ನಮಸ್ತೆ ಪ್ರಿಯ ಓದುಗರೇ, ಸಾಮಾನ್ಯವಾಗಿ ನಾವು ದಿನವೂ ಅಡುಗೆ ಮನೆಯಲ್ಲಿ ನಾವು ಮಾಡುವ ಅಡುಗೆಗೆ ಉಪ್ಪು ಖಾರ ಹುಳಿ ತುಂಬಾನೇ ಮುಖ್ಯ ಆಗುತ್ತದೆ. ಇವುಗಳಲ್ಲಿ ಯಾವುದಾದರೂ ಒಂದು ವ್ಯತ್ಯಾಸ ಆದರೂ ಕೂಡ ಅಡುಗೆಯ ರುಚಿಯೇ ಹಾಳಾಗುತ್ತದೆ. ಅದ್ರಲ್ಲಿ ದಕ್ಷಿಣ ಭಾರತದ ಮಹಿಳೆಯರು ಹುಣಸೆ ಹಣ್ಣು ಇಲ್ಲದೆ ಯಾವುದೇ ರೀತಿಯ ಅಡುಗೆಯನ್ನು ಮಾಡುವುದೇ ಇಲ್ಲ. ಇನ್ನೂ ಈ ಹುಣಸೆ ಹಣ್ಣನ್ನು ಬಳಸಿಕೊಂಡು ಸಾಮಾನ್ಯವಾಗಿ ನಾವೆಲ್ಲರೂ ಈ ಹುಣಸೆ ಬೀಜಗಳನ್ನು ಎಸೆದು ಬಿಡುತ್ತೇವೆ. ಆದ್ರೆ ಇನ್ನೂ ಮುಂದೆ ಈ ತಪ್ಪನ್ನು ಮಾಡಬೇಡಿ. ಯಾಕೆಂದ್ರೆ ಇದು ಉತ್ತಮವಾದ ಪೌಷ್ಟಕಾಂಶ ಗಳನ್ನ ಒಳಗೊಂಡಿದೆ. ಸಾಮಾನ್ಯವಾಗಿ ಯಾವುದೇ ಒಂದು ಹಣ್ಣಾಗಲೀ ಅಥವಾ ತರಕಾರಿ ಆಗಲಿ ಅದರ ಬೀಜದಲ್ಲಿ ಅಧಿಕ ಪೌಷ್ಟಿಕಾಂಶ ಇರುತ್ತದೆ. ಆದರೆ ನಾವುಗಳು ಸಾಮಾನ್ಯವಾಗಿ ಇದರ ಬಳಕೆಯ ಅರಿವು ಇಲ್ಲದೆ ಇದನ್ನು ಎಸೆದು ಬಿಡುತ್ತೇವೆ. ಆದರೆ ನಮ್ಮ ಗ್ರಾಮೀಣ ಭಾಗದ ಜನರಿಗೆ ಮತ್ತು ಹಾಕಿ ಪ್ರದೇಶದ ಜನರಿಗೆ ಈ ಹುಣಸೆ ಹಣ್ಣಿನ ಬೀಜಗಳನ್ನು ಮಹತ್ವ ತಿಳಿದಿದೆ. ಇದರಿಂದಲೇ ಇನ್ನೂ ಹಲವಾರು ಕಡೆ ಈ ಹುಣಸೆ ಬೀಜಗಳನ್ನು ಹುರಿದು ಸೇವನೆ ಮಾಡುವ ಅಭ್ಯಾಸ ಇದೆ. ಹಲವಾರು ಜನರು ಕೂಡ ಈ ಹುಣಸೆ ಬೀಜವನ್ನು ಚಿಕ್ಕ ವಯಸ್ಸಿನಲ್ಲಿ ಇದ್ದಾಗ ಹುರಿದು ಸೇವನೆ ಮಾಡುತ್ತಾ ಇದ್ದರೂ. ಜೊತೆಗೆ ಶಾಲೆಯ ಬದಿಯಲ್ಲಿ ಕೂಡ ಈ ಹುಣಸೆ ಬೀಜವನ್ನು ಹುರಿದು ಮಾರುತ್ತ ಇದ್ದರು. ಆಗಿನ ಕಾಲದಲ್ಲಿ ನಾವು ಸೇವನೆ ಮಾಡುವಂತಹ ಎಲ್ಲಾ ಆಹಾರ ಕ್ರಮಗಳಲ್ಲಿ ಪೌಷ್ಟಿಕಾಂಶ ಇದ್ದವು ಎಂದರೆ ತಪ್ಪಾಗುವುದಿಲ್ಲ.
