ನಮಸ್ತೆ ಪ್ರಿಯ ಓದುಗರೇ, ಹುಣಸೆ ಹಣ್ಣು ನಾವು ಪ್ರತಿ ದಿನ ಬಳಸುವಂಥದ್ದು. ಯಾವುದಾದರೂ ಒಂದು ಅಡುಗೆಗೆ ಹುಣಸೆ ಹಣ್ಣನ್ನು ಬಳಸಿಯೇ ಇರುತ್ತೇವೆ. ಹುಣಸೆ ಹಣ್ಣಿನಲ್ಲೋ ಬೇಕಾದಷ್ಟು ಔಷಧೀಯ ಗುಣಗಳಿವೆ. ಹುಣಸೆ ಹಣ್ಣಿನ ಮರದ ತೊಗಟೆ, ಬೇರು, ಕಾಯಿ, ಒಳಗಿರುವ ಬೀಜ, ಎಲೆ ಎಲ್ಲವೂ ಔಷಧಿಯುಕ್ತವಾಗಿರುವವು. ಹಾಗಾಗಿ ಈ ಮರವನ್ನು ಸರಿಯಾಗಿ ಅಧ್ಯಯನ ಮಾಡಿ ತಿಳಿದುಕೊಂಡಿದ್ದೆ ಆದರೆ ಬೇಕಾದಷ್ಟು ಸಮಸ್ಯೆಗಳನ್ನು ಸುಲಭವಾಗಿ ಪರಿಹಾರ ಮಾಡಿಕೊಳ್ಳಬಹುದು. ನಮಗೆ ಯವಾಗಾದರೂ ಜ್ವರ ಬಂದರೆ, ಮೈಯಲ್ಲಿ ಹುಷಾರಿಲ್ಲ ಎಂದರೆ ನಾವು ಸಾಮಾನ್ಯವಾಗಿ ಗುಳಿಗೆಗಳನ್ನು ತೆಗೆದುಕೊಳ್ಳುತ್ತೇವೆ. ಆಗ ನಮಗೆ ಬಾಯಿ ಕೆಡುವುದು ಸಹಜ ಏನು ತಿಂದರೂ ಬಾಯಿಗೆ ಹಿಡಿಸೋದಿಲ್ಲ ಏನೇ ತಿಂದರೂ ಏನು ರುಚಿ ಇಲ್ಲದ ಪದಾರ್ಥದ ಹಾಗೆ ಅನ್ನಿಸುತ್ತದೆ ಎಂದು ಆಹಾರ ಸೇರೋದೆ ಇಲ್ಲ. ಅಂತಹ ಸಂದರ್ಭದಲ್ಲಿ ಆರೋಗ್ಯದ ಚಿಕಿತ್ಸೆಯನ್ನು ಪಡೆದುಕೊಂಡ ನಂತರ ಹೊರಕ್ಕೆ ಬರುವಾಗ ಇಂದು ನಾವು ಹೇಳಿ ಕೊಡುವ ಹುಣಸೆ ಸಾರಿಗೆ ಸ್ವಲ್ಪ ಅನ್ನವನ್ನು ಕಲಸಿಕೊಂಡು ಒಂದು ಎರೆಡು ಮೂರು ದಿನಗಳ ವರೆಗೆ ಸೇವಿಸಿದರೆ ನಮ್ಮ ನಾಲಿಗೆ ಪುನಃ ಮೊದಲಿನಂತೆ ರುಚಿಯನ್ನು ಕಂಡು ಹಿಡಿಯಲು ಶುರು ಮಾಡುತ್ತದೆ ಮತ್ತು ಔಷಧಿ ಇಂದ ಆಗಿರುವ ಅಡ್ಡ ಪರಿಣಾಮವನ್ನು ಸರಿ ಪಡಿಸುತ್ತೆ. ಹಾಗಾಗಿ ಯಾವುದೇ ಸಮಸ್ಯೆ ಬಂದು ನಾವು ಔಷಧಿಯನ್ನು ಸೇವನೆ ಮಾಡಿದಾಗ ನಂತರದ ದಿನದಲ್ಲಿ ಒಮ್ಮೆ ಆದ್ರೂ ಕೂಡ ಈ ರೀತಿ ಹುಣಸೆ ಹಣ್ಣಿನ ಸಾರು ಮಾಡಿಕೊಂಡು ಸೇವನೆ ಮಾಡಿ ನಿಮಗೆ ಎಲ್ಲ ಸಮಸ್ಯೆಗಳಿಂದ ಸುಲಭವಾಗಿ ಹೊರಕ್ಕೆ ಬರಲು ಸಾಧ್ಯವಾಗುತ್ತದೆ.
