ಸಾಸಿವೆ ಎಣ್ಣೆ ನಿಮ್ಮ ಆರೋಗ್ಯಕ್ಕೆ ತುಂಬಾನೇ ಉತ್ತಮ ಅದರಲ್ಲೂ ಸಾಸಿವೆ ಎಣ್ಣೆ ನಿಮ್ಮ ತಲಗೆ ಹೆಚ್ಚು ಸಹಕಾರಿಯಾಗಲಿದೆ. ನಿಮ್ಮ ತಲೆ ಕೂದಲಿಗೆ ಸಂಬಂಧಿಸಿದಂತೆ ಮತ್ತು ಇನ್ನು ಹಲವು ಕಾರಣಗಳಿಗೆ ಈ ಸಾಸಿವೆ ಎಣ್ಣೆ ಮದ್ದಾಗಿದೆ.
ಬಿಳಿ ಕೂದಲಿಗೆ: ಕೂದಲು ಬಿಳಿಯಾಗುವುದನ್ನ್ನು ತಡೆಯುವುದು ಸಾಸಿವೆ ಎಣ್ಣೆಯ ಅತಿ ಮುಖ್ಯ ಉಪಯೋಗ. ಅದು ನೈಸರ್ಗಿಕವಾಗಿ ಕೂದಲನ್ನು ಕಪ್ಪಗೆ ಮಾಡುತ್ತದೆ. 20ರ ಹರೆಯದಲ್ಲೇ ಸಾಸಿವೆ ಎಣ್ಣೆಯನ್ನು ಕೂದಲಿಗೆ ಬಳಸಲು ಆರಂಭಿಸಿದರೆ ವಯಸ್ಸಾದರೂ ಕೂದಲು ಬಿಳಿಯಾಗುವುದನ್ನು ತಡೆಯಬಹುದು.
ತಲೆಬುರುಡೆ ಮಸಾಜ್ಗಾಗಿ: ತಲೆ ಬುರುಡೆಯನ್ನು ಮಸಾಜ್ ಮಾಡಿಕೊಳ್ಳಲು ಇದು ಅತ್ಯುತ್ತಮ ಎಣ್ಣೆಯಾಗಿದೆ. ತಲೆ ಬುರುಡೆಗೆ ಮಸಾಜ್ ಮಾಡುವುದರಿಂದ ರಕ್ತಸಂಚಾರವು ಉತ್ತಮಗೊಂಡು ಕೂದಲಿನ ಬೆಳವಣಿಗೆ ಹಾಗೂ ಕೂದಲು ರೇಷ್ಮೆಯಂತೆ ಹೊಳೆಯಲು ನೆರವಾಗುವುದು.
ಒಣ ಕೂದಲಿಗೆ: ನೀವು ಒಣ ಕೂದಲಿನ ಸಮಸ್ಯೆಯನ್ನು ಉದುರಿಸುತ್ತಾ ಇದ್ದರೆ ಕೂದಲಿಗೆ ತೇವಾಂಶವನ್ನು ನೀಡುವಂತಹ ಅತ್ಯುತ್ತಮ ಎಣ್ಣೆ ಇದಾಗಿದೆ. ಸಾಸಿವೆ ಎಣ್ಣೆಯ ಕೂದಲಿಗೆ ತುಂಬ ಪರಿಣಾಮಕಾರಿ. ಜತೆಗೆ ಸಿಕ್ಕುಗಳನ್ನು ತಡೆಯುತ್ತದೆ.
ಹೊಟ್ಟು ನಿವಾರಣೆಗೆ: ತಲೆಬುರುಡೆಯಲ್ಲಿ ತಲೆಹೊಟ್ಟು ಶೇಖರಣೆಯಾಗುವುದನ್ನು ಇದು ತಡೆಯುತ್ತದೆ. ತಲೆಬುರುಡೆಯನ್ನು ಆರೋಗ್ಯವಾಗಿಡಲು ಶತಮಾನಗಳಿಂದಲೂ ಭಾರತೀಯ ಮಹಿಳೆಯರು ಇದನ್ನು ಬಳಸುತ್ತಿದ್ದಾರೆ.
