ನಮಸ್ಕಾರ ವೀಕ್ಷಕರೆ ಇವತ್ತಿನ ಮಾಹಿತಿಯಲ್ಲಿ ನಮ್ಮ ಶರೀರಕ್ಕೆ ಶಕ್ತಿಯನ್ನು ನೀಡುವಂತಹ ಒಂದು ಉತ್ತಮವಾದಂತಹ ಪಾನಕದ ಬಗ್ಗೆ ಹೇಳಿಕೊಡುತ್ತೇವೆ. ನೀವು ಕೂಡ ನಿಶಕ್ತಿ ಸುಸ್ತು ಈ ರೀತಿಯ ಸಮಸ್ಯೆ ಇದ್ದರೆ ಈ ಪಾನಕ ನಿಮಗೆ ಒಳ್ಳೆಯ ಶಕ್ತಿಯನ್ನು ಕೊಡುತ್ತದೆ. ವೀಕ್ಷಕರೆ ಸಾಮಾನ್ಯವಾಗಿ ನಮ್ಮ ಮನೆಯಲ್ಲಿ ಹಲವಾರು ರೀತಿಯ ಅಡುಗೆಗಳನ್ನು ಮಾಡುತ್ತೇವೆ. ಆದರೆ ಅವುಗಳನ್ನು ಸೇವನೆ ಮಾಡುವುದರಿಂದ ನಮ್ಮ ಶ್ರೀರಕ್ಕೆ ಸಂಪೂರ್ಣವಾದ ಲಾಭ ಸಿಗುವುದಿಲ್ಲ ಹಾಗಾಗಿ ನಾವು ಕೆಲವೊಮ್ಮೆ ಲಿಕ್ವಿಡ್ ಫುಡ್ ಪಾನಕಗಳು ಇದನ್ನು ಕೆಲವೊಮ್ಮೆ ಸೇವನೆ ಮಾಡಿ ನಮಗೆ ಆಗಿರುವಂತಹ ಸುಸ್ತು ನಿಶಕ್ತಿ ಕಡಿಮೆ ಮಾಡಲು. ಹಾಗಾದರೆ ಈ ಸುಸ್ತು ನಿಶಕ್ತಿ ಕಡಿಮೆ ಮಾಡಿಕೊಳ್ಳುವುದು ಉತ್ತಮವಾದ ಪಾನಕ ಯಾವುದು ಅಂತ ನೋಡುವುದಾದರೆ ಅದು ಬೆಲ್ಲದ ಪಾನಕ.
ಹೌದು ವೀಕ್ಷಕರೇ ಮನೆಯಲ್ಲಿ ಇರುವಂತಹ ಬೆಲ್ಲದ ಪಾನಕವನ್ನು ಮಾಡಿ ಸೇವನೆ ಮಾಡುವುದರಿಂದ ನಮ್ಮ ಶರೀರಕ್ಕೆ ಸಾಕಷ್ಟು ಲಾಭಗಳು ಸಿಗುತ್ತವೆ ಬೇಸಿಗೆ ಕಾಲ ಶುರುವಾಯಿತು ಅಂದರೆ ನಾವು ತಂಪು ಪಾನೀಯ ಮತ್ತು ಮೊರೆ ಹೋಗುತ್ತೇವೆ. ಅಂಗಡಿ ಮತ್ತು ಬೇಕರಿಯಲ್ಲಿ ಸಿಗುವಂತಹ ಸಾಫ್ಟ್ವೇರ್ ಕುಡಿಯುವ ಬದಲು ಮನೆಯಲ್ಲಿ ಮೊಸರು ಲಸ್ಸಿ ಮಜ್ಜಿಗೆ ಅಥವಾ ಬೆಲ್ಲದ ಪಾನಕ ಅಷ್ಟೇ ಅಲ್ಲದೆ ಎಳನೀರು ಮುಂತಾದವುಗಳನ್ನು ಸೇವನೆ ಮಾಡುವುದು ಬಹಳ ಉತ್ತಮ.
