ಔಷಧೀಯ ಸತ್ಯ ಎಂದೆ ಜನಜನಿತ ವಾಗಿರುವ ಸರ್ಪಗಂಧ ಇದು ಅಪೊಸಿನೇಸಿ ಕುಟುಂಬಕ್ಕೆ ಸೇರಿದ ತೀವ್ರವಾಗಿ ಅಳಿವಿನಂಚಿನಲ್ಲಿರುವ ಜಾತಿಯಾಗಿದೆ. ಕೇಂದ್ರ ಪರಿಸರ ಮತ್ತು ಅರಣ್ಯ ಸಚಿವಾಲಯವು ಈ ಸಸ್ಯವನ್ನು ಅದರ ಅತಿಯಾದ ಶೋಷಣೆಯ ನಂತರ ಕೆಂಪು ಪಟ್ಟಿಗೆ ಸೇರಿಸಿದೆ. ಇದರ ಸಸ್ಯ ಶಾಸ್ತ್ರೀಯ ಹೆಸರು ಪೆಂಕಿನ ಕನ್ನಡದಲ್ಲಿ ಪಾತಾಳ ಗಂದಿ ಸಂಸ್ಕೃತದಲ್ಲಿ ಸರ್ಪಗಂಧ ಚಂದ್ರಿಕಾ ಗಂಧನಕುಲಿ ಆಡು ಭಾಷೆಯಲ್ಲಿ ಗರುಡ ಪಾತಾಳ ಎಂದು ಚಿರಪರಿಚಿತವಾಗಿರುವ ಸರ್ಪಗಂಧವನ್ನು ಇಂಗ್ಲಿಷ್ ಭಾಷೆಯಲ್ಲಿ ಸರ್ ಪೇಂಟ್ ಹೋಂಡ ಎಂದು ಕರೆಯುತ್ತಾರೆ.

ಸರ್ಪಗಂಧದ ಬೇರು ಬೇರುಪದ ಆಕಾರದಲ್ಲಿ ಇದ್ದು ಇದು ಸರ್ಪದ ವಿಷ ಇರಿಸುವ ಕಾರಣ ಇದಕ್ಕೆ ಸರ್ಪಗಂಧ ಎಂದು ಕರೆಯುತ್ತಾರೆ ಎಂದು ಉಲ್ಲೇಖಿಸಲಾಗಿದೆ ಹಿಮಾಲಯ ಶ್ರೇಣಿ ನೇಪಾಳ ಶ್ರೀಲಂಕಗಳಲ್ಲಿ ಕಂಡುಬರುವ ಸರ್ಪಗಂಧ ದಕ್ಷಿಣ ಕನ್ನಡ ಶಿವಮೊಗ್ಗ ಉಡುಪಿ ಕೊಡಗು ಪರಿಸರಗಳಲ್ಲಿ ಮತ್ತು ಪಶ್ಚಿಮ ಘಟ್ಟಗಳಲ್ಲಿ ಹೇರಳವಾಗಿ ಕಂಡುಬರುತ್ತದೆ ಅಷ್ಟೇ ಅಲ್ಲದೆ ವರ್ಣ ಕಾಡುಗಳಲ್ಲಿ ಇವು ಅಧಿಕವಾಗಿ ಕಾಣಿಸುತ್ತದೆ. ಹೊಳಪಿನ ಎಲೆಗಳನ್ನು ಹೊಂದಿರುವ ಸಸ್ಯದಲ್ಲಿ ಕೆಂಪು ಅಥವಾ ಬಿಳಿಯ ಹೂಗಳು ಇರುತ್ತವೆ.

ಸರ್ಪಗಂಧದ ಬೇರು ಅಗಾಧ ಔಷಧೀಯ ಗುಣಗಳನ್ನು ಒಳಗೊಂಡಿದೆ ಇದನ್ನು ಔಷದ ತಯಾರಿಕೆಯಲ್ಲಿ ಬಳಸಲಾಗುತ್ತದೆ. ಸರ್ಪಗಂಧವನ್ನು ನಿದ್ರಾ ಜನಕ್ ಅಥವಾ ಸ್ಲೀಪ್ ಜನರೇಟರ್ ಎಂದೂ ಕರೆಯುತ್ತಾರೆ , ಇದು ನಿದ್ರೆಯ ಗುಣಮಟ್ಟವನ್ನು ಸುಧಾರಿಸುತ್ತದೆ ಮತ್ತು ಒತ್ತಡವನ್ನು ಕಡಿಮೆ ಮಾಡುತ್ತದೆ.ಸರ್ಪಗಂಧವು ವಾತ ನಿದ್ರಾಹೀನತೆಯನ್ನು ಪರಿಹರಿಸುತ್ತದೆ, ಸಕ್ರಿಯ ಅಥವಾ ಆತಂಕದ ಮನಸ್ಸಿನಿಂದಾಗಿ ನಿದ್ರಿಸಲು ಕಷ್ಟವಾಗುತ್ತದೆ. ಸರ್ಪಗಂಧವು ನಿದ್ರೆಯ ಅವಧಿಯನ್ನು ಹೆಚ್ಚಿಸುತ್ತದೆ ಮತ್ತು ಹಗಲಿನ ಅರೆನಿದ್ರಾವಸ್ಥೆಯನ್ನು ಕಡಿಮೆ ಮಾಡುತ್ತದೆ ಎಂದು ಅಧ್ಯಯನಗಳು ಹೇಳುತ್ತವೆ.

