ತರಕಾರಿ ಮಾರುಕಟ್ಟೆಯಲ್ಲಿ ಇನ್ನೂ ಕಾಯಿ ಆಗಿರುವ ದಪ್ಪನೆಯ ಕಲ್ಲುಬಾಳೆಗಳನ್ನು ಇರಿಸಿ. ಇದನ್ನು ನಾವು ತರಕಾರಿ ರೂಪದಲ್ಲಿ ಪರಿಗಣಿಸುತ್ತೇವೆ ವಿನಹ ಣ್ಣಿನ ರೂಪದಲ್ಲಿ ಅಲ್ಲ ಬಾಳೆಕಾಯಿಯನ್ನು ಹಾಗೆ ತಿನ್ನಲು ಆಗುವುದಿಲ್ಲ ಬದಲಿಗೆ ಉರಿದು ಬೇಯ್ಸಿ ಸಾರಿನಲ್ಲಿ ಅಥವಾ ಪಲ್ಯದಲ್ಲಿ ಉಪಯೋಗಿಸಿ ಸೇವಿಸುತ್ತೇವೆ. ಬಾಳೆಕಾಯಿ ಸಾಮಾನ್ಯವಾಗಿ ಕಲ್ಲು ಬಾಳಿ ಕಾಯಿಯನ್ನು ಬಳಸಲು ಕಾರಣವೆಂದರೆ ಅಣ್ಣಾದ ಬಳಿಕ ಇದರ ಬೀಜಗಳು ಕಲ್ಲಿನಷ್ಟು ಗಟ್ಟಿಯಾಗಿದ್ದು ತಿನ್ನಲು ಹೆಚ್ಚಿನವರು ಇಷ್ಟಪಡುವುದಿಲ್ಲ ವಿನಹ ಕಾಯಿಯ ರೂಪದಲ್ಲಿ ಯಾವುದೇ ಬಾಳೆಹಣ್ಣುಗಳನ್ನು ಉಪಯೋಗಿಸಬಹುದು.
ಬಾಳೆಹಣ್ಣಿನ ಸೇವನೆಗಳಿಂದ ಆರೋಗ್ಯಕ್ಕೆ ಹಲವಾರು ಪ್ರಯೋಜನಗಳು ಇರುವಂತೆ ಬಾಳೆಕಾಯಿಂದಲೂ ಕೂಡ ಹಲವಾರು ಪ್ರಯೋಜನಗಳು ಇವೆ. ಅಲ್ಲದೆ ವಿಟಮಿನ್ ಗಳು ಖನಿಜಗಳು ಹಾಗೂ ವಿಶೇಷವಾಗಿ ಅಧಿಕ ಪ್ರಮಾಣದ ಇಷ್ಟ ರಕ್ತದಲ್ಲಿನ ಸಕ್ಕರೆಯ ಪ್ರಮಾಣವನ್ನು ನಿಯಂತ್ರಿಸಲು ನೆರವಾಗುತ್ತದೆ. ಅತಿಸರದ ತೊಂದರೆ ಇರುವವರಿಗೆ ಬಾಳೆಕಾಯಿ ಸಿದ್ದ ರೂಪದ ಔಷಧಿ ಕೂಡ ಆಗಿದೆ.
ಬಾಳೆಕಾಯಿಯ ಸೇವನೆಯಿಂದ ಜೀರ್ಣಾಂಗಗಳಲ್ಲಿರುವ ಬ್ಯಾಕ್ಟೀರಿಯಾಗಳು ಉತ್ತಮವಾಗಿ ಕಾರ್ಯನಿರ್ವಹಿಸುತ್ತವೆ. ಇದರಲ್ಲಿರುವ ಒಂದು ಬಗೆಯ ಪಿಷ್ಟ ಅಷ್ಟು ಸುಲಭವಾಗಿ ಜೀರ್ಣವಾಗುವುದಿಲ್ಲ ಹಾಗೂ ಜೀರ್ಣಾಂಗಗಳಲ್ಲಿರುವ ಬ್ಯಾಕ್ಟೀರಿಯಾಗಳಿಗೆ ಅತ್ಯುತ್ತಮ ಆಹಾರವಾಗಿದೆ.ಬಾಳೆಕಾಯಿಯಲ್ಲಿ ಕರಗದ ನಾರಿನಂಸ ಸಮೃದ್ಧವಾಗಿರುವ ಕಾರಣ ಸೇವನೆಯ ಬಳಿಕ ಹೆಚ್ಚು ಹೊತ್ತು ಹೊಟ್ಟೆ ತುಂಬಿರುವ ಭಾವನೆ ಮೂಡಿಸಿ ಅನಗತ್ಯ ಆಹಾರ ಸೇವನೆಯಿಂದ ತಡೆಯುತ್ತದೆ.
