ಕೂದಲ ಆರೋಗ್ಯಕ್ಕೆ ಅತ್ಯುತ್ತಮ ಸಾಧನ ಸೀಗೆಕಾಯಿ. ಹೀಗೆಕಾಯಿ ಅನಾದಿಕಾಲದಿಂದಲೂ ಏಷ್ಯಾ ಹಾಗೂ ನೆತ್ತಿಯ ಆರೋಗ್ಯಕ್ಕಾಗಿ ಬಳಕೆಯಾಗುತ್ತಿರುವ ಗಿಡಮೂಲಿಕೆ ಆಗಿದೆ. ಸೀಗೆಕಾಯಿ ತಲೆಕೂದಲನ್ನು ಶುದ್ಧೀಕರಿಸುವ ಒಂದು ಅತ್ಯುತ್ತಮ ಸಾಧನವಾಗಿದೆ. ಅಲ್ಲದೆ ಕೈಗೆಟ್ಟಿಕುವ ಬೆಲೆಯಲ್ಲಿ ಎಲ್ಲಾ ಅಂಗಡಿಗಳಲ್ಲಿ ದೊರೆಯುವ ಸೀಗೆ ಕಾಯಿಯನ್ನು ಯಾರು ಬೇಕಾದರೂ ನಿಶ್ಚಿಂತೆಯಿಂದ ಬಳಸಬಹುದು. ಕೂದಲಿಗೆ ಇದು ಹೇಗೆ ಪೋಷಣೆ ಮಾಡುತ್ತದೆ ಎನ್ನುವುದನ್ನು ತಿಳಿದುಕೊಳ್ಳಿ. ಕೂದಲಿನ ಆರೋಗ್ಯ ಜೊತೆಗೆ ಇತರೆ ರಾಸಾಯನಿಕಗಳ ಬಳಕೆ ಇಂದ ಉಂಟಾದ ಬಳಕೆಯ ಚರ್ಮದ ವ್ಯಾದೆಗಳಿಗೆ ಸಿಗೆ ಕಾಯಿ ಮುಕ್ತಿ ನೀಡುತ್ತದೆ. ಸೀಗೆಕಾಯಿ ಅತಿ ಕಡಿಮೆ ಮಟ್ಟದ ಆಮ್ಲಿಯಂತೆ ಇರುವುದರಿಂದ ಸೂಕ್ಷ್ಮ ಚರ್ಮದವರಿಗೆ ಇದು ಬಹಳಷ್ಟು ಸಹಕಾರಿಯಾಗಿದೆ.
ಹೊಳೆಯುವ ಕೂದಲು ಬೇಕು ಎಂಬ ಆಸೆ ಯಾರಿಗೆ ತಾನೇ ಇರುವುದಿಲ್ಲ. ಅದಕ್ಕೆ ಮಾಡದ ಸಾಹಸಗಳಿಲ್ಲ. ಶಾಂಪೂ, ಹೇರ್ ಪ್ಯಾಕ್ ಹೀಗೆ ಸಕರ್ಸ್ ಮಾಡುತ್ತಾರೆ. ಆದರೆ ಸೀಗೆಕಾಯಿ ಪುಡಿಯಿಂದ ತಲೆಸ್ನಾನ ಮಾಡುವ ಅಭ್ಯಾಸ ಮಾಡಿಕೊಂಡರೆ ಸಾಕು ಸುಂದರ, ಹೊಳೆಯುವ ಕೂದಲು ನಿಮ್ಮದಾಗುತ್ತದೆ. ಕೂದಲನ್ನು ಸೂಕ್ಷ್ಮವಾಗಿ ಮಾಡುವುದರ ಜೊತೆಗೆ ಸದೃಢವನ್ನಾಗಿ ಮಾಡುತ್ತದೆ. ಕೂದಲು ಉದುರುವಿಕೆಯನ್ನು ನಿವಾರಿಸಲು ಸಿಕೆಕಾಯಿಗಿಂತ ಉತ್ತಮ ಬಳಕೆ ಮತ್ತೊಂದಿಲ್ಲ ತಲೆ ಹೊಟ್ಟು ನಿವಾರಣೆಯಲ್ಲಿ ಇದರ ಪಾತ್ರ ಬಹಳ ಮುಖ್ಯವಾದದ್ದು ಆಗಿದೆ. ಸೀಗೆಕಾಯಿಯು ಸಿಹಿ ಮತ್ತು ಸಿಹಿ ಜೀವ ಸತ್ವಗಳ ಆಮ್ಲವಾಗಿದ್ದು ಕೂದಲಿಗೆ ಪೋಷಣೆಯನ್ನು ಒದಗಿಸುತ್ತದೆ.
