ಸೋರೆಕಾಯಿ ಎಂದರೆ ಹೆಚ್ಚಿನವರು ಮುಖ ಸಿಂಡರಿಸಿಬಿಡುತ್ತಾರೆ! ಆದರೆ ಇದರಲ್ಲಿರುವ ಆರೋಗ್ಯಕಾರಿ ಗುಣಗಳನ್ನು ನೋಡುತ್ತಾ ಹೋದರೆ ಅಚ್ಚ ರಿಯ ಅಚ್ಚರಿ ಆಗುತ್ತದೆ ಅದರಲ್ಲೂ ಇದರ ಪಲ್ಯ, ಸಾಂಬರ್ ಅಥವಾ ಇದರಿಂದ ಜ್ಯೂಸ್ ಮಾಡಿ ಸೇವನೆ ಮಾಡುವುದರಿಂದ, ಮಧುಮೇಹ ಕಾಯಿ ಲೆಯನ್ನು ನಿಯಂತ್ರಣದಲ್ಲಿ ಇಟ್ಟುಕೊಳ್ಳಬಹುದು. ಹಿಂದಿನ ಕಾಲದಲ್ಲಿ ಪರಕೀಯರ ಕಾಯಿಲೆ ಎಂದೇ ಹೆಸರು ಪಡೆದಿರುವ ಈ ಸಕ್ಕರೆಕಾಯಿಲೆ, ಇಂದು ಬಡವ ಶ್ರೀಮಂತ, ಮಕ್ಕಳು, ಹಿರಿಯರು, ಗರ್ಭಿಣಿಯರು ಎನ್ನುವ ಯಾವುದೇ ಭೇದ-ಭಾವ ಇಲ್ಲದೆ ಎಲ್ಲರನ್ನೂ ಕಾಡುವ ಮಾರಕ ಕಾಯಿಲೆ ಎಂದು ಹೆಸರು ಪಡೆದುಕೊಂಡಿದೆ ಒಮ್ಮೆಈ ಕಾಯಿಲೆ ನಮ್ಮನ್ನು ಆವರಿಸಿಬಿಟ್ಟರೆ ಅದರಿಂದ ಸಂಪೂರ್ಣವಾಗಿ ಹೊರಬರಲು ಸಾಧ್ಯವಿಲ್ಲ ಈ ಬಗ್ಗೆ ವೈದ್ಯರೂ ಕೂಡ ಇದೇ ಮಾತನ್ನು ಹೇಳುತ್ತಾರೆ. ಆದರೆ ಈ ಸಮಯದಲ್ಲಿ ವೈದ್ಯರು ನೀಡುವ ಔಷಧಿಗಳು, ಸರಿಯಾದ ಆಹಾರ ಪದ್ಧತಿ ಹಾಗೂ ಜೀವನಶೈಲಿ ನಡೆಸಿಕೊಂಡು ಹೋದರೆ ಮಾತ್ರ, ಈ ಕಾಯಿಲೆಯನ್ನು ನಿಯಂತ್ರಣದಲ್ಲಿ ಇಟ್ಟುಕೊಳ್ಳಬಹುದು.
