ಹಾವು ಕಚ್ಚಿದಾಗ ತಾವರೆಯ ಗಡ್ಡೆಯ ರಸವನ್ನು ಕುಡಿಸುವುದರಿಂದ ವಿಷ ನಿವಾರಣೆಯಾಗುತ್ತದೆ. ಆಗ ತಾನೇ ಕಿತ್ತ ಗಡ್ಡೆಯನ್ನುಇದಕ್ಕಾಗಿ ಉಪಯೋಗಿಸಬೇಕು.

ಮೂತ್ರ ಕಟ್ಟಿದಾಗ ತಾವರೆ ಗಡ್ಡೆಯನ್ನು ಎಳ್ಳೆಣ್ಣೆಯಲ್ಲಿ ಬೇಯಿಸಿ ನೀರಿನಲ್ಲಿ ಅರೆದು ತಿನ್ನಿಸಬೇಕು. ಕೆಮ್ಮಿಂನಿಂದ ಬಳಲುವವರು ತಾವರೆ ಬೇರಿನ ಚೂರ್ಣವನ್ನು ಜೇನುತುಪ್ಪದೊಂದಿಗೆ ಸೇವಿಸಬೇಕು.

ದಾಹವುಂಟಾದಾಗ ಹಾಗೂ ಉರಿಯಿರುವಾಗ ತಾವರೆ ಬೇರನ್ನು ಕುಟ್ಟಿ ಪುಡಿ ಮಾಡಿ ಹಾಲಿನೊಂದಿಗೆ ಸೇವನೆ ಮಾಡಬೇಕು. ಅತಿಯಾದ ಬಾಯಾರಿಕೆ ಶಮನ ಮಾಡುವುದರ ಜೊತೆಗೆ ಇದು ದೇಹವನ್ನು ತಂಪುಗೊಳಿಸುತ್ತದೆ.

ಹುಳಕಡ್ಡಿಯ ತೊಂದರೆಯಿಂದ ಬಳಲುವವರು ತಾವರೆಯ ಬೇರನ್ನು ಅರೆದು ಲೇಪಿಸುವದರಿಂದ ಅಥವಾ ಬೇರಿನ ಪುಡಿಯಲ್ಲಿ ನೀರಿನಲ್ಲಿ ಬೆರಸಿ ಲೇಪಿಸುವುದರಿಂದ ವಾಸಿಯಾಗುತ್ತದೆ. ಜ್ವರವಿರುವಾಗ ತಾವರೆ ಎಲೆಯನ್ನು ಹಾಸಿಗೆಯಂತೆ ಹಾಸಿ ಅದರ ಮೇಲೆ ಮಲಗಿಸುವದರಿಂದ ಜ್ವರದ ತಾಪ ಕಡಿಮೆಯಾಗುತ್ತದೆ.

ಹೃದ್ರೋಗದಿಂದ ಬಳಲುವವರು ಹಾಗೂ ಉದರದ ಉಣ್ಣಿನಿಂದ ಬಳಲುವವರು ಬಿಳಿತಾವರೆ ದಳಗಳನ್ನಗಾಲಿ ಇಲ್ಲವೇ ದಳಗಳಿಂದ ತಯಾರಿಸಿದ ಗುಲ್ಕನ್ ಸೇವಿಸಬೇಕು. ಇದು ಉತ್ತಮ ಔಷಧಿಯಾಗಿ ಕೆಲಸ ಮಾಡುತ್ತದೆ. ಸೀತಾಳೆ ಸಿಡುಬು ಉಂಟಾದಾಗ ತಾವರೆ ಹೂವಿನಿಂದ ತಯಾರಿಸಿದ ಶರಬತ್ ಸೇವನೆಯಿಂದ ದೇಹದಲ್ಲಿ ಉರಿ ಕಡಿಮೆಯಾಗುವುದಲ್ಲದೇ ಹೊಸದಾಗಿ ಗುಳ್ಳೆಗಳು ಹುಟ್ಟದಂತೆ ತಡಿಯುತ್ತದೆ.

ಕೆಂಪು ತಾವರೆಯ ದಳಗಳನ್ನು ಅರೆದು ಇಲ್ಲವೇ ಪುಡಿಮಾಡಿ ಹಾಲಿನೊಂದಿಗೆ ಬೆರೆಸಿ ಮುಖಕ್ಕೆ ಲೇಪಿಸಿಕೊಳ್ಳುವುದರಿಂದ ಮುಖಕಾಂತಿ ಹೆಚ್ಚುತ್ತದೆ. ಯಾವುದೇ ವಿಧದ ವಿಷಸೇವನೆ ಮಾಡಿದವರಿಗೆ ತಾವರೆಯ ಎಳೆಯ ರಸ ಇಲ್ಲವೇ ಕಷಾಯ ಕುಡಿಸುವುದರಿಂದ ವಿಷಾದ ಬಾಧೆ ಕಡಿಮೆಯಾಗುತ್ತದೆ.

ತಾವರೆ ಹೂವಿನ ಕಷಾಯವನ್ನು ಬೆಳಿಗ್ಗೆ ಹಾಗೂ ಸಂಜೆ ನೂರು ಮಿಲಿ ಪ್ರಮಾಣದಷ್ಟು ಸೇವನೆ ಮಾಡುವುದರಿಂದ ಜ್ಞಾಪಕ ಶಕ್ತಿ ಹೆಚ್ಚುತ್ತದೆ. ಇದನ್ನು ದೀರ್ಘಕಾಲ ಸೇವನೆ ಮಾಡಬೇಕಾಗುತ್ತದೆ. ಮೂಲವ್ಯಾಧಿಯ ತೊಂದರೆಯಿರುವವರು ತಾವರೆ ಹೂವಿನ ಕೇಸರಗಳನ್ನು ಜೇನುತುಪ್ಪ ಹಾಗೂ ಹಸಿವಿನ ಬೆಣ್ಣೆ ಬೆರಿಸಿ ತಿನ್ನಬೇಕು.

Leave a Reply

Your email address will not be published. Required fields are marked *