ನೆತ್ತಿನ ಚರ್ಮದ ಆಮ್ಲೀಯ – ಕ್ಷಾರೀಯ ಅಥವಾ ಪಿ ಎಚ್ ಮಟ್ಟ ಸಮತೋಲನದಲ್ಲಿರುವುದು ಕೂದಲ ಬೆಳವಣಿಗೆಗೆ ಅವಶ್ಯವಾಗಿದೆ. ಸೀಗೆಕಾಯಿ ಸಂಕುಚಕ ಗುಣ ಹೊಂದಿದ್ದು ನೆತ್ತಿಯ ಪಿ ಎಚ್ ಮಟ್ಟವನ್ನು ನಿಯಂತ್ರಿಸುವ ಗುಣ ಹೊಂದಿದೆ. ಈ ಗುಣಗಳು ನೆತ್ತಿಯಲ್ಲಿ ಎದುರಾಗುವ ಸೋಂಕುಗಳ ವಿರುದ್ದ ಹೋರಾಡುತ್ತವೆ ಹಾಗೂ ಸ್ವಚ್ಛವಾಗಿದ್ದು ಆರೋಗ್ಯಕರವಾಗಿರಲು ನೆರವಾಗುತ್ತವೆ. ಇವಲ್ಲವೂ ಕೂದಲ ಉದ್ದ ಹೆಚ್ಚಿಸಲು ನೆರವಾಗುವ ಅಂಶಗಳಾಗಿದ್ದು ಅತ್ಯುತ್ತಮ ಗುಣಮಟ್ಟದ ಹಾಗೂ ಕಾಂತಿಯುಕ್ತ ಕೂದಲು ಬೆಳೆಯಲು ಸಾಧ್ಯವಾಗುತ್ತದೆ.
ಕೂದಲಿಗೆ ಬಣ್ಣ ಹಚ್ಚುವವರು ಕೂದಲನ್ನು ಸೀಗೆಕಾಯಿಯಿಂದ ಚೆನ್ನಾಗಿ ತೊಳೆದುಕೊಂಡು ನಂತರ ಬಣ್ಣ ಲೇಪಿಸಿದಲ್ಲಿ ಸ್ವಾಭಾವಿಕತೆಯನ್ನು ಪಡೆದುಕೊಳ್ಳುತ್ತದೆ. ಹೀಗೆ ಹತ್ತು ಹಲವು ಪ್ರಯೋಜನಗಳನ್ನು ಸೀಗೆಕಾಯಿ ನೀಡುತ್ತದೆ. ಬಹುತೇಕ ಮಂದಿಯಲ್ಲಿ ತಲೆಹೊಟ್ಟು ಸಾಮಾನ್ಯವಾಗಿರುತ್ತದೆ. ಕಲುಷಿತ ವಾತಾವರಣ ಕೂದಲು ಬಹುಬೇಗ ಹಾಳಾಗುವಂತೆ ಮಾಡುತ್ತದೆ.
ತಲೆಹೊಟ್ಟು ನಿವಾರಣೆಗೆ 1 ಚಮಚ ಸೀಗೆಕಾಯಿ, 1 ಚಮಚ ನೆಲ್ಲಿಕಾಯಿ, 1 ಚಮಚ ಆಲಿವ್ ಆಯಿಲ್, 1 ಚಿಕ್ಕ ಕಪ್ ಮೊಸರು ಎಲ್ಲವನ್ನು ಮಿಶ್ರಣ ಮಾಡಿ 2-3 ಗಂಟೆಗಳ ಕಾಲ ನೆನೆಯಲು ಬಿಡಬೇಕು. ಬಳಿಕ ಕೂದಲಿನ ಬುಡಕ್ಕೆ ಹಚ್ಚಿ 30 ನಿಮಿಷಗಳ ಬಳಿ ಸ್ನಾನ ಮಾಡಬೇಕು. ಇದನ್ನು ವಾರಕ್ಕೆ 1 ಬಾರಿ ಹಚ್ಚುವುದರಿಂದ ಕೂದಲಿನ ಆರೋಗ್ಯ ಹೆಚ್ಚುತ್ತದೆ