ಮೊದಲಿಗೆ 200 ಗ್ರಾಂ ಕುದಿಸಿದ ಅಕ್ಕಿಯನ್ನು ಒಂದು ಪಾತ್ರೆಯಲ್ಲಿ ಹಾಕಿ ನೆನೆಯಲು ಇಡಿ ನಂತರ ಮತ್ತೊಂದು ಪಾತ್ರೆಯಲ್ಲಿ 50ಗ್ರಾಂ ಮೆಂತೆಯನ್ನು ಹಾಕಿ ಅದನ್ನು ಕೂಡ ನೆನೆಯಲು ಬಿಡಬೇಕು
ಇವೆರಡನ್ನು ಕೂಡ ಏಳರಿಂದ ಎಂಟು ಗಂಟೆಗಳ ಕಾಲ ನೆನೆಸಿಕೊಳ್ಳಬೇಕು. ತದನಂತರ ಮೂರರಿಂದ ನಾಲ್ಕು ಬಾರಿ ಈ ಎರಡು ಮಿಶ್ರಣವನ್ನು ಚೆನ್ನಾಗಿ ತೊಳೆದುಕೊಳ್ಳಬೇಕು.
ಈಗ ಒಂದು ಮಿಕ್ಸಿಗೆ ನೆನೆಸಿಕೊಂಡಿರುವ ಮೆಂತೆ ಹಾಕಿ ನುಣ್ಣಗೆ ರುಬ್ಬಿಕೊಳ್ಳಬೇಕು ನಂತರ ಒಂದು ಪಾತ್ರೆಗೆ ಈ ಮಿಶ್ರಣವನ್ನು ಹಾಕಿಕೊಳ್ಳಿ. ಇದೇ ಮಾದರಿಯಲ್ಲಿ ನೆನೆಸಿಕೊಂಡಿರುವ ಅಕ್ಕಿಯನ್ನು ಕೂಡ ಸ್ವಲ್ಪ ನೀರು ಹಾಕಿ ನುಣ್ಣಗೆ ರುಬ್ಬಿಕೊಳ್ಳಬೇಕು. ನಂತರ 100 ಮಿಲಿ ನೀರನ್ನು ಹಾಕಿ ಎಲ್ಲವನ್ನೂ ಕೂಡ ದೋಸೆ ಹಿಟ್ಟಿನ ಹದಕ್ಕೆ ಕಲಸಿಕೊಳ್ಳಬೇಕು. ಈಗ ಒಂದು ಗಟ್ಟಿ ತಳವಿರುವ ಪಾತ್ರೆ ಅಥವಾ ಬಾಣಲಿಯನ್ನು ತೆಗೆದುಕೊಂಡು ಗ್ಯಾಸ್ ಮೇಲೆ ಇಟ್ಟು ಅದಕ್ಕೆ 200 ಮಿಲಿ ನೀರನ್ನು ಹಾಕಿಕೊಂಡು.
ರುಬ್ಬಿಕೊಂಡಿರುವಂತಹ ಮಿಶ್ರಣವನ್ನು ಅದಕ್ಕೆ ಹಾಕಿ ನಿಧಾನ ಉರಿಯಲ್ಲಿ ಕೈ ಬಿಡದಂತೆ 5 ನಿಮಿಷಗಳ ಕಾಲ ತಿರುಗಿಸಿ ಕೊಳ್ಳಬೇಕು ನಂತರ ಒಂದು ತಟ್ಟೆಯನ್ನು ಮುಚ್ಚಿ ಎರಡು ನಿಮಿಷಗಳ ಕಾಲ ಬೇಯಲು ಬಿಡಬೇಕು. ಮತ್ತೊಂದು ಕಡೆ ಒಂದು ಪಾತ್ರೆಗೆ 200 ಗ್ರಾಂ ಬೆಲ್ಲದ ಪುಡಿಯನ್ನು ಹಾಕಿ ಸ್ವಲ್ಪ ನೀರನ್ನು ಹಾಕಿ ಇದನ್ನು ಕುದಿಯಲು ಬಿಡಬೇಕು. ಪಾಕ ಬಂದ ನಂತರ ಅದನ್ನು ಒಂದು ಬಟ್ಟಲಿಗೆ ಶೋಧಿಸಿಕೊಳ್ಳಬೇಕು
ನಂತರ ಸ್ವಲ್ಪ ಏಲಕ್ಕಿ ಪುಡಿಯನ್ನು ಹಾಕಿ. ತದನಂತರ ಮೆಂತೆ ಮುದ್ದೆಯನ್ನು ಮತ್ತೊಂದು ಬಾರಿ ಕಲಿಸಿಕೊಂಡು ಈಗ ಒಂದು ಬಾಳೆ ಎಲೆಗೆ ಮುದ್ದೆಯನ್ನು ಕಟ್ಟಿ ಅದರ ಒಳಗೆ ಹಾಕಿ. ಅದನ್ನು ಬೆಲ್ಲದ ಪಾಕದೊಂದಿಗೆ ಸೇವಿಸಬೇಕು ಹೀಗೆ ಮಾಡಿದರೆ ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ ದೇಹದಲ್ಲಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ ಮತ್ತು ಮೂಳೆಗಳಿಗೆ ಉತ್ತಮವಾದ ಬಲವನ್ನು ನೀಡುತ್ತದೆ.
ಸೂಚನೆ: ನಾವು ಹಾಕುವ ಎಲ್ಲ ಮಾಹಿತಿಗಳು ನಮ್ಮ ಸ್ವಂತ ಅನುಭವದ ಮತ್ತು ನಮ್ಮ ಅನಿಸಿಕೆ ಅಭಿಪ್ರಾಯಗಳಲ್ಲ ಕೇವಲ ಸಂಗ್ರಹದ ಮಾಹಿತಿಗಳು ಮಾತ್ರ ಯಾವುದೇ ಭಿನ್ನಾಭಿಪ್ರಾಯಗಳ ವಿಚಾರಗಳಿಗೆ ನಾವು ಜವಾಬ್ದರರಲ್ಲ.