ಈಗಂತೂ ಚಿಕ್ಕು ಅಥವಾ ಸಪೋಟ ಹಣ್ಣಿನ ಸೀಸನ್ ಅಂತಾನೇ ಹೇಳಬಹುದು ಹಣ್ಣಿನ ಮಾರ್ಕೆಟ್ ನಲ್ಲಿ ತಳ್ಳುವ ಗಾಡಿಗಳಲ್ಲಿ ಹೀಗೆ ಎಲ್ಲಿ ನೋಡಿದರೂ ಚಿಕ್ಕು ಹಣ್ಣು ನೋಡಲು ಸಿಗುತ್ತದೆ. ಮಕ್ಕಳಿಂದ ಹಿಡಿದು ವಯಸ್ಸಾದವರೆಗೂ ಈ ಹಣ್ಣನ್ನು ಇಷ್ಟ ಪಡುತ್ತಾರೆ. ಅಲ್ಲದೆ ಈ ಹಣ್ಣಿನಿಂದ ಮಾಡುವ ಜ್ಯೂಸ್ ಕೂಡ ಹೆಚ್ಚಿನವರಿಗೆ ಇಷ್ಟವಾಗುತ್ತದೆ. ಯಾಕೆಂದರೆ ಈ ಹಣ್ಣು ತುಂಬಾ ರುಚಿಕರ ಹಾಗೂ ಸಿಹಿ ಹೊಂದಿರುವುದು. ಇದರಿಂದಾಗಿ ಹೆಚ್ಚಿನವರಿಗೆ ಇದು ಇಷ್ಟವಾಗುತ್ತದೆ.

ಹಣ್ಣನ್ನು ಚಿಕ್ಕು ಸಪೋಟ ನೋ ಸ್ಪೇರ್ ಮತ್ತು ಸಪೋಟ ಎಂದು ಇತ್ಯಾದಿ ಹೆಸರುಗಳಿಂದ ಕರೆಯುತ್ತಾರೆ. ನಿಮಗೆ ಗೊತ್ತಿರಲಿ ಸಾಕಷ್ಟು ಜನರಿಗೆ ಗೊತ್ತಿಲ್ಲದಂತಹ ಆರೋಗ್ಯದ ಪ್ರಯೋಜನಗಳು ಈ ಹಣ್ಣಿನಲ್ಲಿ ಅಡಗಿವೆ. ಅದರಲ್ಲೂ ಮುಖ್ಯವಾಗಿ ದೇಹದಲ್ಲಿ ಕ್ಯಾನ್ಸರ್ ಜೀವಕೋಶಗಳ ಬೆಳವಣಿಗೆ ಹಾಗೂ ಸಂತತಿಯನ್ನು ಸಪೋಟ ಹಣ್ಣು ತಡೆಯುತ್ತದೆ.

ಹೀಗಾಗಿ ನಮ್ಮ ದೇಹದ ಯಾವುದೇ ಭಾಗದಲ್ಲಿ ಕ್ಯಾನ್ಸರ್ ಗಂಟುಗಳು ಉಂಟಾಗುವ ಸಾಧ್ಯತೆ ತೀರಾ ಕಡಿಮೆ. ಸಾಧ್ಯವಾದರೆ ಪ್ರತಿದಿನ ಒಂದೊಂದು ಸಪೋಟ ಅಥವಾ ಚಿಕ್ಕು ಹಣ್ಣನ್ನು ಸೇವಿಸಿದರು ಸಾಕು ಕ್ಯಾನ್ಸರ್ ಮಾತ್ರವಲ್ಲದೇ ಇನ್ನೂ ಹಲವು ಬಗೆಯ ಆರೋಗ್ಯದ ಸಮಸ್ಯೆಗಳಿಂದ ನಮ್ಮನ್ನು ನಾವು ರಕ್ಷಣೆ ಮಾಡಿಕೊಳ್ಳಬಹುದು. ಹಾಗಾದರೆ ಬನ್ನಿ ಈ ಹಣ್ಣಿನ ಆರೋಗ್ಯದ ಪ್ರಯೋಜನಗಳ ಬಗ್ಗೆ ಇವತ್ತಿನ ಮಾಹಿತಿಯ ಮೂಲಕ ತಿಳಿದುಕೊಳ್ಳೋಣ.