ರೋಗಿಗಳಲ್ಲಿ ಆತಂಕವನ್ನು ಕಡಿಮೆ ಮಾಡಲು ಸರ್ಪಗಂಧ ಘನ ವತಿ ಜಟಮಾನ್ಸಿ ,ಪಿಪ್ಲಮೂಲ್ ಮತ್ತು ಅಜ್ವೈನ್ ಮುಂತಾದ ಗಿಡಮೂಲಿಕೆಗಳನ್ನು ಒಳಗೊಂಡಿರುತ್ತದೆ ಎಂದು ಅಧ್ಯಯನಗಳು ಹೇಳುತ್ತವೆ. ಅಧಿಕ ಜ್ವರದಿಂದ ಬಳಲುತ್ತಿರುವಾಗ ತೆಂಗಿನ ನೀರಿನೊಂದಿಗೆ ಸರ್ಪಗಂಧದ ಬೇರಿನ ಪುಡಿಯ ಮಿಶ್ರಣವನ್ನು ಸೇವಿಸುವುದರಿಂದ ಸ್ನಾಯು ನೋವು, ದೌರ್ಬಲ್ಯ, ತಲೆನೋವುಗಳನ್ನು ತಗ್ಗಿಸುವುದರ ಜೊತೆಗೆ ದೇಹದ ಉಷ್ಣತೆಯನ್ನು ಸಾಮಾನ್ಯ ಮಟ್ಟಕ್ಕೆ ತರುತ್ತದೆ.

ಇದು ಮಾನಸಿಕ ಒತ್ತಡ ಮತ್ತು ಉದ್ವೇಗವನ್ನು ಕಡಿಮೆ ಮಾಡುತ್ತದೆ, ಹೀಗೆ ಆತಂಕ, ಹೆದರಿಕೆ, ಪ್ಯಾನಿಕ್ ಅಟ್ಯಾಕ್‌ಗಳನ್ನು ನಿಭಾಯಿಸುತ್ತದೆ ಮತ್ತು ಶಾಂತಿಯುತ ನಿದ್ರೆಗಾಗಿ ಮೆದುಳು ಮತ್ತು ಮನಸ್ಸನ್ನು ಶಮನಗೊಳಿಸುತ್ತದೆ. ಹಾವಿನ ಕಡಿತಕ್ಕೆ ಇದು ಉತ್ತಮ ಮನೆಮದ್ದು ಅಷ್ಟು ಮಾತ್ರವಲ್ಲದೆ ವಿಶ್ವ ಜಂತುಗಳ ಕಡಿತಕ್ಕೂ ಇದು ರಾಮಬಾಣ ಗಂಜಿ ತುರುಕೆ ಮತ್ತು ನಂಜಿನ ಜೊತೆಗೆ ನಿವಾರಿಸುತ್ತದೆ ಹಾಗಾಗಿ ಇದು ಏನು ಮಾಡಿಸಿದ ಮನೆ ಮದ್ದು ರೋಗನಿರೋಧಕ ಶಕ್ತಿ ಹೊಂದಿರುವ ತರಪಗಂಧ ಆಂಟಿ ಬಯೋಟಿಕ್ ನಂತೆ ಕೆಲಸ ಮಾಡುತ್ತದೆ ರಕ್ತದ ಒತ್ತಡ ಹೊಟ್ಟೆ ನೋವು ಮೂತ್ರದ ತೊಂದರೆ ಜ್ವರವನ್ನು ಸಹ ಶಮನ ಮಾಡುವ ಶಕ್ತಿ ಇದಕ್ಕಿದೆ.

ಮುಖ್ಯವಾದ ಸಂಗತಿ ಎಂದರೆ ಸರ್ಪಗಂಧ ನಂಜುನಾಶಕ ಮತ್ತು ರೋಗ ನಿರೋಧಕವಾಗಿ ಕೆಲಸ ಮಾಡುತ್ತದೆ ಈಗ ಮನೆಯ ಅಂಗಳದಲ್ಲಿ ಹೇರಳವಾಗಿ ಬೆಳೆಯುವ ಔಷಧಿ ಸಸ್ಯದ ಪರಿಚಯವೇ ಇಲ್ಲದಂತೆ ಆಗಿರುವುದು ಬೇಸರದ ಸಂಗತಿ. ಮನೆ ಮದ್ದುಗಳ ಅರಿವು ಇದ್ದರೆ ಆಪತ್ತು ಕಾಲಕ್ಕೆ ಸಹಾಯಕ್ಕೆ ಬರಬಹುದು ಆದುದರಿಂದ ಹಿತ್ತಲದಲ್ಲಿ ಬೆಳೆಯುವ ಸಚ್ಚಿದ ಬಗೆಗೆ ಅರಿವು ಹೊಂದಿಕೊಳ್ಳುವುದು ಸಹ ಒಳ್ಳೆಯದು.

Leave a Reply

Your email address will not be published. Required fields are marked *