ಸಾಸಿವೆ ಕಾಳು ತುಂಬಾ ಚಿಕ್ಕದು. ಈ ಸಾಸಿವೆ ಇಲ್ಲದಿದ್ದರೆ ಒಗ್ಗರಣೆ ಪರಿಪೂರ್ಣವಾಗೋದಿಲ್ಲ ಅನ್ನೋದು ಗೊತ್ತಿರುವ ವಿಚಾರವೇ. ಯಾಕಂದರೆ ಪ್ರತಿ ಬಾರೀ ಒಗ್ಗರಣೆ ಹಾಕುವಾಗಲೂ ಸಾಸಿವೆ ತುಂಬಾ ಮುಖ್ಯವಾದ ವಸ್ತುವಾಗಿರುತ್ತದೆ. ಅಡಿಗೆಗೆ ಸಾಸಿವೆ ಎಷ್ಟು ಮುಖ್ಯವೋ ಮನುಷು ತ್ವಚೆ ಹಾಗೂ ಕೂದಲಿಗೂ ಸಾಸಿವೆ ಎಣ್ಣೆ ಅಷ್ಟೇ ಮುಖ್ಯವಾಗಿದೆ. ಹೇಗೆ ಅಂತೀರಾ ಇದನ್ನು ಓದಿ..
ಹೌದು, ಸಾಸಿವೆ ಮುಖಕ್ಕೆ ತುಂಬಾ ಮುಖ್ಯವಾದುದು. ಯಾಕಂದರೆ ಇದರಲ್ಲಿ ಶಿಲೀಂಧ್ರ ವಿರೋಧಿ ಗುಣಗಳಿವೆ. ಚರ್ಮದ ಸೋಂಕಿನ ವಿರುದ್ಧ ಹೋರಾಡುವ ಶಕ್ತಿ ಸಾಸಿವೆ ಎಣ್ಣೆಗಿದೆ. ಸಾಸಿವೆ ಎಣ್ಣೆ ಮುಖಕ್ಕೆ ಹೆಚ್ಚು ಪರಿಣಾಮಕಾರಿ. ಈ ಸಾಸಿವೆ ಎಣ್ಣೆಯನ್ನು ಅಲೋವೆರಾದ ಜೊತೆಯಲ್ಲಿ ಹಚ್ಚಬೇಕು. ನಂತರ ೧೫ ನಿಮಿಷದ ಬಳಿಕ ತೊಳೆಯಿರಿ.
ಇನ್ನು ಸಾಸಿವೆ ಎಣ್ಣೆ ಮುಖಕ್ಕೆ ಅಷ್ಟೆ ಅಲ್ಲದೆ ಕೂದಲಿಗೂ ಮರಿಣಾಮಕಾರಿಗೆ. ಅಂದರೆ ಈ ಸಾಸಿವೆ ಎಣ್ಣೆಯನ್ನು ರಾತ್ರಿ ತಲೆಯ ಕೂದಲಿನ ರೂಟ್ಗಳಿಗೆ ಹಚ್ಚಿ ನಂತರ ಬೆಳಗ್ಗೆ ಶಾಂಪುನಿನೊಂದಿಗೆ ತಲೆ ಕೂದಲು ತೊಳೆಯುದರಿಂದ ಕೂದಲುಗಳು ರೇಷ್ಮೆಯಂತೆ ಹೊಳೆಯುತ್ತವೆ. ಇನ್ನು ಈ ಎಣ್ಣೆಯೊಂದಿಗೆ ಕೂದಲಿಗೆ ಮಸಾಜ್ ಮಾಡುವುದರಿಂದ ಕೂದಲು ದಪ್ಪ ಹಾಗೂ ಸದೃಡವಾಗಿ ಬೆಳೆಯುತ್ತವೆ. ಅಷ್ಟೆ ಅಲ್ಲ ಕೂದಲು ಉದುರುವುದನ್ನು ಕಡಿಮೆ ಮಾಡಬಹುದು.
ಸಾಮಾನ್ಯವಾಗಿ ಈ ಸಾಸಿವೆಯನ್ನು ನಿರತಂರವಾಗಿ ಉಪಯೋಗಿಸುವುದರಿಂದ ಅಧಿಕ ರಕ್ತದೊತ್ತಡ, ಅಸ್ತಮಾ ದಾಳಿಯನ್ನು ತಡೆಗಟ್ಟುವ ಗುಣ ಹೊಂದಿದೆ. ಇನ್ನು ಖುತು ಚಕ್ರಕ್ಕೂ ಈ ಸಾವಿಸೆ ರಾಮಭಾಣ. ಇನ್ನು ಶಿತ ನಿವಾರಣೆಗೂ ಸಾಸಿವೆ ಅತ್ಯತ್ತಮ ಪ್ರಯೋಜನವಿದೆ.