ಸಿಹಿ ಗೆಣಸು ರುಚಿಕರ ಮತ್ತು ಪುಷ್ಟಿದಾಯಕ ಆಹಾರವಾಗಿದೆ. ಇದು ದೇಹಕ್ಕೆ ಬೇಕಾದ ವಿಟಮಿನ್ ಬಿ6, ಕ್ಯಾಲ್ಸಿಯಂ, ಕಬ್ಬಿಣ, ಸೋಡಿಯಂ, ಝಿಂಕ್, ಮೆಗ್ನಿಶಿಯಂ ಮೊದಲಾದ ಅಂಶಗಳನ್ನು ಒದಗಿಸುತ್ತದೆ. ಅಲ್ಲದೇ ಇದರಲ್ಲಿ ಉತ್ತಮ ಪ್ರಮಾಣದ ನಾರಿನಂಶ, ವಿಟಮಿನ್ ಸಿ ಮತ್ತು ವಿಟಮಿನ್ ಎ ಸಹಾ ಇದ್ದು ಹಲವು ತೊಂದರೆಗಳಿಂದ ರಕ್ಷಣೆ ನೀಡುತ್ತದೆ. ಸಿಹಿಗೆಣಸುಗಳಲ್ಲಿ ಸ್ವಾಭಾವಿಕ ಸಕ್ಕರೆ ಅಂಶ ಇರುವುದರಿಂದ ಅದು ಮಧಮೇಹವನ್ನು ಕಡಿಮೆ ಮಾಡಿ, ಇನ್ಸುಲಿನ್ ಪ್ರಮಾಣವನ್ನು ಸ್ಥಿರವಾಗಿಡುತ್ತದೆ ಮತ್ತು ರಕ್ತದಲ್ಲಿ ಸಕ್ಕರೆ ಮಟ್ಟವನ್ನು ಕಾಯ್ದುಕೊಳ್ಳುತ್ತದೆ. ಬಸಿರಾದ ಹೆಂಗಸರಿಗೆ ಬಹಳ ಆವಶ್ಯಕವಾದ ಬಿ-ವಿಟಾಮಿನ್ ಸೇರಿದಂತೆ ಪೋಲಿಕ್ ಆಸಿಡ್ ಮರಗೆಣಸಿನಲ್ಲಿ ಹೇರಳವಾಗಿದೆ. ಇದರಲ್ಲಿ ಅಧಿಕ ವಿಟಮಿನ್ ಎ ಲೈಕೊಪೆನೆ ಇದ್ದು ಹೃದಯದ ಸ್ವಾಸ್ಥ್ಯವನ್ನು ಹೆಚ್ಚಿಸುತ್ತದೆ.ಸಿಹಿ ಗೆಣಸಿನಲ್ಲಿ ವಿಟಾಮಿನ್, ಮಿನರಲ್ಸ್, ಪ್ರೊಟೀನ್ ಹೆಚ್ಚಿನ ಪ್ರಮಾಣದಲ್ಲಿರುವುದರಿಂದ ಆರೋಗ್ಯಕರವಾಗಿ ತೂಕ ಹೆಚ್ಚುತ್ತದೆ.
ಇದರ ಸೇವನೆಯಿಂದ ಇಮ್ಯೂನಿಟಿ ಬೂಸ್ಟ್ ಆಗುತ್ತದೆ. ಇದು ಅಸ್ಥಮಾ ಸಮಸ್ಯೆ ನಿವಾರಣೆಯಾಗುತ್ತದೆ.
ಇದರ ಸೇವನೆಯಿಂದ ಮಲಬದ್ಧತೆ ನಿವಾರಣೆಯಾಗುತ್ತದೆ. ಇದರಲ್ಲಿರುವ ವಿಟಮಿನ್ ಸಿ ಜೀವಸತ್ವವು ಮೂಳೆ ಮತ್ತು ಹಲ್ಲಿನ ರಚನೆ, ಜೀರ್ಣಕ್ರಿಯೆ ಮತ್ತು ರಕ್ತ ಕಣ ರಚನೆಯಲ್ಲಿ ಪ್ರಮುಖ ಪಾತ್ರವಹಿಸುತ್ತದೆ. ಸಿಹಿ ಗೆಣಸಿನಲ್ಲಿರುವ ಬೀಟಾ-ಕೆರೊಟಿನ್ ಸ್ತನ ಮತ್ತು ಶ್ವಾಸಕೋಶದ ಕ್ಯಾನ್ಸರ್‌ನಿಂದ ನಮ್ಮನ್ನು ಕಾಪಾಡುತ್ತವೆ. ಶೀತ ಮತ್ತು ಜ್ವರದ ಸೊಂಕು ಹರಡುವುದನ್ನು ತಡೆಗಟ್ಟುತ್ತದೆ. ಇದರಲ್ಲಿ ಫೊಲಿಕ್ ಆಸಿಡ್ ಅಧಿಕ ಪ್ರಮಾಣದಲ್ಲಿರುವುದರಿಂದ ಗರ್ಭಾವಧಿಯಲ್ಲಿ ಭ್ರೂಣದ ಕೋಶ ಮತ್ತು ಕೋಶಗಳ ಬೆಳವಣಿಗೆಗೆ ಸಹಕರಿಸುತ್ತದೆ. ಸಿಹಿ ಗೆಣಸಿನಲ್ಲಿ ನಮ್ಮ ದೇಹಕ್ಕೆ ಅತ್ಯಗತ್ಯವಾದ ಖನಿಜಾಂಶಗಳು ಇವೆ.
ನಮ್ಮ ದೇಹದ ವಿವಿಧ ಭಾಗಗಳಿಗೆ ಆಮ್ಲಜನಕವನ್ನು ಸಾಗಿಸಲು ಜೀವಕೋಶದ ಸಾಮರ್ಥ್ಯವನ್ನು ಇದು ಹೆಚ್ಚಿಸುತ್ತದೆ.ಸಿಹಿ ಗೆಣಸಿನಲ್ಲಿ ಪೊಟ್ಯಾಸಿಯಮ್ ಉನ್ನತ ಮಟ್ಟದಲ್ಲಿರುತ್ತದೆ. ಇದು ಹೃದಯ ಬಡಿತವನ್ನು ನಿಯಂತ್ರಿಸುವಲ್ಲಿ ಸಹಾಯ ಮಾಡುತ್ತದೆ. ದೇಹದ ಸ್ನಾಯುಗಳು ಮತ್ತು ನರ ಕಾರ್ಯಗಳನ್ನು ಸುಲಭಗೊಳಿಸುತ್ತದೆ. ಮ್ಯಾಂಗನೀಸ್ ಮತ್ತು ಕಬ್ಬಿಣಾಂಶಗಳು ಸಿಹಿಗೆಣಸಿನಲ್ಲಿ ಅಧಿಕವಾಗಿರುತ್ತವೆ. ಇವು ಋತುಚಕ್ರ ಪೂರ್ವ ಸಮಸ್ಯೆಗಳನ್ನು ನಿವಾರಿಸುತ್ತವೆ.