ನಮಸ್ತೇ ಪ್ರಿಯ ಓದುಗರೇ, ತರಕಾರಿ ಅಂದರೆ ಸಾಕು ಮಕ್ಕಳು ಮುನಿಸಿಕೊಂಡು ಊಟವನ್ನು ಮಾಡದೇ ಹೋಗುತ್ತಾರೆ. ಹೌದು ಅವರಿಗೆ ಈ ತರಕಾರಿ ಸೊಪ್ಪು ಅಂದ್ರೆ ಸ್ವಲ್ಪವೂ ಇಷ್ಟ ಆಗುವುದಿಲ್ಲ. ಆದರೆ ಅದರಲ್ಲಿ ಇರುವಂತಹ ಪೌಷ್ಠಿಕಾಂಶಗಳ ಬಗ್ಗೆ ಅವರಿಗೆ ತಿಳಿದಿಲ್ಲ. ತರಕಾರಿಗಳಲ್ಲಿ ಒಂದಾಗಿರುವಂತಹ ಬೆಂಡೆಕಾಯಿಯು ನಮ್ಮ ಆರೋಗ್ಯಕ್ಕೆ ಹಲವು ರೀತಿಯಲ್ಲಿ ನೆರವಾಗುವುದು. ಬೆಂಡೆಕಾಯಿ ಎಂಬ ತರಕಾರಿಯನ್ನು ಹಲವು ರೀತಿಯ ಜೀವಸತ್ವಗಳ ಆಗಾರ ಎನ್ನಬಹುದು. ಇದರಿಂದ ತಯಾರಿಸುವ ಅಡುಗೆ ಸಹ ಬಹಳ ರುಚಿಯಾಗಿರುತ್ತದೆ. ಲೇಡಿ ಫಿಂಗರ್ ಅಂತ ಕರೆಸಿಕೊಳ್ಳುವ ಈ ಬೆಂಡೆ ಕಾಯಿ ಹಲವಾರು ಬಗೆಯ ಆರೋಗ್ಯಕರ ಪ್ರಯೋಜನಗಳನ್ನು ಹೊಂದಿದೆ. ಮೂವತ್ತು ಕ್ಯಾಲೋರಿ ಹೊಂದಿರುವ ತರಕಾರಿಯಲ್ಲಿ ಈ ಬೆಂಡೆ ಕಾಯಿ ಕೂಡ ಒಂದಾಗಿದೆ. ನಿಮಗೆ ಗೊತ್ತೇ ಒಂದು ಟೊಮ್ಯಾಟೋ ಹಣ್ಣು ತಿನ್ನುವುದರಿಂದ ಸಿಗುವ ಲಾಭ ಕೇವಲ ಬೆಂಡೆ ಕಾಯಿ ತಿನ್ನುವುದರಿಂದ ಸಿಗುತ್ತದೆ ಅಂದರೆ ನೀವು ನಂಬಲೇಬೇಕು ಗೆಳೆಯರೇ. ಇದರಲ್ಲಿ ಕಾರ್ಬೋಹೈಡ್ರೇಟ್ ನಾರಿನ ಅಂಶ,ಪ್ರೊಟೀನ್ ಸುಣ್ಣ ಪೊಟ್ಯಾಶಿಯಂ, ಪೊಳಿಕ್ ಆಸಿಡ್ ಹಾಗೂ ವಿಟಮಿನ್ ಅಂಶಗಳನ್ನು ಹೇರಳವಾಗಿ ಹೊಂದಿದೆ. ಹಾಗಾದರೆ ಇಂದಿನ ಲೇಖನದಲ್ಲಿ ನಾವು ನಿಮಗೆ ಬೆಂಡೆ ಕಾಯಿ ಆರೋಗ್ಯಕರ ಗುಣಗಳನ್ನು ತಿಳಿಸಿ ಕೊಡುತ್ತೇವೆ ಬನ್ನಿ ಕೊಂಚ ಸಮಯ ಮಾಡಿಕೊಂಡು ಈ ಆರೋಗ್ಯಕರ ಉಪಯುಕ್ತ ಮಾಹಿತಿಯನ್ನು ಕೊನೆಯವರೆಗೂ ಓದಿ.
ಮೊದಲನೆಯದು, ಬೆಂಡೆಕಾಯಿಯಲ್ಲಿ ಹೀರಿಕೊಳ್ಳುವ ನಾರಿನಾಂಶ ಪೆಕ್ಟಿನ್ ಇದೆ. ಪೆಕ್ಟಿನ್ ದೇಹದಲ್ಲಿ ಕೆಟ್ಟ ಕೊಲೆಸ್ಟ್ರಾಲ್ ನ್ನು ಕಡಿಮೆ ಮಾಡುವುದು ಮತ್ತು ಅಪಧಮನಿಕಾಠಿಣ್ಯ ತಡೆಯುವುದು. ಜಮೆಯಾಗಿರುವಂತಹ ಕೊಲೆಸ್ಟ್ರಾಲ್ ಮತ್ತು ಹೆಪ್ಪುಗಟ್ಟುವಿಕೆಯನ್ನು ಇದು ತಡೆಯುವುದು. ಮಧುಮೇಹಿಗಳಿಗೆ ಬೆಂಡೆ ಕಾಯಿ ರಾಮಬಾಣ. ಹೊಟ್ಟೆಗೆ ಹಾಗೂ ದೇಹಕ್ಕೆ ಬೆಂಡೆ ಕಾಯಿ ತಂಪು ನೀಡುತ್ತದೆ. ಮತ್ತು ಹೊಟ್ಟೆ ಉರಿ ಗುದದ್ವಾರದ ಉರಿ ಕೂಡ ಕಡಿಮೆ ಆಗುತ್ತದೆ. ಬೆಂಡೆಕಾಯಿ ನಿಮ್ಮ ದೇಹದಲ್ಲಿನ ಇಮ್ಯುನಿಟಿ ಪವರ್ ಹೆಚ್ಚು ಮಾಡುತ್ತದೆ. ಸಾಮಾನ್ಯವಾಗಿ ಊಟದ ಬಳಿಕ ಸಕ್ಕರೆ ಮಟ್ಟವು ಏರಿಕೆ ಆಗುವುದನ್ನು ಇದು ತಡೆಯುವುದು ಮತ್ತು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಸ್ಥಿರಗೊಳಿಸುವುದು. ನಾರಿನಾಂಶವು ರಕ್ತದಲ್ಲಿನ ಸಕ್ಕರೆ ಮಟ್ಟ ಕಡಿಮೆ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸುವುದು ಉಂಟು ಈ ಬೆಂಡೆ ಕಾಯಿ.
