ನಮಸ್ತೆ ಪ್ರಿಯ ಓದುಗರೇ, ಇಂದಿನ ಲೇಖನದಲ್ಲಿ ಸಕ್ಕರೆ ಖಾಯಿಲೆಯನ್ನು ಯಾವ ರೀತಿ ನಿಯಂತ್ರಣ ಮಾಡಬಹುದು ಎಂದು ಒಂದಿಷ್ಟು ಮಾಹಿತಿಯನ್ನು ತಿಳಿದುಕೊಳ್ಳೋಣ. ಸಕ್ಕರೆ ಕಾಯಿಲೆ ನಮ್ಮಲ್ಲಿ ಬಹಳಷ್ಟು ಜನರಿಗೆ ಕಾಡುವ ಸಮಸ್ಯೆ, ಈ ಸಮಸ್ಯೆ ಮಕ್ಕಳಿಂದ ಹಿಡಿದು ವೃದ್ಧರ ವರೆಗೂ ಈ ಖಾಯಿಲೆ ಕಾಡುತ್ತೇ. ಇನ್ನೂ ಸಕ್ಕರೆ ತಿನ್ನುವುದರಿಂದ ಈ ಕಾಯಿಲೆ ಬರುತ್ತೆ ಎನ್ನೋದು ನಮ್ಮಲ್ಲಿ ಹಲವರ ಪೂರ್ವ ಗ್ರಹ. ಆದ್ರೆ ಸಕ್ಕರೆ ತಿನ್ನುವುದು ಸಕ್ಕರೆ ಖಾಯಿಲೆಗೆ ಯಾವುದೇ ರೀತಿಯ ಸಂಬಂಧ ಇಲ್ಲ ಎನ್ನುವುದು ವಾಸ್ತವ ಸತ್ಯ. ನಮ್ಮ ದೇಹದ ಮೇದೋಜೀರಕ ಗ್ರಂಥಿ ಇಂದ ಇನ್ಸುಲಿನ್ ಉತ್ಪಾದನೆ ಕಡಿಮೆ ಆದಾಗ ಅಥವಾ ಉತ್ಪಾದನೆ ಆದ ಇನ್ಸುಲಿನ್ ಬಳಕೆ ಆಗದೆಯೇ ಉಳಿದಂತಹ ಸಂದರ್ಭದಲ್ಲಿ ಸಕ್ಕರೆ ಕಾಯಿಲೆ ಬರುತ್ತೆ ಎನ್ನುವುದು ತಜ್ಞರ ಅಭಿಪ್ರಾಯ. ಈ ಕಾಯಿಲೆಯನ್ನು ಸಂಪೂರ್ಣವಾಗಿ ಗುಣಪಡಿಸಲು ಸಾಧ್ಯ ಇಲ್ಲವಾದರೂ, ಸೂಕ್ತ ಆಹಾರ ಕ್ರಮ, ಆಹಾರ ಪದ್ಧತಿ, ಜೀವನ ಶೈಲಿ, ವೈದ್ಯರು ನೀಡಿದ ಸಲಹೆಗಳನ್ನು ಅನುಸರಿಸುವುದರಿಂದ ಈ ಖಾಯಿಲೆಯನ್ನು ನಿಯಂತ್ರಣದಲ್ಲಿ ಇಟ್ಟುಕೊಳ್ಳುವುದು ಸಾಧ್ಯ.

