WhatsApp Group Join Now

ನಮ್ಮಲ್ಲಿ ಅಂದರೆ ನಮ್ಮ ದೇಶದಲ್ಲಿ ಸೊಳ್ಳೆಗಳ ಅವಳಿ ಹೆಚ್ಚಾಗಿದೆ ಅನ್ನೋದು ಎಲ್ಲರಿಗೂ ಗೊತ್ತಿರುವ ವಿಚಾರ ಹಾಗಾಗಿ ನಮ್ಮ ದೇಶದಲ್ಲಿ ಸೊಳ್ಳೆ ಹೋಗಲಾಡಿಸಲು ಹಲವು ರೀತಿಯಾದ ಕ್ರಮಗಳನ್ನು ಕೈಗೊಂಡರು ಸೊಳ್ಳೆಗಳ ಕಾಟ ಕಡಿಮೆಯಾಗಿಲ್ಲ. ಇದರ ಮದ್ಯೆ ನೀವು ಸೊಳ್ಳೆ ಹೋಗಲಾಡಿಸಲು ಬಳಸುವ ಸೊಳ್ಳೆ ಬ್ಯಾಟ್ ಗಳು ಎಷ್ಟು ಅಪಾಯಕಾರಿ ಎಂದು ಒಂದು ಸಂಶೋಧನೆ ತಿಳಿಸಿದೆ ನೋಡಿ.

ಚೀನಾ ನಿರ್ಮಿತ ಅಗ್ಗದ ಸೊಳ್ಳೆ ಬ್ಯಾಟುಗಳಲ್ಲಿ ಮಿತಿ ಮೀರಿದ ಸೀಸದ ಅಂಶವು ಪರಿಸರ ಹಾಗೂ ಮಕ್ಕಳ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ ಎಂದು ಹೈದರಾಬಾದ್ ನ ಸೆಂಟರ್ ಫಾರ್ ಮಟೀರಿಯಲ್ಸ್ ಫಾರ್ ಇಲೆಕ್ಟ್ರಾನಿಕ್ಸ್ ಟೆಕ್ನಾಲಜಿ ಸಂಸ್ಥೆಯ ಸಂಶೋಧಕರು ತಿಳಿಸಿದ್ದಾರೆ.

ಸಂಶೋಧಕರು ನಡೆಸಿದ ಅಧ್ಯಯನದಲ್ಲಿ ಚೀನಾ ನಿರ್ಮಿತ ಸೊಳ್ಳೆ ಬ್ಯಾಟ್ ಗಳಲ್ಲಿ ಮೀತಿ ಮೀರಿದ ಸೀಸದ ಅಂಶ ಇರುವುದು ದೃಢಪಟ್ಟಿದೆ. ಇನ್ನು ಯೂರೋಪ್ ಒಕ್ಕೂಟದ ತಜ್ಞರು ನಿಗದಿಪಡಿಸಿರುವ ಮಾನದಂಡಗಳ ಅನುಸಾರ, ಸೊಳ್ಳೆ ಬ್ಯಾಟ್ ಗಳಲ್ಲಿ ಸೀಸದ ಅಂಶವು ಗರಿಷ್ಠ 1000 ಪಿಪಿಎಂ(ಪಾರ್ಟ್ಸ್ ಪರ್ ಮಿಲಿಯನ್) ಇರಬೇಕು. ಆದರೆ ಚೀನಾ ನಿರ್ಮಿತ ಸೊಳ್ಳೆ ಬ್ಯಾಟ್ ಗಳಲ್ಲಿ ಇದರ ಅಂಶ 3000 ಪಿಪಿಎಂನಿಂದ 82 ಸಾವಿರ ಪಿಪಿಎಂವರೆಗೂ ಇದೆ ಎಂದು ತಿಳಿದುಬಂದಿದೆ.

ಅಂಕಿ-ಅಂಶದ ಪ್ರಕಾರ ಫೆಬ್ರವರಿಯಿಂದ ನವೆಂಬರ್ 2016ರವರೆಗೆ ಚೀನಾದಿಂದ 2 ಲಕ್ಷ ಸೊಳ್ಳೆ ಬ್ಯಾಟ್ ಗಳನ್ನು ಭಾರತ ಆಮದು ಮಾಡಿಕೊಂಡಿದೆ ಎಂದು ವರದಿಯಾಗಿದೆ.

WhatsApp Group Join Now

Leave a Reply

Your email address will not be published. Required fields are marked *