WhatsApp Group Join Now

ಹೌದು ಹಾವು ಕಚ್ಚಿ ಅದೆಷ್ಟೋ ಜನ ತಮ್ಮ ಪ್ರಾಣವನ್ನು ಕಳೆದುಕೊಂಡಿದ್ದಾರೆ ಮತ್ತು ಹಾವು ಕಚ್ಚಿದ ತಕ್ಷಣ ಏನು ಮಾಡಬೇಕು ಅನ್ನೋದು ಎಷ್ಟೋ ಮಂದಿಗೆ ಗೊತ್ತಿಲ್ಲ ಹಾಗಾಗಿ ಈ ಮಾಹಿತಿಯನ್ನು ಎಲ್ಲರೊಂದಿ ಹಂಚ್ಚಿಕೊಳ್ಳಿ.

ಪ್ರಪಂಚದಾದ್ಯಂತ ಪ್ರತಿವರ್ಷ ಸು.50 ಲಕ್ಷ ಜನ ಹಾವು ಕಡಿತದಿಂದ ಸಾವನ್ನಪ್ಪುತ್ತಿದ್ದಾರೆ. ಭಾರತದಲ್ಲಿ ಈ ಸಂಖ್ಯೆ ಎರಡು ಲಕ್ಷ ಜನ ಎಂದು ಅಂದಾಜಿಸಲಾಗಿದೆ. ಅದರಲ್ಲಿ ಹೆಚ್ಚಿನ ಜನ ಹಾವಿನ ವಿಷಕ್ಕಿಂತ ಭಯದಿಂದಲ್ಲೇ ಸಾವನ್ನಾಪ್ಪುತ್ತಿದ್ದಾರೆ. ನಮ್ಮ ದೇಶದಲ್ಲಿ 250 ಜಾತಿಯ ಹಾವುಗಳಿವೆ. ಅದರಲ್ಲಿ ಸು.52 ಜಾತಿಯ ವಿಷ ಹಾವುಗಳು. ಐದು ಹಾವುಗಳು ಹೆಚ್ಚು ವಿಷ ಹೊಂದಿದ್ದು, ಹಾವು ಕಚ್ಚಿದ ಮೂರು ಗಂಟೆಗಳಲ್ಲಿ ವ್ಯಕ್ತಿ ಸಾವನ್ನಾಪ್ಪುತ್ತಾನೆ. ನಾವು ಯಾವುದೇ ಚಿಕಿತ್ಸೆ ನೀಡುವುದ್ದಿದ್ದರೆ ಆ ಮೂರು ಗಂಟೆಯೊಳಗೆ ನೀಡಬೇಕು.

ಕಚ್ಚಿದ ಹಾವು ವಿಷಪೂರಿತ ಹಾವೋ ಅಥವಾ ವಿಷವಿಲ್ಲದ ಹಾವೋ ಎಂದು ತಿಳಿದುಕೊಳ್ಳಲು ಅದು ಕಚ್ಚಿದ ಜಾಗದಲ್ಲಿ ಎಷ್ಟು ಕಚ್ಚಿದ ಗುರುತುಗಳಿವೆ ಎಂಬುದನ್ನು ನೋಡಬೇಕು. ಒಂದು ಅಥವಾ ಎರಡು ಗುರುತು ಇದ್ದರೆ ವಿಷಪೂರಿತ ಹಾವೇಂದು, ಮೂರಕ್ಕಿಂತ ಹೆಚ್ಚಿದ್ದರೆ ವಿಷರಹಿತ ಹಾವೇಂದು ತಿಳಿದುಕೊಳ್ಳಬಹುದು.

ವಿಷಪೂರಿತ ಹಾವು ಕಚ್ಚಿದರೆ ಕಚ್ಚಿದ ಜಾಗದಿಂದ ವಿಷ ಶರೀರಕ್ಕೆ ಹೋಗುತ್ತದೆ. ಅಲ್ಲಿಂದ ಹೃದಯ, ಹೃದಯದಿಂದ ಶರೀರದ ಎಲ್ಲಾ ಭಾಗಗಳಿಗೆ ಸೇರುತ್ತದೆ. ಹೀಗೆ ವಿಷ ಶರೀರದ ಎಲ್ಲಾ ಭಾಗಗಳಿಗೆ ಸೇರಲು ಮೂರು ಗಂಟೆ ಸಮಯ ತೆಗೆದುಕೊಳ್ಳಬಹುದು. ಅಷ್ಟರ ಒಳಗೆ ಆ ವ್ಯಕ್ತಿಗೆ ಚಿಕಿತ್ಸೆ ನೀಡದಿದ್ದರೆ ಬದುಕಲಾರ.

ಹಾವು ಕಚ್ಚಿದ ತಕ್ಷಣ ಕಚ್ಚಿದ ಜಾಗದ ಸ್ವಲ್ಪ ಮೇಲ್ಭಾಗದಲ್ಲಿ ದಾರದಿಂದ ಗಟ್ಟಿಯಾಗಿ ಕಟ್ಟಬೇಕು. ಸೂಜಿಯಿಲ್ಲದ ಸಿರಂಜಿಯಿಂದ ಹಾವು ಕಚ್ಚಿದ ಜಾಗದಲ್ಲಿ ಇಟ್ಟು ರಕ್ತವನ್ನು ಎಳೆಯಬೇಕು. ಮೊದಲು ರಕ್ತ ಕಪ್ಪು ಬಣ್ಣದಲ್ಲಿರುತ್ತದೆ. ಅದು ವಿಷಯುಕ್ತ ರಕ್ತವಾಗಿರುತ್ತದೆ. ಹೀಗೆ ಎರಡು ಮೂರು ಸಾರಿ ಎಳೆಯಬೇಕು. ಹೀಗೆ ಪ್ರಥಮ ಚಿಕಿತ್ಸೆ ನಂತರ ಆದಷ್ಟು ಬೇಗ ವೈದ್ಯರ ಬಳಿ ಕರೆದುಕೊಂಡು ಹೋಗಿ.

WhatsApp Group Join Now

Leave a Reply

Your email address will not be published. Required fields are marked *