ಮುಖದಲ್ಲಿ ಅಥವಾ ಮೈ ಕೈ ಮೇಲೆ ಹುಳುಕಡ್ಡಿಯಂತಹ ಸಮಸ್ಯೆ ಬಂದರೆ ಅದು ನಮಗೆ ತುಂಬಾ ಹಿಂಸೆ ಅನ್ನಿಸುತ್ತದೆ ಅದು ದೇಹದಲ್ಲಿ ಆದ ಜಾಗದಲ್ಲಿ ಗಾಯದ ರೀತಿ ಆಗಿ ಕಡಿತ ಉಂಟಾಗುತ್ತದೆ. ಆದರೆ ಈ ಸಮಸ್ಯೆಗೆ ಹೇಗೆ ಪರಿಹಾರ ಅನ್ನುವ ಚಿಂತೆ ಬೇಡ ನಿಮ್ಮ ಊರಲ್ಲೇ ಸಿಗುವ ನೇರಳೆ ಮರದಲ್ಲಿ ಈ ರೋಗ ಗುಣಪಡಿಸುವ ಅಂಶಗಳಿವೆ.
ನಮ್ಮ ದೇಹದಲ್ಲಿ ಹುಳುಕಡ್ಡಿ ಆದ ಜಗದ ಮೇಲೆ ನೇರಳೆ ಹಣ್ಣಿನ ರಸವನ್ನು ಲೇಪಿಸಿದರೆ ಹುಳುಕಡ್ಡಿ ಗುಣವಾಗುತ್ತದೆ ಹಾಗು ನೇರಳೆ ಎಲೆಗಳನ್ನು ಜಜ್ಜಿ ಸುಟ್ಟ ಗಾಯದ ಕಲೆಗೆ ಲೇಪಿಸಿದರೆ, ಕ್ರಮೇಣವಾಗಿ ಕಲೆಗಳು ಕಡಿಮೆಯಾಗುತ್ತದೆ.
ನೇರಳೆ ತೊಗಟೆ ಮತ್ತು ಎಲೆಗಳ ಕಷಾಯಯಿಂದ ಬಾಯಿ ಮುಕ್ಕಳಿಸಿದರೆ, ಬಾಯಿಗೆ ಸಂಬಂಧಿಸಿದ ರೋಗಗಳು ಸಹ ಗುಣವಾಗುತ್ತದೆ. ಅಜೀರ್ಣದಿಂದ ವಾಂತಿ ಆಗುತ್ತಿದ್ದರೆ, 10 ರಿಂದ 20 ಮಿಲಿ ನೇರಳೆ ಹಣ್ಣಿನ ರಸವನ್ನು ಸೇವಿಸಿದರೆ ವಾಂತಿ ನಿಲ್ಲುತ್ತದೆ.
ನೇರಳೆ ಹಣ್ಣಿನ ರಸಕ್ಕೆ ನಿಂಬೆ ರಸವನ್ನು ಸೇರಿಸಿ ಮುಖಕ್ಕೆ ಲೇಪನ ಮಾಡಿದರೆ, ಮೊಡವೆಯಿಂದ ಆದ ರಂದ್ರಗಳು ಮುಚ್ಚಿ, ಮುಖವು ಕಾಂತಿಯುತವಾಗುತ್ತದೆ ಮತ್ತು ಮುಖದಲ್ಲಿ ಮೊಡವೆಗಳಿದ್ದರೆ, ನೇರಳೆ ಬೀಜದ ಪುಡಿಯನ್ನು ಹಾಲಿನಲ್ಲಿ ಕಲಸಿ, ಮುಖಕ್ಕೆ ಲೇಪನ ಮಾಡಿದರೆ ಮೊಡವೆಗಳು ಕಡಿಮೆಯಾಗುತ್ತದೆ.