WhatsApp Group Join Now

ಸನ್ನಿ ಲಿಯೋನ್ ಎಂದಾಕ್ಷಣ ಎಲ್ಲರ ಮನಸಲ್ಲಿ ಬರೋದೆ ಅವಳು ನೀಲಿತಾರೆ ಅಂತ. ಹೌದು ಒಂದು ಕಾಲದಲ್ಲಿ ಸನ್ನಿ ನೀಲಿಚಿತ್ರಗಳಲ್ಲಿ ಗುರುತಿಸಿ ಕೊಂಡವರು. ನಂತರದಲ್ಲಿ ಅವರು ಬಾಲಿವುಡ್ ಗೆ ಲಗ್ಗೆ ಇಟ್ಟು,ಹಿಂದಿ ಚಿತ್ರೋದ್ಯಮದಲ್ಲಿ ತನ್ನದೆ ಆದ ಛಾಪನ್ನ ಮೂಡಿಸುತ್ತಾ ಬಂದಿರುವ ನಟಿ. ಪಡ್ಡೆ ಹುಡುಗರ ನಿದ್ದೆ ಕದ್ದ ಕನಸಿನ ರಾಣಿ.

ಸನ್ನಿ 13 ಮೇ 1981 ರಲ್ಲಿ ಕೆನಾಡದಲ್ಲಿ ಜನಿಸಿದರು.ಇವರಿಗೆ ಒಬ್ಬ ತಮ್ಮ ಕೂಡ ಇದ್ದಾನೆ. ತನ್ನ 16ನೇ ವಯಸ್ಸಿನಲ್ಲಿಯೆ ಕನ್ಯತ್ವನ್ನ ಕಳೆದು ಕೊಂಡ ಸನ್ನಿ ಲಿಯೋನ್,ನಂತರ ನೀಲಿಚಿತ್ರಗಳಲ್ಲಿ ತೊಡಗಿಸಿ ಕೊಂಡರು‌.ಈ ಕಾರಣದಿಂದ ಕುಟುಂಬದಿಂದ ಬೇರ್ಪಡ ಬೇಕಾಯಿತು. ನಂತರ ಡೇನಿಯಲ್ ವೆಬರ್ ರನ್ನು ಮದುವೆ ಆದ ಮೇಲೆ‌ ಸನ್ನಿ ಲಿಯೋನ್ ಗೆ ತನ್ನ ವೃತ್ತಿ ಬದುಕು ಕಷ್ಟ ವಾಗ ತೊಡಗಿದಾಗ,ಅವರು ಬಾಲಿವುಡ್ ಕಡೆ ಮುಖ ಮಾಡಿದ್ದು ಇಂದು ಇತಿಹಾಸ.

ಸನ್ನಿ ಕೇವಲ ಕಲಾವಿದೆ ಅಲ್ಲ,ಅವರಲ್ಲಿ ವಿಶಾಲವಾದ ಹೃದಯವಿದೆ.ಸನ್ನಿಗೆ ಮಕ್ಕಳನ್ನ ಕಂಡರೆ ತುಂಬಾ ಇಷ್ಟ.ಸದ್ಯ ಸನ್ನಿ ಬಾಡಿಗೆ ತಾಯಿಂದ ಅಶೇರ್ ಮತ್ತು ನೋವಾ ಎಂಬ ಎರಡು ಮಕ್ಕಳನ್ನ ಪಡೆದು ಹಾಗು ನಿಶಾ ಎಂಬ ಹೆಣ್ಣು ಮಗುವನ್ನು ದತ್ತು ಪಡೆದು ಸ್ವಂತ ಮಕ್ಕಳಂತೆ ಲಾಲನೆ ಪೋಷಣೆ ಮಾಡುತ್ತಿದ್ದಾರೆ. ಇದಲ್ಲದೆ ಸನ್ನಿ ಮುಂಬೈ ನಲ್ಲಿ ಶಿಕ್ಷಣ ವಂಚಿತ ಬಡ ಮಕ್ಕಳಿಗೆ ಶಾಲೆ ತೆರೆದಿದ್ದಾರೆ.

