ಸೊಪ್ಪಿನ ಸೇವನೆಯಿಂದ ದೇಹದಲ್ಲಿ ಸಾಕಷ್ಟು ಬದಲಾವಣೆಗಳನ್ನು ಕಂಡುಕೊಳ್ಳಬಹುದು. ಆರೋಗ್ಯ ವೃದ್ಧಿಸುವ ಅನೇಕ ಸೊಪ್ಪುಗಳು ವಿವೇ ದೇಹಕ್ಕೆ ಬೇಕಾದ ಪೋಷಕಾಂಶ ನಾರಿನ ಅಂಶ ನೀಡುವ ಸೊಪ್ಪುಗಳು ಆರೋಗ್ಯವನ್ನು ಕಾಪಾಡಿಕೊಳ್ಳಲು ಇರುವ ಉತ್ತಮ ಮಾರ್ಗವಾಗಿದೆ. ಅಂತಹ ಸೊಪ್ಪುಗಳಲ್ಲಿ ಹರಿವೆ ಸೊಪ್ಪು ಕೂಡ ಒಂದು ಕೆಂಪು ಬಣ್ಣದ ಎಲೆಯನ್ನು ಹೊಂದಿರುವ ಈ ಹರಿವೆ ಸೊಪ್ಪು ಹೇರಳವಾದ ಪ್ರೋಟೀನ್ ಕ್ಯಾಲ್ಸಿಯಂ ಸತ್ತು ಸೇರಿದಂತೆ ಅಗತ್ಯ ಜೀವಸತ್ವಗಳನ್ನು ಹೊಂದಿದೆ.

ಇವುಗಳಿಂದ ದೇಹದಲ್ಲಿ ಇರುವ ಉತ್ಕರ್ಷಣ ಗುಣಗಳಿಂದ ಹಿಡಿದು ಕೆಂಪು ರಕ್ತ ಕಣ ಉತ್ಪಾದನೆ ಜೀರ್ಣಕ್ರಿಯೆಯನ್ನು ಉತ್ತಮವಾಗಿಸಿರುವವರೆಗೂ ಹರಿವೆ ಸೊಪ್ಪು ಸಹಾಯಕಾರಿಯಾಗಿದೆ ಚಳಿಗಾಲದಲ್ಲಿ ಹೆಚ್ಚಾಗಿ ಸಿಗುವ ಈ ಸೊಪ್ಪು ಆರೋಗ್ಯಕ್ಕೆ ಇನ್ನೂ ಯಾವೆಲ್ಲ ಪ್ರಯೋಜನಗಳು ನೀಡುತ್ತವೆ ಎಂಬುದನ್ನು ಇವತ್ತಿನ ಮಾಹಿತಿಯ ಮುಖಾಂತರ ತಿಳಿದುಕೊಳ್ಳೋಣ ಬನ್ನಿ.

ಹರಿವೆ ಸೊಪ್ಪನ್ನ ಹೆಚ್ಚಾಗಿ ಬಳಸುವುದರಿಂದ ನಮ್ಮ ದೇಹದಲ್ಲಿನ ಕೊಲೆಸ್ಟ್ರಾಲನ್ನು ಕಡಿಮೆ ಮಾಡಿ ದೇಹದ ತೂಕವನ್ನು ಇಳಿಸುವಲ್ಲಿ ಸಹಕಾರಿಯಾಗಿದೆ.ಹರಿವೆ ಸೊಪ್ಪು ವಿಟಮಿನ್ ಎ ಅತ್ಯಧಿಕವಾಗಿದೆ ಮತ್ತು ಇದು ದೇಹಕ್ಕೆ ದಿನದ ಅಗತ್ಯಕ್ಕೆ ಬೇಕಾಗಿರುವ ಶೇ.97ರಷ್ಟು ವಿಟಮಿನ್ ಒದಗಿಸುವುದು ವಿಟಮಿನ್ ಎ ಆರೋಗ್ಯಕಾರಿ ಚರ್ಮ ಹಾಗೂ ದೃಷ್ಟಿಗೆ ಅತೀ ಅಗತ್ಯ.

