WhatsApp Group Join Now

ಸೈಕಲ್ ಹಾಗು ಡ್ರೋನ್ ಬಳಸಿ ತಮ್ಮ ಸಾಧನೆಯನ್ನು ತೋರಿಸಿರುವಂತ ಈ ಯುವಕರು ನೆಲಮಂಗಲ ತಾಲೂಕಿನ ಸರಕಾರಿ ಶಾಲೆಯ ಇಬ್ಬರು ಪ್ರತಿಭಾವಂತ ವಿದ್ಯಾರ್ಥಿಗಳು, ಸೋಲದೇವನಹಳ್ಳಿಯ ವೈದ್ಯರತ್ನ ಲಕ್ಷಮ್ಮ ಗಂಗಣ್ಣ ಸರಕಾರಿ ಪ್ರೌಢಶಾಲೆಯಲ್ಲಿ 10ನೇ ತರಗತಿಯ ಎಂ. ಜನಾರ್ಧನ್‌ ಹಾಗೂ ಎಂ. ಆರ್‌. ಮಧುಕುಮಾರ್‌ ಎಂಬುವವರು ತಮ್ಮ ಪ್ರತಿಭೆಯನ್ನು ತೋರಿಸಲು ಅಮೆರಿಕಾಗೆ ಹೊರಟಿದ್ದಾರೆ.

ಏಪ್ರಿಲ್ ತಿಂಗಳಿನಲ್ಲಿ ನಡೆಯಲಿರುವಂತ ಅಂತಾರಾಷ್ಟೀಯ ವಿಜ್ಞಾನ ಮಾದರಿ ಪ್ರದರ್ಶನದಲ್ಲಿ ತಮ್ಮ ಅನ್ವೇಷಣೆಯ ವಿಧಿ ವಿಧಾನವನ್ನು ಪ್ರಸ್ತುತ ಪಡಿಸಲಿದ್ದಾರೆ. ಬೆಂಗಳೂರಲ್ಲಿ ಇತ್ತೀಚೆಗೆ ನಡೆದ ಭಾರತದ ದಕ್ಷಿಣವಲಯ ವಿಜ್ಞಾನ ಮಾದರಿ ಪ್ರದರ್ಶನದಲ್ಲಿ ಪ್ರಥಮ ಸ್ಥಾನ ಪಡೆದಿದ್ದರು.

ಹಳೆ ಸೈಕಲ್ ಅನ್ನು ಬಿತ್ತನೆ ಮಾಡಲು, ಕಳೆ ತೆಗೆಯಲು ಹಾಗೂ ಕೀಟನಾಶಕ ಸಿಂಪಡಿಸಲು ಅನುಕೂಲವಾಗುವಂತೆ ಮರುವಿನ್ಯಾಸಗೊಳಿಸಿದ್ದಾರೆ, ಇದರಿಂದ ರೈತರಿಗೆ ಹೆಚ್ಚು ಸಹಕಾರಿಯಾಗಲಿದೆ.

ಈ ಪ್ರತಿಭೆಗಳು ತಯಾರಿಸಿರುವಂತ ಡ್ರೋನ್ ರೈತರ ಬೆಳೆಗಳನ್ನು ಕೀಟಬಾಧೆಯಿಂದ ಮುಕ್ತಗೊಳಿಸಲು ಈ ಉಪಕರಣ ಹೆಚ್ಚು ಪರಿಣಾಮಕಾರಿ. ಇವರು ಅನ್ವೇಷಿಸಿರುವ ಈ ಮಾದರಿ ಡ್ರೋಣ್‌ಗೆ, 1 ಲೀಟರ್‌ ನೀರನ್ನು ಮೇಲೆತ್ತುವ ಸಾಮರ್ಥ್ಯ‌ವಿದ್ದು, ದ್ರಾಕ್ಷಿತೋಟ, ಕಾಫಿ, ತೆಂಗಿನಮರ ಹಾಗೂ ತುಂಬಾ ಎತ್ತರದ ಮರಗಳಿಗೂ ಕೀಟನಾಶಕ ಸಿಂಪಡಿಸಬಹುದಾಗಿದೆ.

ಈ ಪ್ರತಿಭೆಗಳಿಗೆ ನೆರವಾದವರು:ಶಾಲೆಯ ವಿಜ್ಞಾನ ಶಿಕ್ಷಕಿ ಬಿ.ಎಸ್‌ ಪುಷ್ಪಾ, ಮುಖ್ಯ ಶಿಕ್ಷಕಿ ಟಿ.ದೇವಿಕಾ ಅವರು ಮತ್ತು ಸಹಪಾಠಿ ಸ್ನೇಹಿತ ಮಧು ನಾಯಕ್‌ ಕಚ್ಚಾ ಸಾಮಾಗ್ರಿಗಳನ್ನು ಒದಗಿಸಿ ನೆರವಾಗಿದ್ದಾರೆ. ಒಟ್ಟು ಈ ಸಾಧನವನ್ನು ತಯಾರಿಸಲು ಈ ವಿದ್ಯಾರ್ಥಿಗಳಿಗೆ 18 ಸಾವಿರ ವೆಚ್ಚವಾಗಿದೆ.

ಈ ಪ್ರತಿಭೆಗಳಿಗೆ ಸಹಾಯಬೇಕಿದೆ: ಹೌದು ಅಂತಾರಾಷ್ಟ್ರೀಯ ಮನ್ನಣೆಗೆ ಪಾತ್ರರಾಗಿರುವ ಬಡಕುಟುಂಬದ ಈ ಪ್ರತಿಭೆಗಳಿಗೆ ಅಮೆರಿಕಕ್ಕೆ ಹೋಗಲು ಸರಕಾರ, ಸಂಘಸಂಸ್ಥೆಗಳ ಸಹಾಯಹಸ್ತ ಬೇಕಾಗಿದೆ ಅನ್ನೋದನ್ನ ತಿಳಿಯಲಾಗಿದೆ.

WhatsApp Group Join Now

Leave a Reply

Your email address will not be published. Required fields are marked *