ತಜ್ಞರ ಪ್ರಕಾರ ಬೆಲ್ಲದ ಸೇವನೆಯಿಂದ ನಮ್ಮ ದೇಹ ಕಲ್ಮಶಗಳಿಂದ ರಕ್ಷಣೆ ಪಡೆಯುತ್ತದೆ ಹಾಗೂ ಶೀತ ಕೆಮ್ಮುಗಳಿಂದ ರಕ್ಷಣೆ ಒದಗಿಸುತ್ತದೆ. ಅಲ್ಲದೇ ದೇಹದಲ್ಲಿ ಕಬ್ಬಿಣದ ಅಂಶವನ್ನು ಸಮತೋಲನದಲ್ಲಿ ಇರಿಸುತ್ತದೆ. ಮುಖ್ಯವಾಗಿ ಸಕ್ಕರೆಯಂತೆ ಇದು ರಕ್ತದಲ್ಲಿ ಸಕ್ಕರೆಯ ಮಟ್ಟವನ್ನು ಥಟ್ಟನೇ ಏರಿಸದ ಕಾರಣ ಮಿತ ಪ್ರಮಾಣದಲ್ಲಿ ಮಧುಮೇಹಿಗಳಿಗೆ ಹಾಗೂ ಅಧಿಕ ರಕ್ತದೊತ್ತಡ ಇರುವ ವ್ಯಕ್ತಿಗಳಿಗೂ ಸೂಕ್ತವಾಗಿದೆ. ಬೆಲ್ಲದ ಸೇವನೆಯಿಂದ ದೇಹದ ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ.
ಬೆಲ್ಲ ಜೀರ್ಣಕ್ರಿಯೆಗೆ ಬಹಳ ಉಪಯೋಗಕಾರಿ. ನಿಯಮಿತವಾದ ಬೆಲ್ಲದ ಸೇವನೆ ಸಂಧಿನೋವನ್ನು ಕಡಿಮೆ ಮಾಡುತ್ತದೆ. ಮಂಡಿ ನೋವು, ಕೈಕಾಲು ನೋವು ಇವುಗಳನ್ನು ಕಮ್ಮಿ ಮಾಡುವಲ್ಲಿ ಬೆಲ್ಲ ಪ್ರಯೋಜನಕಾರಿಯಾಗಿದೆ. ಇದು ಜೀರ್ಣಕ್ರಿಯೆಯ ಕ್ರಮವನ್ನು ಸುಧಾರಿಸುತ್ತದೆ ಹಾಗಾಗಿ ಊಟದ ನಂತರ ಚಿಕ್ಕ ಬೆಲ್ಲದ ತುಂಡನ್ನು ಸೇವಿಸಿದರೆ ನಮ್ಮ ಜೀರ್ಣಕ್ರಿಯೆ ಬಹಳ ಸುಲಭವಾಗಿ ನಡೆಯುತ್ತದೆ.
ಮುಟ್ಟಿನ ಸಮಯದಲ್ಲಿ ಅಧಿಕ ನೋವು ಕಾಣಿಸಿದರೆ ಮಾತ್ರೆ ತೆಗೆದುಕೊಳ್ಳುವ ಬದಲು ಬೆಲ್ಲವನ್ನು ಸೇವಿಸುವುದರಿಂದ ನೋವು ಕಡಿಮೆಯಾಗುವುದು. ಬೆಲ್ಲ ನಮ್ಮ ರಕ್ತವನ್ನು ಶುದ್ಧಿಕರಿಸುವುದರಿಂದ ನಮಗೆ ನಮ್ಮ ಆರೋಗ್ಯದಲ್ಲಿ ಯಾವುದೇ ರೀತಿಯ ಅಪಾಯವಿರುವುದಿಲ್ಲ ಹಾಗೂ ನಾವು ಹಲವಾರು ರೋಗದಿಂದ ಪಾರಾಗಬಹುದು.