ಕೆಲವು ದಿನಗಳ ಹಿಂದೆ ತುಂಬಾನೇ ವೈರಲ್ ಆದ ಈ ಪುಟ್ಟ ಬಾಲಕನ ವಿಡಿಯೋ ನಾವೆಲ್ಲ ನೋಡಿರುತ್ತೇವೆ. ಅದರಲ್ಲಿ ಹೇಳುವ ಪ್ರಕಾರ ಪುಟ್ಟ ಬಾಲಕನು ಮುಂದೆ ಇರುವ ಗ್ಲಾಸ್ ಅನ್ನು ವರಿಸುತ್ತಾಅಲ್ಲೇ ಇದ್ದ ಫಸ್ಟ್ಯಾಗ್ ಸ್ಕ್ಯಾನರ್ ಅನ್ನು ತನ್ನ ಗಡಿಯಾರದಿಂದ ಸ್ಕ್ಯಾನ್ ಮಾಡುತ್ತಾನೆ. ಅವರು ಹೇಳುವ ಪ್ರಕಾರ ಹೀಗೆ ನಮ್ಮ ಹಣವನ್ನು ಲೂಟಿ ಮಾಡುತ್ತಾರೆ ಎಂದು ವಿಡಿಯೋ ವೈರಲ್ ಆಗಿತ್ತು. ರಾಷ್ಟ್ರೀಯ ಹೆದ್ದಾರಿಯ ಟೋಲ್ ಫ್ಲಾಜಾಗಳಲ್ಲಿ ಟೋಲ್ ಪಾವತಿಯನ್ನು ಸುಲಭವಾಗಿಸಲು ಫಾಸ್ಟ್‌ಟ್ಯಾಗ್ ಪದ್ಧತಿಯನ್ನು ಅಭಿವೃದ್ಧಿಪಡಿಸಲಾಗಿದೆ. ಇದರಿಂದ ಸಾಕಷ್ಟು ಅನುಕೂಲಗಳು ಇವೆ. ಆದರೆ, ಕಳೆದೆರಡ್ಮೂರು ದಿನಗಳಿಂದ ಈ ಫಾಸ್ಟ್‌ಟ್ಯಾಗ್ ಬಗೆಗಿನ ವಿಡಿಯೋವೊಂದು ಸಖತ್ ವೈರಲ್ ಆಗುತ್ತಿದೆ. ಸ್ಮಾರ್ಟ್ ವಾಚ್ ಮೂಲಕ ಸ್ಕ್ಯಾನ್ ಮಾಡಿ ಫಾಸ್ಟ್‌ಟ್ಯಾಗ್‌ನಿಂದ ಹಣ ಲಪಟಾಯಿಸಲಾಗುತ್ತದೆ ಎಂಬಂತಹ ಭಯ ಸೃಷ್ಟಿಸುವ ವಿಡಿಯೋವದು.
ಕಾರು ಸ್ವಚ್ಛ ಮಾಡುವ ನೆಪದಲ್ಲಿ ಬರುವ ಮಕ್ಕಳು ಸ್ಮಾರ್ಟ್‌ವಾಚ್ ಮೂಲಕ ಹಣ ಲಪಟಾಯಿಸುತ್ತಾರೆ ಎಂದು ತೋರಿಸುವ ವಿಡಿಯೋವದು. ಕಾರಿನಲ್ಲಿದ್ದ ಇಬ್ಬರು ಕಾರು ಸ್ವಚ್ಛ ಮಾಡಲು ಬಂದಿದ್ದ ಹುಡುಗನ ಬಳಿ ಆತನ ಕೈಯಲ್ಲಿರುವ ಸ್ಮಾರ್ಟ್‌ವಾಚ್ ಬಗ್ಗೆ ಕೇಳುತ್ತಾರೆ. ಈ ವಾಚ್ ಬಗ್ಗೆ ಕೇಳುತ್ತಿದ್ದಂತೆಯೇ ಆ ಹುಡುಗ ಅಲ್ಲಿಂದ ಓಡಿ ಹೋಗುತ್ತಾನೆ. ಈ ವೇಳೆ, ಒಬ್ಬರು ಆ ಬಾಲಕನನ್ನು ಹಿಡಿಯುವ ಯತ್ನ ಮಾಡುತ್ತಾರೆ. ಆದರೆ, ಬಾಲಕ ಕೈಗೆ ಸಿಗದೆ ತಪ್ಪಿಸಿಕೊಳ್ಳುತ್ತಾನೆ. ಆಗ ಕಾರು ಚಾಲಕ ಈ ಬಗ್ಗೆ ಆ ವ್ಯಕ್ತಿಯಲ್ಲಿ ವಿವರಿಸುತ್ತಾರೆ. ಕಾರಿನ ವಿಂಡ್‌ಶೀಲ್ಡ್ ಸ್ವಚ್ಛ ಮಾಡುವಾಗ ಸ್ಮಾರ್ಟ್ ವಾಚ್ ಮೂಲಕ ಫಾಸ್ಟ್‌ಟ್ಯಾಗ್ ಸ್ಕ್ಯಾನ್ ಮಾಡಿ ಬಾಲಕ ಹಣ ಲಪಟಾಯಿಸುವ ಯತ್ನ ಮಾಡಿದ್ದಾನೆ. ಇದು ಈಗಿನ ಹೊಸ ಮೋಸದಾಟ ಎಂದು ಹೇಳುತ್ತಾರೆ.
ಆದರೆ ಇದರ ಬಗ್ಗೆ ಪೇಟಿಎಂ ಎಂಬ ಕಂಪನಿ ಸ್ಪಷ್ಟನೆ ನೀಡಿದೆ.ನ್ಯಾಷನಲ್ ಪೇಮೆಂಟ್ಸ್ ಕೌನ್ಸಿಲ್ ಆಫ್ ಇಂಡಿಯಾ ಕೂಡಾ ಈ ಬಗ್ಗೆ ಸ್ಪಷ್ಟನೆ ನೀಡಿದ್ದು, `ಸ್ಕ್ಯಾನ್ ಮಾಡಿ ಯಾರೂ ಹಣವನ್ನು ಕದಿಯಲು ಸಾಧ್ಯವಿಲ್ಲ’ ಎಂದು ಹೇಳಿಕೊಂಡಿದೆ. ಈ ಮೂಲಕ ಈ ಬಗ್ಗೆ ಜನರಿಗೆ ಇದ್ದ ಅನುಮಾನ, ಭಯವನ್ನೂ ದೂರವಾಗಿಸಿದೆ.ಇವರು ಹೇಳುವ ಪ್ರಕಾರ ಕೇವಲ ಟೂಲ್ ಕೌಂಟರಲ್ಲಿ ಮಾತ್ರಈ ಹಣವನ್ನು ನಾವು ತೆಗೆದುಕೊಳ್ಳಬಹುದು ಎಂದು ಹೇಳಿದ್ದಾರೆ ಇದು ವಿಡಿಯೋದಲ್ಲಿರುವುದು ಶುದ್ಧ ಸುಳ್ಳು ಎಂದುಕಂಪನಿ ಆರೋಪಿಸಿದೆ.ಯಾರೂ ಭಯಪಡಬೇಕಾಗಿಲ್ಲ. ಹೀಗಾಗಿ, ಎಲ್ಲರೂ ಆತಂಕವನ್ನು ಬಿಡುವ ಜತೆಗೆ ಇತರರಿಗೂ ಈ ಬಗ್ಗೆ ಜಾಗೃತಿ ಮೂಡಿಸಬೇಕಾಗಿದೆ.