WhatsApp Group Join Now

ನಮಸ್ತೆ ಪ್ರಿಯ ಓದುಗರೇ, ರಿಲಿಜನ್ ಅಂದ್ರೆ ಧರ್ಮ, ವಿಜ್ಞಾನ ಅಂದ್ರೆ ಸೈನ್ಸ್ ಎರೆಡೂ ಬೇರೆ ಬೇರೆ ಆದ್ರೂ ಎರೆಡೂ ಒಂದೇ. ಮಾಡರ್ನ್ ಸೈನ್ಸ್ ಮಾಡಲು ಆಗದೇ ಇರೋದನ್ನ ಮೃತ್ಯುಂಜಯ ಮಂತ್ರ ಮಾಡಬಹುದು. ಕೇಳೋಕೆ ಸ್ವಲ್ಪ ಕನ್ಫ್ಯೂಸ್ ಅನಿಸಿದರೂ ಅದೇ ನಿಜ. ಅದೇನು ಎಂದು ಇಂದಿನ ಲೇಖನದಲ್ಲಿ ವಿವರವಾಗಿ ತಿಳಿಯೋಣ. ನಾವು ನೀವು ಯಾರನ್ನಾದರೂ ಆಸ್ಪತ್ರೆಗೆ ಸೇರಿಸುವುದಾದರೆ, ಡಾಕ್ಟರ್ ನ ನಂಬಿ ಆಸ್ಪತ್ರೆಗೆ ಸೇರಿಸುತ್ತವೆ, ಆದ್ರೆ ರೋಗಿಗೆ ಏನೋ ಆಗಬಾರದು ಎಂದು ದೇವರಲ್ಲಿ ಪ್ರಾರ್ಥನೆ ಮಾಡುತ್ತೇವೆ. ಅವರು ಬದುಕಿ ಉಳಿದಾಗ ಆಸ್ಪತ್ರೆ ಬಿಲ್ ಕಟ್ಟಿ, ದೇವರು ದೊಡ್ಡವನು ಜೀವ ಉಳಿಸಿದ ಅಂತಾನೋ ಹೇಳ್ತೀವಿ. ಅವ್ರು ಉಳಿದದ್ದು ದೇವರಿಂದಲೋ ಅಥವಾ ಡಾಕ್ಟರ್ ಇಂದಲೋ? ಉತ್ತರ ನಿಗೂಢ. ನಾವು ಈ ಲೇಖನದಲ್ಲಿ ಹೇಳುವ ವಿಷ್ಯ ನೀವು ನಂಬಲ್ಲ, ಆದ್ರೂ ಅದುವೇ ನಿಜ. ಇವತ್ತಿನ ಮೆಡಿಕಲ್ ರಿಸರ್ಚ್ ಸೆಂಟರ್ ಗಳು ಸಹ ಮಂತ್ರದ ಶಕ್ತಿಯನ್ನು ನಂಬಲು ಶುರು ಮಾಡಿದೆ. ಡೆಲ್ಲಿಯ ರಾಮ್ ಮನೋಹರ್ ಲೋಹಿಯಾ ಆಸ್ಪತ್ರೆ ಯಲ್ಲಿ ಒಂದು ರಿಸರ್ಚ್ ಮಾಡಿದ್ದಾರೆ, ಅದ್ರಲ್ಲಿ 40 ಜನ ರೋಗಿಗಳನ್ನು ರಿಸರ್ಚ್ ಗೆ ಬಳಸಿಕೊಂಡಿದ್ದಾರೆ.