ಇಂದು ತಿಳಿಸುವ ಹುಣಸೆ ಹಣ್ಣಿನ ಸಾರಿನಲ್ಲಿ ಹುಣಸೆ ಹಣ್ಣು ಮತ್ತು ಬೆಲ್ಲ ಸೇರುವುದರಿಂದ ಜೊತೆಗೆ ಜೀರಿಗೆ ಪುಡಿಯನ್ನು ಹಾಕುತ್ತಿರುವುದರಿಂದ ಇವೆಲ್ಲವೂ ಸೇರುವುದರಿಂದ ಪಿತ್ತದಿಂದ ಬರುವಂತಹ ದೋಷಗಳು ಸುಲಭವಾಗಿ ನಿವಾರಣೆ ಆಗುವುದಕ್ಕೆ ಸಾಧ್ಯವಾಗುತ್ತದೆ. ಪಿತ್ತದಿಂದ ಬರುವಂತಹ ದೋಷಗಳು ಎಂದರೇನು? ಈ ವಾಂತಿ ಬರುವ ಹಾಗೆ ಆಗುವುದು, ಅನ್ನ ಸೇರದೆ ಹಾಗೆ ಇರುವುದು, ತಿಂದ ಆಹರವೆಲ್ಲ ಹೊರಗೆ ಬರುವಂಥದ್ದು ಅಥವಾ ಮೈ ಕೈಯಲ್ಲಿ ನೆರೆ ಬರುವಂಥದ್ದು, ತಲೆ ದಿಮ್ಮ್ ಅಂತ ಸುತ್ತುವ ಹಾಗೆ ಆಗುವುದು ಈ ಎಲ್ಲಾ ಸಮಸ್ಯೆಗಳು ಪಿತ್ತ ದೋಷದಿಂದ ಬರುವಂತವು ಅದನ್ನು ನಿವಾರಣೆ ಮಾಡಿಕೊಳ್ಳಲು ಕೇವಲ ರುಚಿ ರುಚಿಯಾದ ಹುಣಸೆ ಹಣ್ಣಿನ ಸಾರು ಮಾಡಿಕೊಂಡು ನಾವು ಊಟ ಮಾಡುವುದರಿಂದ ಶಮನ ಆಗುತ್ತವೆ. ಇನ್ನೂ ಉಳುಕಿನ ಸಮಸ್ಯೆ, ಎಲ್ಲೋ ಹೋಗುವಾಗ ಚಪ್ಪಲಿ ಅತ್ತಿತ್ತ ಆಗಿ ಕಾಳು ಉಳುಕಿದಾಗ ಎರೆಡು ಮೂರು ದಿನ ಓಡಾಡಲು ತುಂಬಾ ಕಷ್ಟ ಕೊಡುತ್ತದೆ. ಆಗ ಮನೆಯಲ್ಲಿಯೇ ಇರುವ ಹುಣಸೆ ಹಣ್ಣನ್ನು ನೆನೆಹಾಕಿ ಸ್ವಲ್ಪ ಗಟ್ಟಿಯಾಗಿ ರಸ ಕಿವುಚಿ ಗಟ್ಟಿಯಾಗಿ ರಸ ತೆಗೆದಿಟ್ಟು, ಆ ರಸಕ್ಕೆ ಕಲ್ಲು ಉಪ್ಪನ್ನು ಹಾಕಿ, ಸ್ವಲ್ಪ ಬೆಲ್ಲವನ್ನೂ ಸೇರಿಸಬೇಕು ಇವೆಲ್ಲವನ್ನೂ ಸೇರಿಸಿ ಸಣ್ಣ ಉರಿಯಲ್ಲಿ ಕುಡಿಸಿದರೆ ಸ್ವಲ್ಪ ಗಟ್ಟಿ ಆಗುತ್ತದೆ. ಇದನ್ನು ಎಲ್ಲಿ ಉಳುಕಿದೆಯೂ ಅದ ಭಾಗಕ್ಕೆ ಲೇಪದ ರೀತಿ ದಪ್ಪನಾಗಿ ಹಚ್ಚಿಕೊಳ್ಳಬೇಕು ಹೀಗೆ ಮೂರು ಬಾರಿ ಮಾಡಿ ನೋಡಿ ನಿಮ್ಮ ಉಳುಕು ಮಾಯ ಆಗುತ್ತದೆ.