ಅನಾರೋಗ್ಯದಿಂದ ಗುಣಮುಖರಾಗುತ್ತಿರುವವರು ಮತ್ತು ಉಪವಾಸ ಬಿಡುವವರಿಗೆ ಹರಿವೆ ಸೊಪ್ಪನ್ನು ನೀಡಲಾಗುತ್ತದೆ. ಯಾಕೆಂದರೆ ಇದು ಸುಲಭವಾಗಿ ಜೀರ್ಣವಾಗುವುದು. 100 ಗ್ರಾಂ ಅರಿವಿ ಸೊಪ್ಪಿನಲ್ಲಿ ಸರಿಸುಮಾರು ಶೇಕಡ 70ರಷ್ಟು ದೇಹಕ್ಕೆ ಪ್ರತಿದಿನ ಬೇಕಾಗುವ ವಿಟಮಿನ್ ಸಿ ಅಂಶವಿದೆ. ನೀರಿನಲ್ಲಿ ಕರಗವಲ್ಲ ವಿಟಮಿನ್ ಆಗಿದೆ ಹೀಗಾಗಿ ಸೋಂಕಿನ ವಿರುದ್ಧ ಹೋರಾಡಿ ದೇಹವನ್ನು ರಕ್ಷಿಸುತ್ತದೆ. ಅದಲ್ಲದೆ ಇದರಲ್ಲಿ ಇನ್ನೊಂದು ನಾರಿನ ಅಂಶ ತೂಕ ಇಳಿಕೆಗೆ ಮಲಬದ್ಧತೆ ನಿವಾರಣೆಗೂ ಸಹಾಯಕವಾಗಿದೆ.

ಹೀಗಾಗಿ ಅರಿವೇಸೊಪ್ಪನ್ನು ಕಿಚ್ಚಡಿ ಸಾಂಬಾರು ಪಲ್ಯದಂತಹ ಪದಾರ್ಥಗಳಲ್ಲಿ ಸೇವಿಸಬಹುದಾಗಿದೆ ಇನ್ನು ಕಡಿಮೆ ಕೊಲೆಸ್ಟ್ರಾಲ್ ಅಂಶವನ್ನು ಹೊಂದಿರುವ ಅರಿವೆ ಸೊಪ್ಪಿನ ಸೇವನೆಯಿಂದ ದೇಹದಲ್ಲಿ ರಕ್ತದ ಒತ್ತಡವನ್ನು ಸಮತೋಲನದಲ್ಲಿ ಇಟ್ಟುಕೊಳ್ಳಬಹುದು. ಈ ಸೊಪ್ಪಿನಲ್ಲಿ ಕರಗ ಬಲ್ಲ ಹಾಗೂ ಕರಗದ ನಾರಿನಾಂಶವಿದೆ ಅರಿವೆ ಸೊಪ್ಪಿನ ಸೇವನೆಯಿಂದ ದೇಹದ ತೂಕವನ್ನು ಕಡಿಮೆ ಮಾಡಬಹುದಾಗಿದೆ.

ಇದರಲ್ಲಿ ಇರುವ ಕಡಿಮೆ ಕೊಲೆಸ್ಟ್ರಾಲ್ ಮಟ್ಟದಿಂದ ಹೃದಯಕ್ಕೆ ಸಂಬಂಧಿಸಿದ ಸಮಸ್ಯೆಯನ್ನು ನಿವಾರಿಸಬಹುದು.ಹರಿವೆ ಸೊಪ್ಪಿನಲ್ಲಿ ಕ್ಯಾಲ್ಸಿಯಂ ಅಧಿಕವಾಗಿದೆ ಮತ್ತು ಅಸ್ಥಿರಂಧ್ರತೆ ಮತ್ತು ಮೂಳೆಗೆ ಸಂಬಂಧಿಸಿದ ಇತರ ಸಮಸ್ಯೆ ಎದುರಿಸುತ್ತಿರುವವರಿಗೆ ಇದು ತುಂಬಾ ಪರಿಣಾಮಕಾರಿ. ಕ್ಯಾಲ್ಸಿಯಂ ಕೊರತೆಯನ್ನು ಇದು ನೀಗಿಸುವುದು. ಕೆಲವು ಹೆಣ್ಣು ಮಕ್ಕಳಲ್ಲಿ ಕೂದಲು ಉದುರುವ ಸಮಸ್ಯೆ ಇರುತ್ತದೆ. ಅಂತವರು ಹರಿವೆ ಸೊಪ್ಪನ್ನು ಹೆಚ್ಚಾಗಿ ಬಳಸುವುದರಿಂದ ಅದರಲ್ಲಿರುವ ಎಲ್ಲ ರೀತಿಯ ಪೋಷಕಾಂಶಗಳು ಕೂದಲಿಗೆ ದೊರಕುತ್ತವೆ. ಇದರಿಂದ ಕೂದಲು ಉದುರುವುದು ಕಡಿಮೆಯಾಗಿ ಸೊಂಪಾಗಿ ಬೆಳೆಯಲು ಸಹಕಾರಿಯಾಗುತ್ತದೆ.

Leave a Reply

Your email address will not be published. Required fields are marked *