ಇಷ್ಟೆ ಅಲ್ಲದೆ ಅಮೆರಿಕನ್ ಕ್ಯಾನ್ಸರ್ ಸೊಸೈಟಿ ಜೊತೆಗೆ ಕೈ ಜೋಡಿಸಿ ಕ್ಯಾನ್ಸರ್ ರೋಗಿಗಳ ಚಿಕಿತ್ಸೆಗೆ ಕೋಟಿಗಟ್ಟಲೆ ಹಣವನ್ನ ವ್ಯಯಿಸುತ್ತಿದ್ದಾರೆ. ಇಡಿ ದೇಶ ಕೊರೊನದ ಕ್ರೂರತೆಗೆ ನಲುಗಿ ಹೋಗುತ್ತಿದೆ. ಅನೇಕರು ಜನರ ಸಂಕಷ್ಟಕ್ಕೆ ನೆರವಾಗುತೀದ್ದಾರೆ. ಇದರ ಬೆನ್ನಲ್ಲೆ ಸನ್ನಿ ಲಿಯೋನ್ “ದಿ ವಿಶ್ ಡಾಟ್ ಕಾಮ್” ಮೂಲಕ ಹಣವನ್ನ ಸಂಗ್ರಹಿಸಿ,ವಿಶ್ವ ಆರೋಗ್ಯ ಸಂಸ್ಥೆಗೆ ನೀಡಲು ಮುಂದಾಗಿದ್ದಾರೆ.

ಇಷ್ಟೇ ಅಲ್ಲದೆ ಸನ್ನಿಗೆ ಪ್ರಾಣಿಗಳೆಂದರೆ ತುಂಬಾ ಪ್ರೀತಿ,ಪೇಟ ಎನ್ನುವ ವಿಶ್ವ ಪ್ರಾಣಿ ದಯಾ ಸಂಗಸದೊಂದಿಗೆ ಕೈ ಜೋಡಿಸಿ,ಬೀದಿ ನಾಯಿಗಳನ್ನ ದತ್ತು ಪಡೆದುಕೊಳ್ಳಿ ಎನ್ನುವ ಅಭಿಯಾನ ಶುರು ಮಾಡಿ ಅದೆಷ್ಟೋ ಬೀದಿ ನಾಯಿಗಳಿಗೆ ಆಸರೆ ಆಗಿದ್ದಾರೆ. ಹಾಗೆ ಪ್ರಾಣಿ ಚರ್ಮದಿಂದ ಮಾಡಿದ ಫ್ಯಾಶನ್ ವಸ್ತುಗಳನ್ನ ವಿರೋಧಿಸಿ ಪೇಟ ಇಂಡಿಯಾ ಅಭಿಯಾನವನ್ನ ಶುರು ಮಾಡಿದ್ದಾರೆ.ಹೀಗೆ ಸನ್ನಿ ಲಿಯೋನ್ ಕಷ್ಟದಲ್ಲಿರುವವರಿಗೆ ಲೆಕ್ಕವೆ ಇಲ್ಲದಷ್ಟು ಸಹಾಯ ಹಸ್ತ ಚಾಚಿದ್ದಾರೆ. ಇಂದು ಸನ್ನಿ ತನ್ನ ಒಳ್ಳೆಯ ಕೆಲಸಗಳಿಂದ ಮತ್ತು ವಿಶಾಲ ಹೃದಯದಿಂದ ಜನರಿಗೆ ಹತ್ತಿರವಾಗಿದ್ದಾರೆ ಹಾಗು ಒಬ್ಬ ಮಾದರಿ ಮಹಿಳೆಯಾಗಿದ್ದಾರೆ. ಹುಟ್ಟು ಹಬ್ಬದ ಶುಭಾಶಯಗಳು ಸನ್ನಿ ಲಿಯೋನ್.

ಸೂಚನೆ: ನಾವು ಹಾಕುವ ಎಲ್ಲ ಮಾಹಿತಿಗಳು ನಮ್ಮ ಸ್ವಂತ ಅನುಭವದ ಮತ್ತು ನಮ್ಮ ಅನಿಸಿಕೆ ಅಭಿಪ್ರಾಯಗಳಲ್ಲ ಕೇವಲ ಸಂಗ್ರಹದ ಮಾಹಿತಿಗಳು ಮಾತ್ರ ಯಾವುದೇ ಭಿನ್ನಾಭಿಪ್ರಾಯಗಳ ವಿಚಾರಗಳಿಗೆ ನಾವು ಜವಾಬ್ದರರಲ್ಲ.

WhatsApp Group Join Now

Leave a Reply

Your email address will not be published. Required fields are marked *