ಇವೆಲ್ಲಾದರ ಜೊತೆಗೆ ಪ್ರತಿ ತಿಂಗಳು ವೈದ್ಯರ ಬಳಿಗೆ ತೆರಳಿ, ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಪರಿಶೀಲಿಸಬೇಕು, ಅಲ್ಲದೆ ವೈದ್ಯರು ನೀಡಿದ ಮಾತ್ರೆಗಳನ್ನು ಅಥವಾ ಔಷಧಿಗಳನ್ನು ಸರಿಯಾದ ಸಮ ಯಕ್ಕೆ ತೆಗೆದುಕೊಳ್ಳಬೇಕು, ಅಷ್ಟೇ ಅಲ್ಲದೆ ಕೆಲವೊಂದು ವ್ಯಾಯಾಮಗಳನ್ನು ಹಾಗೂ ಯೋಗಾಭ್ಯಾಸಗಳನ್ನು ಕೂಡ ಸರಿಯಾಗಿ ಮಾಡುವುದರಿಂದ, ಈ ಕಾಯಿಲೆಯನ್ನು ನಿಯಂತ್ರಿಸಬಹುದು. ಆದರೆ ಇವೆಲ್ಲದರ ನಡುವೆ ಒಂದು ಗ್ಯೂಡ್ ನ್ಯೂಸ್ ಇದೆ ಇದು ಏನು ಗೊತ್ತಾ ಮಧುಮೇಹ ಕಾಯಿಲೆ ಇದ್ದವರು, ಸೋರೆಕಾಯಿ ಸೇವಿಸುವುದರಿಂದ, ದೇಹದಲ್ಲಿ ಏರಿಕೆ ಕಂಡಿರುವ ಸಕ್ಕರೆ ಅಂಶ ನಿಯಂತ್ರಣಕ್ಕೆ ಬರುತ್ತ ದೆಯಂತೆ ಮುಂದೆ ಓದಿ. ನೋಡಲು ಸಣ್ಣಗೆ ದೊಣ್ಣೆಯಾಕಾರದಲ್ಲಿರುವ ಈ ಸೋರೆಕಾಯಿ, ತನ್ನಲ್ಲಿ ಹಲವಾರು ಬಗೆಯ ಪೋಷಕಾಂಶಗಳನ್ನು ಒಳಗೊಂಡಿದೆ.
ಈ ತರಕಾರಿ, ನೀರಿನಾಂಶವನ್ನು ಹೆಚ್ಚಿನ ಪ್ರಮಾಣದಲ್ಲಿ ಒಳ ಗೊಂಡಿರುವ ಜೊತೆಗೆ ಕಡಿಮೆ ಕ್ಯಾಲೋರಿ ಹಾಗೂ ನಾರಿನಾಂಶವು ಕೂಡ ಯಥೇಚ್ಛವಾಗಿ ಕಂಡು ಬರುವುದರಿಂದ, ಆರೋಗ್ಯ ವೃದ್ಧಿಸುವಲ್ಲಿ ಪ್ರಮುಖ ಪಾತ್ರವಹಿಸುತ್ತದೆ.ನಮ್ಮ ರಕ್ತದಲ್ಲಿನ ಸಕ್ಕರೆಮಟ್ಟ ಏರಿಕೆ ಆಗದಂತೆ ನೋಡಿಕೊಳ್ಳುವುದರ ಜೊತೆಗೆ, ದೇಹದ ಇನ್ಸುಲಿನ್ ಮಟ್ಟವನ್ನು ಸುಧಾರಿಸಲು ಸಹಾಯ ಮಾಡುತ್ತದೆ, ಇದರಿಂದ ಮಧುಮೇಹವನ್ನು ನಿಯಂತ್ರಣದಲ್ಲಿ ಇಟ್ಟುಕೊಳ್ಳಲು ಸಹಾಯವಾಗುವುದು ಹೀಗಾಗಿ ಮಧುಮೇಹ ಇರುವ ರೋಗಿಗಳು ನಿಯಮಿತವಾಗಿ ಸೋರೆಕಾಯಿಯನ್ನು ವಾರಕ್ಕೆ ಒಮ್ಮೆ ಯಾದರೂ, ತಮ್ಮ ಆಹಾರಕ್ರಮದಲ್ಲಿ ಸೇರಿಸಿಕೊಳ್ಳುವುದರ ಜೊತೆಗೆ ಇಲ್ಲಾಂದರೆ ಇದರಿಂದ ಮಾಡಿದ ಜ್ಯೂಸ್ನ್ನು ದಿನಕ್ಕೆ ಒಂದು ಲೋಟ ಕುಡಿಯುತ್ತಾ ಬರುವುದರಿಂದ, ಈ ಕಾಯಿಲೆಯನ್ನು ನಿಯಂತ್ರಣದಲ್ಲಿಇಟ್ಟುಕೊಳ್ಳಬಹುದು.