ಕರುಳಿನ ಕ್ಯಾನ್ಸರ್ ತಡೆಯಲು ಬೆಂಡೆ ಕಾಯಿ ಸಹಾಯ ಮಾಡುತ್ತದೆ. ದೇಹದ ಬೊಜ್ಜು ಕಡಿಮೆ ಮಾಡಲು ಬೆಂಡೆ ಕಾಯಿ ತಿನ್ನುವುದು ಉತ್ತಮ. ಏಕೆಂದರೆ ಇದು ದೇಹ ಚಯಾಪಚಯ ಕ್ರಿಯೆಯ ಮೇಲೆ ಪರಿಣಾಮ ಬೀರಿ ಜೀರ್ಣಕ್ರಿಯೆ ವ್ಯವಸ್ಥೆಯನ್ನು ಉತ್ತಮಗೊಳಿಸುತ್ತದೆ. ಇದರಿಂದ ದೇಹ ತೂಕವು ನಿಯಂತ್ರಣಕ್ಕೆ ಬರಲಿದೆ. ಇನ್ನೂ ರಾತ್ರಿ ಮಲಗುವಾಗ ಬೆಂಡೆ ಕಾಯಿಯನ್ನು ಚಿಕ್ಕದಾಗಿ ಕತ್ತರಿಸಿ ಅದನ್ನು ಒಂದು ಲೋಟ ನೀರಿನಲ್ಲಿ ನೆನೆಸಿ ಇಡಿ ಮರುದಿನ ಬೆಳ್ಳಗ್ಗೆ ಆ ನೀರಿನಿಂದ ನಿಮ್ಮ ಮುಖವನ್ನು ಮಸಾಜ್ ಮಾಡಿಕೊಳ್ಳಿ ಅದು ಪೂರ್ತಿ ಒಣಗಿದ ಬಳಿಕ ನೀರಿನಿಂದ ತೊಳೆದುಕೊಳ್ಳಿ. ಇದರಿಂದ ನಿಮಗೆ ಮುಖದಲ್ಲಿ ಮೊಡವೆಗಳು ಮೂಡುವುದಿಲ್ಲ. ಮುಖವೂ ಸುಂದರವಾಗಿ ಕಾಣುತ್ತದೆ. ಹಾಗೂ ಬೆಂಡೆ ಕಾಯಿ ನಮ್ಮ ಕಣ್ಣಿನ ದೃಷ್ಟಿ ಸಾಮರ್ಥ್ಯ ಕ್ಕೆ ಒಳ್ಳೆಯದು.
ನಿತ್ಯವೂ ಊಟದಲ್ಲಿ ಬೆಂಡೆ ಕಾಯಿ ಸೇವನೆ ಮಾಡುವುದರಿಂದ ಅಸ್ತಮಾ ಕಾಯಿಲೆ ದೂರ ಮಾಡಿಕೊಳ್ಳಬಹುದು. ಎಳೆ ಬೆಂಡೆ ಕಾಯಿ ಜೊತೆಗೆ ಹಾಲು ಬೆರೆಸಿ ಕುಡಿಯುವುದರಿಂದ ಗುಪ್ತಚರ ಆಸಕ್ತಿ ಹೆಚ್ಚುತ್ತದೆ. ಸುಕ್ಕು ಮೊಡವೆ ಕಪ್ಪು ಕಲೆಗಳು ಮಾಯವಾಗಿಸುವಂತೆ ಮಾಡುತ್ತದೆ ಈ ಬೆಂಡೆ ಕಾಯಿ. ಬೆಂಡೆ ಕಾಯಿ ಸೇವನೆ ಮಾಡುವುದರಿಂದ ಚರ್ಮ ಸೌಂದರ್ಯವನ್ನು ಹೆಚ್ಚಿಸುವುದಲ್ಲದೆ, ಕಣ್ಣಿನ ಕಾಯಿಲೆಗಳನ್ನು ದೂರ ಮಾಡುತ್ತದೆ. ಈ ಮಾಹಿತಿ ನಿಮಗೆ ಇಷ್ಟವಾದರೆ ಲೈಕ್ ಮಾಡಿ ಮತ್ತು ಶೇರ್ ಮಾಡಿ ಶುಭದಿನ.