ದಪ್ಪಗಿದ್ದ ವ್ಯಕ್ತಿ ಮೈ ತೂಕ ಇಳಿಸಿಕೊಂಡಾಗ ತೆಳ್ಳಗೆ ಇದ್ದ ವ್ಯಕ್ತಿ ತುಂಬಾ ದಪ್ಪಗಾದಾಗ ಗರ್ಭಧಾರಣೆಯ ಸಂದರ್ಭದಲ್ಲಿ ಸ್ಟ್ರೆಚ್ ಮಾರ್ಕ್ಸ್ ಬೀಳುವುದು. ಇದು ಚರ್ಮವು ಎಳೆಯಲ್ಪಡುವುದರಿಂದ ಉಂಟಾಗುತ್ತದೆ. ಈ ಸ್ಟ್ರೆಚ್‌ಮಾರ್ಕ್ಸ್ ಅನ್ನು ಆಹಾರಕ್ರಮ ಪಾಲಿಸಿ, ಈ ಮನೆಮದ್ದು ಮಾಡುವುದರ ಮೂಲಕ ಕಡಿಮೆಯಾಗಿಸಬಹುದು ನೋಡಿ.ಇತ್ತೀಚೆಗೆ ಬಾಲಿವುಡ್ ನಟಿ ಜರೀನಾ ಖಾನ್ ಇನ್‌ಸ್ಟಾಗ್ರಾಮ್‌ನಲ್ಲಿ ಒಂದು ಫೋಟೋ ಪೋಸ್ಟ್ ಸಕತ್ ಟ್ರೋಲ್‌ಗೆ ಒಳಗಾಗಿದ್ದರು. ಅವರು ಹಾಕಿದ ಫೋಟೊದಲ್ಲಿ ಹೊಟ್ಟೆಯ ಭಾಗದಲ್ಲಿ ಸ್ಟ್ರೆಚ್ ಮಾರ್ಕ್ಸ್ ಕಾಣಿಸುತ್ತಿತ್ತು.
ಅದನ್ನು ನೋಡಿದ ನೆಟ್ಟಿಗರು ಅವರನ್ನು ಬಾಡಿಶೇಮ್ ಮಾಡಿದ್ದರು.ಅದಕ್ಕೆ ಅವರು ‘ನನ್ನ ಹೊಟ್ಟೆಯಲ್ಲಿ ಏಕೆ ಸ್ಟ್ರೆಚ್ ಮಾರ್ಕ್ ಇದೆ ಎಂಬ ಕೆಟ್ಟ ಕುತೂಹಲ ಕೆಲವರಲ್ಲಿದೆ. 50 ಕೆಜಿ ತೂಕ ಕಳೆದುಕೊಂಡ ವ್ಯಕ್ತಿಯಲ್ಲಿ ಈ ರೀತಿ ಸ್ಟ್ರೆಚ್ ಮಾರ್ಕ್ಸ್ ಬೀಳುವುದು ಸ್ವಾಭಾವಿಕ ಈ ಫೋಟೊವನ್ನು ಯಾವುದೇ ಫೋಟೋಶಾಪ್ ಇಲ್ಲದೆ ಸರ್ಜರಿಯಿಂದ ಸರಿಪಡಿಸದೆ ಹಾಕಲಾಗಿದೆ ಎಂದು ಮರು ಉತ್ತರ ನೀಡಿದ್ದರು.