ಈ 40 ಜನ ರೋಗಿಗಳಿಗೆ ಬ್ರೈನ್ ರಿಲೇಟೆಡ್ ತೊಂದರೆ ಇತ್ತು, ಅಂದ್ರೆ ಮೆದುಳು ಡ್ಯಾಮೇಜ್ ಆಗಿರುವ ರೋಗಿಗಳು. ಇದರಲ್ಲಿ 20 ಜನ ರೋಗಿಗಳಿಗೆ ನಾರ್ಮಲ್ ಕೊಡುವಂತಹ ಚಿಕಿತ್ಸೆ ಕೊಟ್ರು. ಇನ್ನುಳಿದ 20 ಜನ ರೋಗಿಗಳಿಗೆ ನಾರ್ಮಲ್ ಚಿಕತ್ಸೆ ಜೊತೆಗೆ ಮಹಾ ಮೃತ್ಯುಂಜಯ ಮಂತ್ರದ ಚಿಕಿತ್ಸೆಯನ್ನು ಕೊಟ್ರು. ಮೊದಲಿನ 20 ಜನ ರೋಗಿಗಳಿಗೆ ಐಸಿಯು ಅಲ್ಲೇ ಇದ್ರು, ಇದರ ಜೊತೆಗೆ ಇನ್ನುಳಿದ 20 ಜನ ರೋಗಿಗಳು ಐಸಿಯು ಅಲ್ಲಿಯೇ ಇದ್ದು, ಇವರ ಕುಟುಂಬದವರು ಆಸ್ಪತ್ರೆಯಿಂದ 13 ಕಿಮೀ ದರದಲ್ಲಿರುವ ಸಂಸ್ಕೃತ ವಿದ್ಯಾ ಪೀಠ ಏನಿರುತ್ತೆ, ಅಲ್ಲಿ ಹೋಗಿ ರೋಗಿಗಳಿಗೋಸ್ಕರ ಮಹಾ ಮೃತ್ಯಂಜಯ ಮಂತ್ರವನ್ನು ಕೇಳ್ತಾ ಇದ್ರು, ನೀವು ನಂಬಲ್ಲ ಆಸ್ಪತ್ರೆಯಲ್ಲಿ ಯಾರು ಚಿಕಿತ್ಸೆ ತೋಗೊಳ್ತ ಇದ್ರು ಅವರಲ್ಲಿ ಯಾರೋ ಉಳಿಯಲೇ ಇಲ್ಲ. ಆದ್ರೆ ಮಹಾ ಮೃತ್ಯುಂಜಯ ಮಂತ್ರದ ಚಿಕಿತ್ಸೆ ತೆಗ್ದುಕೊಂಡ 20 ರೋಗಿಗಳಲ್ಲಿ 18 ರೋಗಿಗಳು ರಿಕವರ್ ಆಗಿ ಜೀವ ಉಳಿಸಿಕೊಂಡರು. ಆಶ್ಚರ್ಯ ಆಗುತ್ತೆ ಅಲ್ವಾ? ಅದೇ ಆ ಮಂತ್ರಕ್ಕಿರುವ ಶಕ್ತಿ, ತಾಕತ್ತು. ಪ್ರತಿಷ್ಠಿತ ಐಸಿಎಂಆರ್ ಸಂಸ್ಥೆ ಈ ರಿಸರ್ಚ್ ಮಾಡಿಸಿತ್ತು. ಇದರ ಸಂಪೂರ್ಣ ರಿಪೋರ್ಟ್ ಬರುವುದು ಇನ್ನೂ ಬಾಕಿ ಇದೆ. ಆದ್ರೆ ವಿಜ್ಞಾನಿಗಳು ಮಂತ್ರ ಶಕ್ತಿಯಿಂದ ಜೀವ ಉಳಿಸಬಹುದ ಎಂದು ಸೈಂಟಿಫಿಕ್ ಸ್ಟಡಿ ಮಾಡ್ತಾ ಇದಾರೆ.