ನೈಸರ್ಗಿಕವಾಗಿ ಉರಿಯುತ ಶಮನಕಾರಿ ಮತ್ತು ಬ್ಯಾಕ್ಟೀರಿಯಾ ವಿರೋಧಿ ಗುಣವನ್ನು ಹೊಂದಿರುವಂತಹ ಈ ಸಪೋಟ ಹಣ್ಣು ಕಿರಿಕಿರಿ ಉಂಟು ಮಾಡುವ ಹೊಟ್ಟೆ ಸಮಸ್ಯೆಯನ್ನು ಶಮನ ನೀಡುವುದು. ಮುಖ್ಯವಾಗಿ ಗ್ಯಾಸ್ಟಿಕ್ ಹಾಗೂ ಹೊಟ್ಟೆ ಉಬ್ಬರದಂತಹ ಸಮಸ್ಯೆಗಳನ್ನು ಇದು ನಿವಾರಿಸುತ್ತದೆ. ಇನ್ನು ಮಲಬದ್ಧತೆ ಸಮಸ್ಯೆ ಇರುವವರಿಗೆ ಹಾಗೂ ಜೀರ್ಣಕ್ರಿಯೆ ಸರಿಯಾಗಿ ಆಗದೆ ಇರುವವರು ಈ ಹಣ್ಣನ್ನು ಸೇವಿಸಿದರೆ ಪರಿಹಾರ ಕಾಣಬಹುದು.ಚಿಕ್ಕುಸ್ ನಲ್ಲಿ ಅಪಾರ ಪ್ರಮಾಣದ ಪೌಷ್ಟಿಕ ಸತ್ವಗಳು ಸಿಗುತ್ತದೆ. ಇವುಗಳ ಕಾರಣದಿಂದ ನಿಮ್ಮ ರೋಗ ನಿರೋಧಕ ಶಕ್ತಿ ತಾನಾಗಿಯೇ ವೃದ್ಧಿಯಾಗುತ್ತದೆ.

ನಿಮ್ಮ ದೇಹದಲ್ಲಿ ಕಬ್ಬಿಣದ ಅಂಶ ಪೊಟ್ಯಾಶಿಯಂ ಅಂಶ ವಿಟಮಿನ್ ಎ ವಿಟಮಿನ್ ಸಿ ನಿಯಾಸಿನ್ ತಾಮ್ರದಂಶ ಹೆಚ್ಚಾಗುವ ಮೂಲಕ ಬಲವಾದ ರೋಗನಿರೋಧಕ ಶಕ್ತಿಯಿಂದ ಸಾಕಷ್ಟು ಬಗೆಯ ಆರೋಗ್ಯ ಸಮಸ್ಯೆಗಳನ್ನು ದೂರ ಇಟ್ಟು ನಿಮ್ಮನ್ನು ಆರೋಗ್ಯವಂತರನ್ನಾಗಿ ಇರಿಸುವ ಭಾರ ಚಿಕ್ಕುಸ್ ನಲ್ಲಿ ಸೇರಿದೆ. ಆಗಲಿ ಪ್ರತಿದಿನವೂ ಅವುಗಳನ್ನು ತಿನ್ನುವ ಅಭ್ಯಾಸ ಮಾಡಿಕೊಳ್ಳಿ.ಇದು ತನ್ನಲ್ಲಿ ಅಪಾರ ಪ್ರಮಾಣದ ಫಾಸ್ಪರಸ್ ಮತ್ತು ಕಬ್ಬಿಣದ ಅಂಶವನ್ನು ಒಳಗೊಂಡಿರುತ್ತದೆ. ಇದರಿಂದ ನಿಮ್ಮ ಮೂಳೆಗಳು ಬಹುತೇಕ ಗಟ್ಟಿಯಾಗುತ್ತವೆ. ಹಾಗಾಗಿ ಇನ್ನು ಮುಂದೆಯಾದರೂ ನಿಮ್ಮ ಆಹಾರಕ್ರಮದಲ್ಲಿ ಚಿಕ್ಕುಸ್ ಅಳವಡಿಸಿ ಸೇವನೆ ಮಾಡಿ.

Leave a Reply

Your email address will not be published. Required fields are marked *