ಬಾಳೆಕಾಯಿಯಲ್ಲಿ ಇರುವ ಕಠಿಣ ಪಿಷ್ಟ ಹಾಗೂ ಚಿಕ್ಕ ಸಂಕಲಿಯ ಹಾಗೂ ಬಾಳೆ ಹಣ್ಣಿನಲ್ಲಿರುವ ವಿಟಮಿನ್ ಹಾಗೂ ಖನಿಜಗಳು ಆರೋಗ್ಯಕ್ಕೆ ಪೂರಕವಾದ ಪೋಷಕಾಂಶಗಳನ್ನು ನೀಡುತ್ತದೆ. ಖನಿಜಗಳಲ್ಲಿ ಪ್ರಮುಖವಾಗಿ ಸೋಡಿಯಂ ಪೊಟ್ಯಾಷಿಯಂ ಹಾಗೂ ಅಲ್ಪ ಪ್ರಮಾಣದ ಪ್ರೋಟೀನ್ ಸಹ ಇದೆ. ಬಾಳೆಕಾಯಿಯ ರುಚಿ ಕೊಂಚ ಉಗುರ ಆಗಿರುವ ಕಾರಣಕ್ಕಾಗಿಯೇ ಹೆಚ್ಚಾಗಿ ಇದನ್ನು ಇಷ್ಟಪಡುವುದಿಲ್ಲ ಆದರೆ ಇದರ ಆರೋಗ್ಯಕರ ಯೋಜನೆಗಳನ್ನು ಮನಗಂಡ ಬಳಿಕ ಇದನ್ನು ಸೇವಿಸದೆ ಇರಲು ರುಚಿಯ ಕೊರತೆ ಅಡ್ಡಿಯಾಗುವುದಿಲ್ಲ.
ಬನ್ನಿ ಯಾವ ಯಾವ ಪ್ರಯೋಜನಗಳು ಇವೆ ಎಂಬುದನ್ನು ನೋಡೋಣ. ಪೋಷಕಾಂಶಗಳನ್ನು ಹೀರಿಕೊಳ್ಳುವುದಕ್ಕೆ ನೆರವಾಗುತ್ತದೆ ನಿಮ್ಮ ಆಹಾರದಲ್ಲಿ ಆಗಾಗ ಬಾಳೆಕಾಯಿಗಳನ್ನು ಅಳವಡಿಸಿಕೊಂಡರೆ ಕರಳುಗಳ ಆರೋಗ್ಯ ಉತ್ತಮಗೊಳ್ಳುತ್ತದೆ. ಇದಕ್ಕೆ ಕಾರಣ ಚಿಕ್ಕ ಸಂಕಲಿಯ ಕೊಬ್ಬಿನ ಕಾರಣಗಳು ಸಂಶೋಧನೆಯಲ್ಲಿ ಕಂಡುಕೊಂಡಂತೆ ಈ ಕೊಬ್ಬಿನ ಆಮ್ಲಗಳು ಆಹಾರದಲ್ಲಿರುವ ಪೋಷಕಾಂಶಗಳನ್ನು ವಿಶೇಷವಾಗಿ ಕ್ಯಾಲ್ಸಿಯವನ್ನು ಗರಿಷ್ಠ ಪ್ರಮಾಣದಲ್ಲಿ ಹೀರಿಕೊಳ್ಳಲು ನೆರವಾಗುತ್ತದೆ. ರಕ್ತದ ಒತ್ತಡವನ್ನು ನಿಯಂತ್ರಿಸಲು ಕೂಡ ಬಾಳೆಕಾಯಿ ನೆರವಾಗುತ್ತದೆ.
ಬಾಳೆಕಾಯಿಯಲ್ಲಿರುವ ಅಧಿಕ ಪ್ರಮಾಣದ ಪೊಟ್ಯಾಶಿಯಂ ದೇಹಕ್ಕೆ ಅಗತ್ಯವಾದ ಒಂದು ಖನಿಜವಾಗಿದೆ. ಈ ಕನಿಜ ಒಂದು ನರಗಳ ಬಿಗುತವನ್ನು ಕಡಿಮೆ ಮಾಡುವ ಪೋಷಕಾಂಶವಾಗಿದ್ದು ರಕ್ತ ಪರಿಚಲನೆ ಯಾಗಲು ಅಗತ್ಯವಾಗಿದೆ. ಬಾಳೆಹಣ್ಣಿನಂತೆಯೇ, ಬಾಳೆಕಾಯಿಯೂ ಹೃದಯಸ್ನೇಹಿ ಆಹಾರವಾಗಿದೆ. ಇದರಲ್ಲಿರುವ ಅತ್ಯುತ್ತಮ ಪ್ರಮಾಣದ ಪೊಟ್ಯಾಶಿಯಂ ಸ್ನಾಯುಗಳ ಸಂಕುಚನಕ್ಕೆ ಅಗತ್ಯವಾಗಿರುವ ಖನಿಜವಾಗಿದೆ ಹಾಗೂ ವಿಶೇಷವಾಗಿ ಹೃದಯದ ಬಡಿತಕ್ಕೆ ಅಗತ್ಯ ಇಂಧನದಂತೆ ಕಾರ್ಯ ನಿರ್ವಹಿಸುತ್ತದೆ ಹಾಗೂ ತನ್ಮೂಲಕ ರಕ್ತದ ಒತ್ತಡವನ್ನು ನಿರ್ವಹಿಸಲು ಸಾಧ್ಯವಾಗುತ್ತದೆ.