WhatsApp Group Join Now

ಹಿಂದೂ ಧರ್ಮದ ಪ್ರಕಾರ ಮನೆಯಲ್ಲಿ ಶಂಖ ಇರಲೇಬೇಕು ಇದರಿಂದ ಸುಖ, ಸಮೃದ್ದಿ ಸಿಗುತ್ತೆ ಎಂಬ ನಂಬಿಕೆ ಇದೆ ಆದರೆ ಶಂಖ ಇರುವ ಮನೆಯವರು ಈ 8 ಅಂಶಗಳನ್ನು ಗಮನದಲ್ಲಿಡಲೇಬೇಕು.

ಶಂಖವನ್ನು ಯಾವಾಗಲು ನೀರಿನಲ್ಲಿ ಇಡಬಾರದು. ಹಾಗೆಯೇ ಭೂಮಿಯ ಮೇಲೆ ಶಂಖವನ್ನು ಇಡಬಾರದು, ಸ್ವಚ್ಚವಾದ ಬಟ್ಟೆ ಮೇಲೆ ಶಂಖವನ್ನು ಇಡಬೇಕು. ಶಂಖದೊಳಗೆ ನೀರನ್ನು ಹಾಕಿ ಇಡಬಾರದು, ಪೂಜೆ ಮಾಡುವ ವೇಳೆ ಶಂಖಕ್ಕೆ ನೀರು ಹಾಕಿ ಪೂಜೆ ಮಾಡುತ್ತಾರೆ ನಂತರ ಆ ನೀರನ್ನು ಕುಡಿಯುವುದರಿಂದ ದೈಹಿಕ ಹಾಗು ಮಾನಸಿಕ ಸಮಸ್ಯಯಿಂದ ಮುಕ್ತಿ ಸಿಗುತ್ತದೆ, ಜೀವನದಲ್ಲಿ ಅದೃಷ್ಟ ಒಲಿದು ಬರುತ್ತದೆ.

ಪೂಜೆ ಮಾಡುವ ವೇಳೆ ಶಂಖದ ತೆರೆದ ಭಾಗ ಮೇಲೆ ಬರುವಂತೆ ಇಡಬೇಕು. ವಿಷ್ಣು, ಲಕ್ಷ್ಮಿ, ಬಾಲ ಗಣಪತಿಯ ಬಲಭಾಗಕ್ಕೆ ಶಂಖವನ್ನು ಇಡಬೇಕು. ಶಂಖವನ್ನು ಲಕ್ಷ್ಮಿಗೆ ಹೋಲಿಸುತ್ತಾರೆ, ಹಾಗಾಗಿ ಉಳಿದ ದೇವರಿಗೆ ಮಾಡುವಂತೆ ಶಂಖಕ್ಕು ಪೂಜೆ ಮಾಡಬೇಕು.

108 ಅಕ್ಕಿಯ ಜೊತೆ ಕೆಂಪು ಬಟ್ಟೆಯಲ್ಲಿ ಶಂಖವನ್ನು ಕಪಾಟಿನಲ್ಲಿಡುವುದು ಧನ ಪ್ರಾಪ್ತಿಯಾಗುತ್ತದೆ. ಶಂಖದ ಧ್ವನಿಯಿಂದ ಮನೆಯಲ್ಲಿ ಧನಾತ್ಮಕ ಗುಣ ವೃದ್ದಿಯಾಗುತ್ತದೆ, ಹಾಗಾಗಿ ಪ್ರತಿದಿನ ಮನೆಯಲ್ಲಿ ಶಂಖ ಊದಬೇಕು.

WhatsApp Group Join Now

Leave a Reply

Your email address will not be published. Required fields are marked *