ಇನ್ನೂ ಹಲವು ಬಾರಿ ನಮ್ಮ ಆರ್ಥಿಕ ಪರಿಸ್ಥಿತಿ ಇದಕ್ಕೆ ಅಗತ್ಯವಾದ ಔಷಧಗಳನ್ನು ಕೊಳ್ಳುವುದಕ್ಕೆ ಅನುಕೂಲ ಒದಗಿಸುವುದಿಲ್ಲ. ಆದ್ರೆ ಕೆಲವು ಮನೆ ಮದ್ದುಗಳ ಮೂಲಕವೂ ನಾವು ಶುಗರ್ ಅನ್ನು ಕಂಟ್ರೋಲ್ ಅಲ್ಲಿ ಇರಿಸಿಕೊಳ್ಳಬಹುದು. ತುಳಸಿ ಎಲೆಗಳಲ್ಲಿ ಇರುವ ಆಂಟಿ ಆಕ್ಸಿಡೆಂಟ್ ಮತ್ತು ತೈಲದ ಗುಣಗಳಿವೆ, ಇದರ ಸೇವನೆಯಿಂದ ದೇಹದಲ್ಲಿ ಯೂಜೇನಾಲ್, ಮೀಥೈಲ್ ಯೂಜೆನಾಲ್ ಮತ್ತು ಕ್ಯರಿಯೋಫೈಲೇನೋ ಎಂಬ ಮೂರು ರಾಸಾಯನಿಕಗಳು ಉತ್ಪತ್ತಿ ಆಗುತ್ತವೆ. ಈ ಮೂರು ರಾಸಾಯನಿಕಗಳು ದೇಹಕ್ಕೆ ಅಗತ್ಯವಾದ ಇನ್ಸುಲಿನ್ ಅನ್ನು ಬಿಡುಗಡೆಗೆ ಮೇದೋಜೀರಕ ಗ್ರಂಥಿಗೆ ಸಹಾಯ ಮಾಡುತ್ತೆ. ಹಾಗೆ ಅಕ್ಸಿದೇಟಿವ್ ಸ್ಟ್ರೆಸ್ ಅನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಇದನ್ನು ಹೇಗೆ ಉಪಯೋಗಿಸುವುದು ಅಂದ್ರಾ? ಬೆಳಿಗ್ಗೆ ಎದ್ದ ಬಳಿಕ ಖಾಲಿ ಹೊಟ್ಟೆಯಲ್ಲಿ ಮೂರರಿಂದ ನಾಲ್ಕು ಚೆನ್ನಾಗಿ ಬಲಿತ ಎಲೆಗಳನ್ನು ಸೇವಿಸಬೇಕು. ಬಳಿಕ ಮುಕ್ಕಾಲು ಗಂಟೆ ಏನನ್ನೂ ಸೇವಿಸಬಾರದು. ಬದಲಿಗೆ ಒಂದು ದೊಡ್ಡ ಚಮಚದಷ್ಟು ತುಳಸಿ ರಸವನ್ನು ಸೇವಿಸಬೇಕು. ಹಾಗೆ ದಾಲ್ಚಿನ್ನಿ ಸೇವನೆಯಿಂದ ಕಡಿಮೆ ಇರುವ ರಕ್ತದೊತ್ತಡ ಮತ್ತು ಇನ್ಸುಲಿನ್ ಪ್ರಮಾಣದಲ್ಲಿ ಸುಧಾರಣೆ ಕಂಡು ಬರುತ್ತದೆ. ಜೊತೆಗೆ ತೂಕ ಏರುವುದನ್ನು ನಿಯಂತ್ರಿಸಿ ಹೃದಯಾಘಾತ ದಂತಹ ಸಂಭವಗಳಿಂದ ಕಾಪಾಡುತ್ತದೆ.

