WhatsApp Group Join Now

ತರಕಾರಿಗಳು ಅದರಕ್ಕೆ ಕಹಿಯಾಗಿದ್ದರೂ ಉದರಕ್ಕೆ ಸಿಹಿಯಾಗಿರುತ್ತವೆ. ಆರೋಗ್ಯಕ್ಕೆ ಹೇರಳವಾದ ಪ್ರಯೋಜನವನ್ನು ನೀಡುವ ಕೆಲವು ತರಕಾರಿಗಳ ರುಚಿ ಚೆನ್ನಾಗಿ ಇರುವುದಿಲ್ಲ ಅಂತಹ ತರಕಾರಿಗಳಲ್ಲಿ ಹಾಗಲಕಾಯಿ ಕೂಡ ಒಂದು ರುಚಿಯಲ್ಲಿ ಕಹಿ ಆಗಿರುವ ಹಾಗಲಕಾಯಿ ಆರೋಗ್ಯಕ್ಕೆ ಬಹಳ ಒಳ್ಳೆಯದು ಸಾಮಾನ್ಯವಾಗಿ ಮಾರುಕಟ್ಟೆಯಲ್ಲಿ ಎಲ್ಲಾ ಕಾಲದಲ್ಲೂ ಸಿಗುವ ಈ ಹಾಗಲಕಾಯಿ ಎಷ್ಟು ಉಪಯುಕ್ತ ಅನ್ನುವುದು ನಿಮಗೇನಾದರೂ ಗೊತ್ತಾ ಹಾಗಾದರೆ ಹಾಗಲಕಾಯಿ ಮಹತ್ವದ ಬಗ್ಗೆ ಇವತ್ತಿನ ಮಾಹಿತಿಯಲ್ಲಿ ಸಂಪೂರ್ಣವಾಗಿ ತಿಳಿದುಕೊಳ್ಳೋಣ.

ಹೆಚ್ಚಿನ ಜನರು ಹಾಗಲಕಾಯಿ ಎಂದರೆ ಮೂಗು ಮುರಿಯುತ್ತಾರೆ. ಅದರ ಕಹ್ಯಾದ ರುಚಿ ಬಹುತೇಕರು ಇಷ್ಟಪಡುತ್ತಿಲ್ಲ. ಹಾಗಾದರೆ ಸಮೃದ್ಧವಾದ ವಿಟಮಿನ್ ಎ ಸಿ ಕಬ್ಬಿಣ ಅಂಶ ಮ್ಯಾಗ್ನಿಷಿಯಂ ಆಂಟಿ ಆಕ್ಸಿಡೆಂಟ್ ಗಳನ್ನು ಹೊಂದಿರುವ ಹಾಗಲಕಾಯಿ ದೇಹದ ಆರೋಗ್ಯವನ್ನು ಕಾಪಾಡಿಕೊಳ್ಳುವಲ್ಲಿ ಮಹತ್ವದ ಪಾತ್ರ ವಹಿಸುತ್ತದೆ.ಹಾಗಲಕಾಯಿ ರಸವು ಮಧುಮೇಹಕ್ಕೆ ಅತ್ಯುತ್ತಮ ನೈಸರ್ಗಿಕ ಮತ್ತು ಆಯುರ್ವೇದಿಕ ಔಷಧವಾಗಿದೆ.

ಮತ್ತು ಇದರ ತಾಜಾ ರಸವನ್ನು ಬೆಳಿಗ್ಗೆ ಬೇಗನೆ ಖಾಲಿ ಹೊಟ್ಟೆಯಲ್ಲಿ ಕುಡಿಯುವುದರಿಂದ ನಮ್ಮ ದೇಹದ ಎಲ್ಲಾ ನರನಾಡಿಗಳಲ್ಲಿ ಸಂಚರಿಸಿ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ ಮತ್ತು ಇದ್ದಕ್ಕಿದಂತೆ ತೂಕ ಹೆಚ್ಚಾಗುವ, ಅಧಿಕ ರಕ್ತದ ಒತ್ತಡದಿಂದ ಬಳಲುವ, ಹೃದ್ರೋಗ, ಅಧಿಕ ಕೊಲೆಸ್ಟ್ರಾಲ್ ಮುಂತಾದ ಮಧುಮೇಹ ಸಂಬಂಧಿತ ಆರೋಗ್ಯ ಸಮಸ್ಯೆಗಳ ಸಾಧ್ಯತೆ ಉಂಟಾಗುವುದನ್ನು ಕಡಿಮೆ ಮಾಡುತ್ತದೆ.

ಇನ್ನು ಕೆಲವೊಮ್ಮೆ ನಾವು ತಿಂದ ಆಹಾರ ನಮಗೆ ಸಮಸ್ಯೆ ಉಂಟುಮಾಡುತ್ತದೆ ಸರಿಯಾಗಿ ಜೀರ್ಣವಾಗದೆ ಹೊಟ್ಟೆ ನೋವು ಹಸಿವು ಆಗದೇ ಇರುವುದು ಅಂಥ ಸಮಸ್ಯೆಗಳು ಕಾಣಬಹುದು. ಇದಕ್ಕೆಲ್ಲ ಹಾಗಲಕಾಯಿ ಅತ್ಯುತ್ತಮ ಪರಿಹಾರವಾಗಿದೆ ಹಾಗಲಕಾಯಿ ಜ್ಯೂಸ್ ಅಥವಾ ಅದನ್ನು ಬೇಯಿಸಿ ಪಲ್ಯದ ರೀತಿಯಲ್ಲಿ ಸೇವನೆ ಮಾಡಬಹುದು ಇದರಿಂದ ಜೀರ್ಣಕ್ರಿಯೆ ಉತ್ತಮವಾಗುತ್ತದೆ. ಇನ್ನು ದೇಹದಲ್ಲಿ ಕಫ ಮತ್ತು ಪಿತ್ತ ನಿವಾರಣೆಗೆ ಒಳ್ಳೆಯದು. ಹೀಗಾಗಿ ಅಡುಗೆಯಲ್ಲಿ ಹಾಗಲಕಾಯಿ ಬಳಸುವುದು ಬಹಳ ಉತ್ತಮ.

ಅನೇಕರು ಹಾಗಲಕಾಯಿಯನ್ನು ದೇಹದ ಉಷ್ಣತೆಯನ್ನು ಹೆಚ್ಚು ಮಾಡುತ್ತವೆ ಎನ್ನುತ್ತಾರೆ ಆದರೆ ವೈದ್ಯರು ಹೇಳುವ ಪ್ರಕಾರ ಹಾಗಲಕಾಯಿ ಅನುಷ್ಠ ಗುಣವನ್ನು ಹೊಂದಿದೆ ಅಂದರೆ ಅತಿಯಾದ ಉಷ್ಣವೂ ಅಲ್ಲ ಅತಿಯಾದ ತಂಪಿನ ಗುಣವು ಅಲ್ಲ. ಹೀಗಾಗಿ ಎಲ್ಲರೂ ಹಾಗಲಕಾಯಿಯನ್ನು ಸೇವನೆ ಮಾಡಬಹುದು.

WhatsApp Group Join Now

Leave a Reply

Your email address will not be published. Required fields are marked *