ಮಹಾ ಮೃತ್ಯುಂಜಯ ಮಂತ್ರ ಎಂದ್ರೆ ಸಾವನ್ನು ಗೆಲ್ಲುವ ಮಂತ್ರ ಎಂದು ಹೇಳಬಹುದು. ಈ ಮಂತ್ರ ಹೇಳುವುದರಿಂದ ನಮ್ಮ ಸಾವಿನ ಭಯ ದೂರ ಆಗುತ್ತೆ. ಇದರ ಜೊತೆಗೆ ನಮ್ಮ ಜೀವ ಆರೋಗ್ಯವಾಗಿ ಚುರುಕಾರಿ ಇರುತ್ತೆ. ಈ ಮಂತ್ರ ಬರೆದಿದ್ದು ಋಷಿ ಮಾರ್ಕಂಡೇಯ. ಇದು ಶಿವನ ಕುರಿತು ಬರೆದಿದ್ದ ಮಂತ್ರ. ಶಿವನ ಮೂರು ಕಣ್ಣುಗಳ ಹಾಗೆ ಇದು ನಮ್ಮ ಜೀವನದ ಶಕ್ತಿಯನ್ನು ಹೆಚ್ಚಿಸುತ್ತದೆ. ಇದನ್ನು ತ್ರಯಂಬಕ ಮಂತ್ರ, ರುದ್ರ ಮಂತ್ರ ಹಾಗೂ ಮೃತ್ಯು ಸಂಜೀವಿನಿ ಮಂತ್ರ ಎಂದು ಹೇಳಲಾಗುತ್ತದೆ. ಜಪ ಮತ್ತು ಮಂತ್ರ ಒಂಥರಾ ಧ್ಯಾನ ಇದ್ದ ಹಾಗೆ. ಅದು ಒತ್ತಡ ಕಡಿಮೆ ಮಾಡುತ್ತೆ. ಅದರಲ್ಲಿ ಮಹಾ ಮೃತ್ಯುಂಜಯ ಮಂತ್ರ ಹೇಳುವುದರಿಂದ ನಿಮ್ಮ ಧೈರ್ಯ ಹೆಚ್ಚುತ್ತೆ ಹಾಗೆ ಸಾವು ಎನ್ನುವುದು ನಿಮ್ಮ ಯೋಚ್ನೆಯಲ್ಲಿ ಬರಲ್ಲ. ಮಹಾ ಮೃತ್ಯುಂಜಯ ಮಂತ್ರದ ಉಚ್ಚಾರಣೆ ಸರಿಯಾಗಿ ಕೇಳಿಕೊಂಡರೆ ಇಲ್ಲ, ಉಚ್ಚಾರಣೆ ಮಾಡಿದರೆ ನಮ್ಮ ದೇಹದಲ್ಲಿ ಒಂಥರಾ ವೈಬ್ರೇಶನ್ ಸ್ಟಾರ್ಟ್ ಆಗುತ್ತೆ. ಆ ವೈಬ್ರೆಶನ್ ನಿಮ್ಮ ಮೆದುಳನ್ನು ಆಕ್ಟೀವ್ ಆಗಿ ಇಡುತ್ತೆ ಹಾಗೆ ಧೈರ್ಯ ಹೆಚ್ಚಿಸುತ್ತದೆ. ನಮ್ಮ ಸುತ್ತ ಮುತ್ತ ಇರುವ ಕೆಲವರು ಮಂತ್ರಗಳಲ್ಲಿ ಏನಿದೆ ಮಹಾ ಎಂದು ಹೇಳ್ತಾ ಇರ್ತಾರೆ ಆದ್ರೆ ಅವರ ಮಾತುಗಳಿಂದ ಮಂತ್ರಗಳ ಶಕ್ತಿ ಏನು ಕಡಿಮೆ ಆಗಲ್ಲ. ನಮ್ಮ ಜಗತ್ತು ಎಷ್ಟು ಮುಂದುವರೆದು ಸೈನ್ಸ್ ಮತ್ತು ಟೆಕ್ನಾಲಜಿ ಇವಾಗ ಉತ್ತುಂಗ ದಲ್ಲಿದೆ. ಆದ್ರೂ ವಿಜ್ಞಾನಿಗಳು ಮಂತ್ರ ಶಕ್ತಿಯನ್ನು ನಂಬಲಿಕ್ಕೇ ಶುರು ಮಾಡಿದರೆ. ಇಸ್ರೋ ಸೆಟಲೈಟ್ ಲಾಂಚ್ ಮಾಡುವುದಕ್ಕೆ ಮುಂಚೆ ಮಾಡುವುದು ಪೋಜೇನೆ ಅಲ್ವಾ? ಅವತ್ತಿನ ಮಂತ್ರ ಶಕ್ತಿಗಳು ಇವತ್ತಿನ ಜಗತ್ತನ್ನು ಮೀರಿಸೋ ಮಟ್ಟಿಗೆ ಬಲವಾಗಿದೆ. ದೆಲ್ಲಿಯ ಆಸ್ಪತ್ರೆಯ ರಿಸರ್ಚ್ ನಿಂದಾಗಿ ಮಂತ್ರಗಳ ಶಕ್ತಿ ಇಡೀ ಜಗತ್ತಿಗೆ ಗೊತ್ತಾಗುತ್ತಾ ಇದೆ. ನೀವು ಕೇಳಿ ಪಠಿಸಿ ಈ ಮಹಾ ಮೃತ್ಯುಂಜಯ ಮಂತ್ರ, ಆಗ ನಿಮಗೂ ಇದರ ಶಕ್ತಿಯ ಅನುಭವ ಆಗಿಯೇ ಆಗುತ್ತದೆ. ಶುಭದಿನ.

WhatsApp Group Join Now

Leave a Reply

Your email address will not be published. Required fields are marked *