಸ್ ಅಂಶವು ದೇಹದಲ್ಲಿ ಸಕ್ಕರೆಯ ಮಟ್ಟವು ಹೆಚ್ಚು ಆಗದಂತೆ ತಡೆ ಹಿಡಿಯುತ್ತದೆ.
ಮಧುಮೇಹಿಗಳು ದಿನಕ್ಕೆ ಒಂದು ಸೇಬು ತಿನ್ನಬಹುದು.ಸೇಬು ಹಣ್ಣಿನ ಹೋಳು ಮಾಡಿಕೊಂಡು ಸೇವನೆ ಮಾಡಬಹುದು. ಇನ್ನೂ ಇದರ ಪೇಸ್ಟ್ ಮಾಡಿಕೊಂಡು ಕುಡಿದರೆ ಇದರಲ್ಲಿರುವ ಫೈಬರ್ ಅಂಶವು ಹೆಚ್ಚು ಇರುತ್ತದೆ.ಜೀರ್ಣ ಕ್ರಿಯೆ ಅನ್ನು ಉತ್ತೇಜಿಸುತ್ತದೆ. ಹಾಗೂ ಫೈಬರ್ ಅಂಶವನ್ನು ಹೆಚ್ಚಿಸಿ ಜೀರ್ಣ ಕ್ರಿಯೆ ಗೆ ತೊಂದರೆ ಆಗದಂತೆ ನೋಡಿಕೊಳ್ಳುತ್ತದೆ. ಸೇಬು ಹಣ್ಣಿನಲ್ಲಿ ಇರುವ ಫ್ರಕ್ಟೋಸ್ ಅಂಶವು ಸಕ್ಕರೆಯ ಮಟ್ಟವನ್ನು ತಗ್ಗಿಸುತ್ತದೆ. ಹಾಗೂ ಪ್ರತಿರೋಧವನ್ನು ಕಡಿಮೆ ಮಾಡುತ್ತದೆ.
ಹೀಗಾಗಿ ಸೇಬು ಮಧುಮೇಹಿ ಗಳಿಗೆ ಒಳ್ಳೆಯದು ಎಂದು ಹೇಳಲಾಗುತ್ತದೆ. ಜೀವಕೋಶಗಳಲ್ಲಿ ಸಕ್ಕರೆಯ ಅಂಶವು ಸರಿಯಾಗಿ ಹೀರಿಕೊಳ್ಳುವ ಹಾಗೆ ಮಾಡುತ್ತದೆ. ಇನ್ನೂ ಸೇಬು ಅನ್ನು ಹಾಲಿನ ಜೊತೆಗೆ ಸೇವನೆ ಮಾಡುವುದು ಪ್ರಯೋಜನಕಾರಿ ಆಗಿದೆ.ಸೇಬಿನಲ್ಲಿ ಸಸ್ಯಜನ್ಯವಾಗಿರುವಂತಹ ನಾರಿನಾಂಶವಿದೆ ಮತ್ತು ತುಂಬಾ ಕಡಿಮೆ ಪ್ರಮಾಣದ ಕ್ಯಾಲರಿ ಇದೆ. ಇದರಿಂದ ತೂಕ ಕಳೆದುಕೊಳ್ಳಲು ಇದು ತುಂಬಾ ಸಹಕಾರಿ ಆಗಿರುವುದು. ಸೇಬಿನಲ್ಲಿ ಆಂಟಿ ಆಕ್ಸಿಡೆಂಟುಗಳು ಸಮೃದ್ದವಾಗಿದ್ದು ಅಸ್ತಮಾ ಕಡಿಮೆಗೊಳಿಸುವಲ್ಲಿ ತಮ್ಮ ನೆರವನ್ನು ನೀಡುತ್ತವೆ.
ಖಾಲಿ ಹೊಟ್ಟೆಯಲ್ಲಿ ಸೇಬು ಸೇವನೆ ಮಾಡಬೇಡಿ. ಸೇಬು ತಿನ್ನುವುದರಿಂದ ಹೊಟ್ಟೆ ಹೆಚ್ಚು ತುಂಬಿದ ಹಾಗೆ ಅನ್ನಿಸುತ್ತದೆ. ಸೇಬು ಹಣ್ಣಿನಲ್ಲಿ ಹೆಚ್ಚು ಆಂಟಿ ಆಕ್ಸಿಡೆಂಟುಗಳು ಇದ್ದು, ಇದು ನಿಮ್ಮ ಚರ್ಮಕ್ಕೆ ಕಾಂತಿಯುತ ಹೊಳಪನ್ನು ನೀಡಲು ಸಹಾಯ ಮಾಡುತ್ತದೆ. ಅಲ್ಲದೇ ಸ್ತನ ಕ್ಯಾನ್ಸರ್, ಬಾಯಿಯ ಹುಣ್ಣ ಮತ್ತು ಅನ್ನನಾಳ ಸೇರಿದಂತೆ ಕ್ಯಾನ್ಸರ್ ಬರುವ ಅಪಾಯವನ್ನು ತಡೆಯುತ್ತದೆ.
ರಕ್ತದೊತ್ತಡ ಮತ್ತು ಅಧಿಕ ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡುತ್ತದೆ. ಸೇಬು ಹಣ್ಣಿನ ಸೇವನೆಯಿಂದ ಹೃದಯ ಸಂಬಂಧಿ ಕಾಯಿಲೆಗಳ ಅಪಾಯದ ಕಡಿಮೆ ಎಂದು ಅನೇಕ ಅಧ್ಯಯನಗಳು ತೋರಿಸಿವೆ. ಸೇಬಿನಲ್ಲಿರುವ ಫೈಬರ್ ರಕ್ತನಾಳಗಳಲ್ಲಿ ಕೊಲೆಸ್ಟ್ರಾಲ್ ಸಂಗ್ರಹವಾಗುವುದನ್ನು ತಡೆಯುತ್ತದೆ.
ಸೇಬು ರಕ್ತದಲ್ಲಿ ಕೆಟ್ಟ ಕೊಲೆಸ್ಟ್ರಾಲ್ ತಗ್ಗಿಸಿ ಒಳ್ಳೆಯ ಕೊಲೆಸ್ಟ್ರಾಲ್ ಹೆಚ್ಚಿಸುವ ಮೂಲಕ ಹೃದಯದ ಕಾಯಿಲೆ ಆವರಿಸುವ ಸಾಧ್ಯತೆಯನ್ನು ತಗ್ಗಿಸುತ್ತದೆ. ಅಲ್ಲದೇ ಸೇಬಿನಲ್ಲಿ ಉತ್ತಮ ಪ್ರಮಾಣದ ಕರಗುವ ನಾರು ಮತ್ತು ಪಾಲಿಫೆನಾಲ್ ಅಂಟಿ ಆಕ್ಸಿಡೆಂಟುಗಳಿದ್ದು ಹೃದಯದ ಆರೋಗ್ಯ ವೃದ್ದಿಸುತ್ತದೆ ಹಾಗೂ ರಕ್ತದ ಒತ್ತಡವನ್ನು ಕಡಿಮೆಗೊಳಿಸುತ್ತದೆ. ಒಂದು ಅಧ್ಯಯನದ ಪ್ರಕಾರ ಸೇಬಿನ ಸೇವನೆಯಿಂದ ಹೃದಯದ ಸ್ತಂಭನದ ಸಾಧ್ಯತೆ ತಗ್ಗುತ್ತದೆ.