ದಪ್ಪಗಿದ್ದವರು ಬೇಗನೆ ತೂಕ ಕಳೆದುಕೊಂಡರೆ ಸ್ಟ್ರೆಚ್ ಮಾರ್ಕ್ಸ್ ಬೀಳುವುದು. ಇನ್ನು ಹೆರಿಗೆಯ ಬಳಿಕ ಕೂಡ ಸ್ಟ್ರೆಚ್ ಮಾರ್ಕ್ಸ್ ಬೀಳುವುದು. ದಪ್ಪಗಾದ ತ್ವಚೆ ಸ್ಟ್ರೆಚ್ ಆಗುತ್ತದೆ ಅದೇ ತೆಳ್ಳಗಾದ ತ್ವಚೆ ಬಿಗಿಯಾಗುವುದಿಲ್ಲ ಬೊಜ್ಜು ಕಡಿಮೆಯಾಗುತ್ತಿದ್ದಂತೆ ತ್ವಚೆ ಸಡಿಲವಾಗುತ್ತದೆ ಸ್ಟ್ರೆಚ್ ಮಾರ್ಕ್ಸ್ ಬೀಳಲಾರಂಭಿಸುವುದು. ಸ್ಟ್ರೆಚ್ ಮಾರ್ಕ್ಸ್ ಹೊಟ್ಟೆ, ತೊಡೆ, ಹಿಂಭಾಗ, ಸ್ತನ, ಕೈ ತೋಳುಗಳಲ್ಲಿ ಕಂಡು ಬರುತ್ತದೆ. ಆದ್ದರಿಂದ ಹೆಚ್ಚಿನವರಿಗೆ ತೂಕ ಕಳೆದುಕೊಂಡ ಮೇಲೆ ಆಕರ್ಷಕ ಮೈಕಟ್ಟು ಪಡೆದಿದ್ದೇನೆ ಎನ್ನುವ ಖುಷಿಗಿಂತ ಬಿದ್ದ ಸ್ಟ್ರೆಚ್ ಮಾರ್ಕ್ಸ್‌ನಿಂದಾಗಿ ಬೇಸರವಾಗಿರುತ್ತದೆ. ಇನ್ನು ಕೆಲವರಿಗೆ ಸ್ಟ್ರೆಚ್ ಮಾರ್ಕ್ಸ್ ವಂಶಪಾರಂಪರ್ಯವಾಗಿ ಕೂಡ ಬರುತ್ತದೆ.
ಪೋಷಕಾಂಶಗಳು, ವಿಟಮಿನ್ಸ್, ಖನಿಜಾಂಶಗಳು, ಪ್ರೊಟೀನ್ ಇರುವ ಸಮತೋಲನದ ಆಹಾರವನ್ನು ಸೇವಿಸಿ. ಪೋಷಕಾಂಶಗಳ ಆಹಾರ ಕಡಿಮೆ ತೆಗೆದುಕೊಂಡರೆ ಸ್ಟ್ರೆಚ್ ಮಾರ್ಕ್ಸ್ ಬೀಳುವುದು. ನಿಮ್ಮ ಆಹಾರದಲ್ಲಿ ವಿಟಮಿನ್ ಸಿ, ವಿಟಮಿನ್ ಡಿ, ಪ್ರೊಟೀನ್, ಸತುವಿನಂಶ ಇರಲಿ. ಇದು ತ್ವಚೆ ಆರೋಗ್ಯವನ್ನು ಹೆಚ್ಚಿಸುತ್ತದೆ. ಇನ್ನು ಅಲರ್ಜಿ ತ್ವಚೆ ಸಮಸ್ಯ ಅಸ್ತಮಾ ಸಂಧಿವಾತ ಇವೆಲ್ಲಾ ಸ್ಟ್ರೆಚ್ ಮಾರ್ಕ್ಸ್ ಸಮಸ್ಯೆಯನ್ನು ಮತ್ತಷ್ಟು ಹೆಚ್ಚಿಸುವುದು.
ಮಾಯಿಶ್ಚರೈಸರ್ ಖರೀದಿಸುವಾಗ ವಿಟಮಿನ್ ಎ, ವಿಟಮಿನ್ ಇ ಅಥವಾ ಹೈಲುರಾನಿಕ್ ಆಮ್ಲದಂತಹ ಪದಾರ್ಥಗಳನ್ನು ಹೊಂದಿರುವುದನ್ನು ಖರೀದಿಸಿ. ಚರ್ಮದ ಆರೋಗ್ಯಕ್ಕೆ ಪೂರಕವಾಗಿ ಸಾಕಷ್ಟು ನೀರು ಕುಡಿಯಿರಿ. ಕಾಲಜನ್ ಉತ್ಪಾದನೆಯನ್ನು ಉತ್ತೇಜಿಸುವ ಹಲವಾರು ಆಹಾರ ಪದಾರ್ಥಗಳನ್ನು ಸೇವಿಸಬಹುದು. ಎಪಿಡರ್ಮಲ್ ಕ್ಷೀಣತೆಯನ್ನು ತಡೆಗಟ್ಟಲು ವಿಟಮಿನ್ ಡಿ ಸಮೃದ್ಧ ಆಹಾರಗಳಾದ ಮೀನು ಎಣ್ಣೆ, ಸಮುದ್ರ ಮೀನು ಮತ್ತು ಮೊಟ್ಟೆಯ ಹಳದಿ ಸೇವಿಸಿ.