ನಿಮ್ಮ ನಿತ್ಯದ ಊಟದ್ದಲ್ಲಿ ಒಂದು ಗ್ರಾಂ ಅಷ್ಟು ದಾಲ್ಚಿನ್ನಿ ಪುಡಿಯನ್ನು ಸೇರಿಸಿ ಸೇವಿಸಿ, ಒಂದು ತಿಂಗಳ ಕಾಲ ದಾಲ್ಚಿನ್ನಿ ಪುಡಿ ಸೇವನೆಯಿಂದ ರಕ್ತದಲ್ಲಿನ ಸಕ್ಕರೆ ಅಂಶ ಶೀಗ್ರ ಹತೋಟಿಗೆ ಬರುತ್ತದೆ. ಇನ್ನೂ ಗ್ರೀನ್ ಟೀ ಸೇವನೆಯಿಂದ ಮಧುಮೇಹ ನಿಯಂತ್ರಣ ಮಾಡಬಹುದು. ಇದರಲ್ಲಿರುವ ಪಾಲಿ ಫಿನಲ್ ಅಂಶ ದೇಹದಲ್ಲಿನ ಸಕ್ಕರೆ ಅಂಶವನ್ನು ಬಳಕೆ ಮಾಡಿಕೊಳ್ಳುವುದಕ್ಕೆ ಸಹಾಯ ಮಾಡುತ್ತದೆ. ಬೆಳಗಿನ ಉಪಹಾರಕ್ಕೆ ಅರ್ಧ ತಾಸಿನ ಮೊದಲು ಗ್ರೀನ್ ಟೀ ಸೇವಿಸುವುದರಿಂದ ಮಧುಮೇಹ ನಿಯಂತ್ರಣ ಮಾಡಬಹುದು. ಕಹಿ ಬೇವು ದೇಹದ ಆರೋಗ್ಯವನ್ನು ವೃದ್ಧಿಸುತ್ತದೆ, ಇದು ಇನ್ಸುಲಿನ್ ಬಳಕೆಯನ್ನು ಹೆಚ್ಚಿಸುವುದಕ್ಕೆ ಸಹಾಯ ಮಾಡುತ್ತದೆ. ಇದು ಮಧುಮೇಹ ನಿಯಂತ್ರಣ ಮಾಡುವುದರ ಜೊತೆಗೆ ನರಗಳ ಸೆಳೆತವನ್ನು ಸಹ ಶಮನ ಮಾಡುವಲ್ಲಿ ಸಹಕಾರಿಯಾಗಿದೆ. ಜೊತೆಗೆ ಮಧುಮೇಹದ ಹೈಪೋ ಗ್ಲುಕೇಮಿಕ್ ಔಷಧದ ಅವಲಂಬನೆಯನ್ನು ಸಹ ಕಡಿಮೆ ಮಾಡುತ್ತದೆ. ಕಹಿ ಬೇವಿನ ಎಲೆ ಮತ್ತು ಕಾಂಡವನ್ನು ನುಣ್ಣಗೆ ಪುಡಿ ಅರೆದು ಅದ್ರ ರಸವನ್ನು ಒಂದು ಲೋಟ ನೀರಿಗೆ ಸೇರಿಸಿ ಬೆಳಿಗ್ಗೆ ಖಾಲಿ ಹೊಟ್ಟೆಗೆ ಸೇವಿಸಿ. ಆ ಬಳಿಕ ಸುಮಾರು 45 ನಿಮಿಷಗಳ ಕಾಲ ಯಾವುದೇ ಆಹಾರ ಸೇವನೆ ಬೇಡ. ಈ ರೀತಿ ಪ್ರತಿ ನಿತ್ಯ ಮಾಡುವುದರಿಂದ ಮಧುಮೇಹ ನಿಯಂತ್ರಣ ಸಾಧ್ಯ. ನೋಡಿದ್ರಲ್ವಾ ಸ್ನೇಹಿತರೆ ಯಾವ ರೀತಿ ಮಧುಮೇಹ ನಿಯಂತ್ರಣ ಮಾಡಬಹುದು ಎಂದು. ಹಾಗೆ ಅದಕ್ಕೆ ಇರುವ ಮನೆಮದ್ದುಗಳು ಯಾವುದು ಎಂದು. ಈ ಮಾಹಿತಿ ನಿಮಗೆ ಪ್ರಯೋಜನಕಾರಿ ಎನ್ನಿಸಿದರೆ ದಯವಿಟ್ಟು ಲೈಕ್ ಮಾಡಿ ಶೇರ್ ಮಾಡಿ. ಶುಭದಿನ.

Leave a Reply

Your email address will not be published. Required fields are marked *