ಇನ್ನೂ ಹುಣಸೆ ಹಣ್ಣಿನ ಬೀಜದಲ್ಲಿ ಯಾವೆಲ್ಲ ಪೌಷ್ಟಿಕಾಂಶ ಇವೆ ಎಂದು ನೋಡುವುದಾದರೆ. ಈ ಬೀಜಗಳಲ್ಲಿ ಮೇಜ್ಞೆಸಿಯಂ, ವಿಟಮಿನ್ ಸಿ ಇದೆ, ಪೊಟ್ಯಾಸಿಯಂ, ಕ್ಯಾಲ್ಸಿಯಂ, ಹಾಗೂ ಅಮೈನೋ ಆಮ್ಲಗಳು ಇದೆ. ಈ ಹುಣಸೆ ಬೀಜಗಳನ್ನು ಸೇವನೆ ಮಾಡುವುದರಿಂದ ನಮ್ಮ ಆರೋಗ್ಯಕ್ಕೆ ಯಾವೆಲ್ಲ ರೀತಿಯ ಲಾಭಗಳು ಆಗುತ್ತವೆ ಎಂದೂ ನೋಡುವುದಾದರೆ, ಯಾರಿಗೆ ಕೀಲು ನೋವಿನ ಸಮಸ್ಯೆ ಇರುತ್ತದೋ ಅಥವಾ ಸಂಧಿವಾತ ಸಮಸ್ಯೆ ಇರುತ್ತದೋ ಅವರಿಗೆ ಇದು ತುಂಬಾ ಒಳ್ಳೆಯದು ಎಂದು ಹೇಳಲಾಗುತ್ತದೆ. ಯಾರಿಗೆ ಕೀಲು ನೋವು, ಮೊಣಕಾಲು ನೋವು, ಸಂಧಿವಾತ ಸಮಸ್ಯೆ ಇರುತ್ತದೋ ಅಂಥವರು ಈ ಹುಣಸೆ ಹಣ್ಣಿನ ಬೀಜಗಳನ್ನು ಹುರಿದುಕೊಂಡು ನಿಯಮಿತವಾಗಿ ಸೇವನೆ ಮಾಡುತ್ತಾ ಬರಬೇಕು. ಅಥವಾ ಬೀಜಗಳನ್ನು ಹುರಿದು ಅದನ್ನು ಮಿಕ್ಸಿ ಮಾಡಿಕೊಂಡು ಒಂದು ಬಾಕ್ಸ್ ನಲ್ಲಿ ಇಡಿ. ಪ್ರತಿನಿತ್ಯ ಅಥವಾ ವಾರದಲ್ಲಿ ಒಂದೆರಡು ಸಲ ಅರ್ಧ ಚಮಚ ಈ ಹುರಿದ ಹುಣಸೆ ಹಣ್ಣಿನ ಬೀಜವನ್ನು ದಿನಕ್ಕೆ ಒಂದು ಅಥವಾ ಎರಡು ಬಾರಿ ನೀರಿನಲ್ಲಿ ಹಾಕಿಕೊಂಡು ಸೇವನೆ ಮಾಡುವುದರಿಂದ ಸಂಧಿವಾತ, ಕೀಲು ನೋವು, ಮಂಡಿ ನೋವು ಸಮಸ್ಯೆ ಬೇಗನೆ ನಿವಾರಣೆ ಆಗುತ್ತದೆ.
ನಿಯಮಿತವಾಗಿ ಈ ಹುಣಸೆ ಹಣ್ಣಿನ ಬೀಜಗಳನ್ನು ಸೇವನೆ ಮಾಡುವುದರಿಂದ ಕರುಳು ಮತ್ತು ಮೂತ್ರ ಕೋಶದ ಸೋಂಕನ್ನು ಉಂಟು ಮಾಡುವಂತಹ ಬ್ಯಾಕ್ಟೀರಿಯಾ ಇಂದ ಇದು ರಕ್ಷಣೆ ಮಾಡುತ್ತದೆ. ಇದು ಮಧುಮೇಹಿಗಳಿಗೆ ಕೂಡ ಉತ್ತಮವಾದದ್ದು. ಹುಣಸೆ ಬೀಜದಲ್ಲಿ ರಕ್ತದಲ್ಲಿನ ಸಕ್ಕರೆಯ ಪ್ರಮಾಣವನ್ನು ಕಡಿಮೆ ಮಾಡುವ ಶಕ್ತಿ ಇದೆ. ಇದು ಇನ್ಸುಲಿನ್ ಉತ್ಪತ್ತಿ ಮಾಡುವ ಕೋಶದ ಗಾತ್ರವನ್ನು ಹಿಗ್ಗಿಸಿ ಮೇದೋಜೀರಕ ಗ್ರಂಥಿಯ ನ್ನೂ ರಕ್ಷಿಸುತ್ತದೆ. ಈ ಹುಣಸೆ ಬೀಜದ ಪುಡಿ ಹಲ್ಲುಗಳಿಗು ಉತ್ತಮವಾದದ್ದು. ಒಂದುವೇಳೆ ನಿಮ್ಮ ಹಲ್ಲುಗಳು ದುರ್ಬಲ ಆಗಿದ್ದರೆ, ಆಗ ನೀವು ಹುಣಸೆ ಬೀಜದ ಪುಡಿಯನ್ನು ಮಾಡಿಕೊಂಡು ಹಲ್ಲುಗಳಿಗೆ ಮತ್ತು ವಸಡುಗಳುಗೆ ವಾರದಲ್ಲಿ ಒಂದು ಅಥವಾ ಎರಡು ಬಾರಿ ಇದನ್ನು ಹಚ್ಚಿ ಉಜ್ಜುವುದರಿಂದ ಹಲ್ಲಿನ ಸಮಸ್ಯೆ ಬೇಗನೆ ನಿವಾರಣೆ ಆಗುತ್ತದೆ ಜೊತೆಗೆ ಹಲ್ಲು ಬಲಶಾಲಿ ಆಗುತ್ತದೆ. ನಿಮ್ಮ ಹಲ್ಲಿನ ದಂತ ಸಮಸ್ಯೆ ಇದ್ದರೆ ಅದು ಬೇಗ ನಿವಾರಣೆ ಆಗಲು ನೆರವಾಗುತ್ತದೆ. ಈ ಮಾಹಿತಿ ನಿಮಗೆ ಪ್ರಯೋಜನಕಾರಿ ಎನ್ನಿಸಿದರೆ ದಯವಿಟ್ಟು ಲೈಕ್ ಮಾಡಿ ಶೇರ್ ಮಾಡಿ. ಶುಭದಿನ.