ಕೂದಲ ಬೆಳವಣಿಗೆಗೆ: ಪ್ರತೀ ವಾರ ಸಾಸಿವೆ ಎಣ್ಣೆಯಿಂದ ತಲೆಬುರುಡೆಗೆ ಮಸಾಜ್ ಮಾಡಿದರೆ ಒಂದೇ ತಿಂಗಳಲ್ಲಿ ಕೂದಲು ಉದ್ದವಾಗಿ ಬೆಳವಣಿಗೆ ಆಗಿಲಿದೆ. ರಾತ್ರಿ ಮಲಗುವ ಮೊದಲು ಕೂದಲಿಗೆ ಸಾಸಿವೆ ಎಣ್ಣೆಯನ್ನು ಹಚ್ಚಿದರೆ ಆಗ ಶವರ್ ಕ್ಯಾಪ್ ಬಳಸಿ, ಇದರಿಂದ ತಲೆ ದಿಂಬು ಮತ್ತು ಇತರ ಕಡೆಗೆ ಎಣ್ಣೆ ಹರಡುವುದು ತಪ್ಪುತ್ತದೆ. ಸಾಸಿವೆ ಎಣ್ಣೆಯಲ್ಲಿ ವಿಟಮಿನ್ಗಳು ಒಮೆಗಾ 3 ಕೊಬ್ಬಿನ ಆಮ್ಲಗಳು ಇರುತ್ತವೆ.
ಕೂದಲು ತುಂಡಾಗುವುದನ್ನು ತಡೆಯಲು: ಕೂದಲು ತುಂಡಾಗುವ ಸಮಸ್ಯೆ ಪ್ರತಿಯೊಬ್ಬರನ್ನು ಕಾಡುತ್ತಿರುತ್ತದೆ. ಆದರೆ ಇದಕ್ಕೆ ಪರಿಹಾರ ಮಾತ್ರ ಸಿಕ್ಕಿರುವುದಿಲ್ಲ. ಸಾಸಿವೆ ಎಣ್ಣೆಯನ್ನು ಕೂದಲಿಗೆ ಬಳಸುವುದರಿಂದ ಈ ಸಮಸ್ಯೆಯಿಂದ ಪರಿಹಾರ ಕಾಣಬಹುದು. ಇದು ಕೂದಲನ್ನು ಬಲಿಷ್ಠವಾಗಿಸಿ ಮುಂದೆ ಕೂದಲು ತುಂಡಾಗದಂತೆ ಮಾಡುತ್ತದೆ.
ಕೂದಲು ಉದುರುವಿಕೆ: ಸತುವಿನ ಕೊರತೆಯಿಂದ ಒಮ್ಮೊಮ್ಮೆ ಕೂದಲು ಉದುರುವಿಕೆ ಕಂಡುಬರುತ್ತದೆ. ಸಾಸಿವೆ ಎಣ್ಣೆಯಲ್ಲಿ ಅಧಿಕ ಪ್ರಮಾಣದ ಸತುವಿನ ಅಂಶವಿರುತ್ತವೆ ಆದ್ದರಿಂದ ಸಾಸಿವೆ ಎಣ್ಣೆಯನ್ನು ಕೂದಲ ಬುಡಕ್ಕೆ ಲೇಪಿಸುವುದರಿಂದ ಕೂದಲು ಉದುರುವಿಕೆಯನ್ನು ತಡೆಗಟ್ಟಬಹುದು. ಇದಕ್ಕಾಗಿ ಸಾಸಿವೆ ಎಣ್ಣೆಯನ್ನು ಬಿಸಿ ಮಾಡಿ ಮಸಾಜ್ ಮಾಡಿ ಸಾಕು.
ಕೂದಲಿಗೆ ಹೊಳಪು ನೀಡುತ್ತದೆ: ಸಾಸಿವೆ ಎಣ್ಣೆಯ ಎಂತಹ ನಿರ್ಜೀವ ಕೂದಲಿಗೂ ಸಹ ಹೊಳಪನ್ನು ನೀಡುತ್ತದೆ. ಇದಕ್ಕಾಗಿ ಒಂದು ಟೇಬಲ್ ಚಮಚ ತೆಂಗಿನ ಎಣ್ಣೆಗೆ ಟೇಬಲ್ ಚಮಚ ಬಿಸಿ ಸಾಸಿವೆ ಎಣ್ಣೆಯನ್ನು ಬೆರೆಸಿ. ಈ ಮಿಶ್ರಣವನ್ನು ಕೂದಲ ಬುಡಕ್ಕೆ ಲೇಪಿಸಿ ತದನಂತರ ಇದನ್ನು 10 ನಿಮಿಷ ನೆನೆಯಲು ಬಿಡಿ, ನಂತರ ಬೆಚ್ಚಗಿನ ನೀರಿನಲ್ಲಿ ತೊಳೆಯಿರಿ.