ನೆಗಡಿ ಅಥವಾ ಯಾವ ರೀತಿಯ ಕೆಮ್ಮಾದರೂ ಸಹ ಹುಣಸೆ ಮರದ ಚಿಗುರನ್ನು ತಂದು ಅದನ್ನು ನೀರಲ್ಲಿ ಹಾಕಿ ಕುದಿಸಿ ಅದನ್ನು ಮೂರು ನಾಲ್ಕು ದಿವಸ ಸತತವಾಗಿ ಕುಡಿಯುವುದರಿಂದ ನೆಗಡಿ ಕೆಮ್ಮಿಗೆ ರಾಮಬಾಣದಂತೆ ಕೆಲ್ಸ ಮಾಡುತ್ತದೆ. ಇನ್ನೂ ಈ ಹುಣಸೆ ಮರದ ಬೀಜದಿಂದ ಹುಳುಕಡ್ಡಿ ಆದಾಗ ಹುಣಸೆ ಬೀಜವನ್ನು ಗಂಧದ ರೀತಿ ತೇದು ಮೂರು ನಾಲ್ಕು ದಿನ ಆ ಜಾಗಕ್ಕೆ ಹಚ್ಚಿದರೆ ಹುಳುಕಡ್ಡಿ ಮಾಯವಾಗುತ್ತದೆ. ಚರ್ಮದ ಸಮಸ್ಯೆಗಳಿಗೆ ಹುಣಸೆ ಬೀಜದಲ್ಲಿ ಪರಿಹಾರ ಇದೆ. ವಾತ ದೋಷದಿಂದ ಬರುವಂತಹ ನೋವುಗಳಿಗೆ ಹುಣಸೆ ಹಣ್ಣಿನ ಗಟ್ಟಿ ರಸಕ್ಕೆ ಸ್ವಲ್ಪ ಸೈಂಧವ ಲವಣ, ಪುದೀನಾ ಸೊಪ್ಪು, ಬೆಲ್ಲ ಹಾಕಿ ಕುದಿಸಿ, ಅದು ಆರಿದ ನಂತರ ಅದನ್ನು ಸೇವನೆ ಮಾಡುವುದರಿಂದ ವಾತ ಹಾಗಿ ಸಂಧಿವಾತದಿಂದ ಬರುವ ನೋವುಗಳು ಇವೆಲ್ಲವೂ ಪರಿಹಾರ ಆಗುತ್ತವೆ. ವಾಯು ನೋವುಗಳಿಗೆ ಇದು ಉತ್ತಮ ಮನೆ ಮದ್ದಾಗಿದೆ. ಅದ್ಭುತ ರುಚಿಯಾಗಿರುವ ಈ ಹುಣಸೆ ಹಣ್ಣಿನ ಸಾರನ್ನು ತಿಂಗಳಿಗೊಮ್ಮೆ ಮಾಡಿಕೊಂಡು ಕುಡಿದರೆ ನಿಮ್ಮ ನಾಲಿಗೆ ರುಚಿ ಹಿಡಿಯುವ ಬಲವನ್ನು ಮರುಕಳಿಸಬಹುದು. ಹಾಗಾದರೆ ಈ ಸಾರನ್ನು ಮಾಡುವ ವಿಧಾನ ತಿಳಿಯೋಣ- ಮೊದಲು ಹುಣಸೆ ಹಣ್ಣನ್ನು ನೆನೆಸಿ ಗಟ್ಟಿ ರಸವನ್ನು ಕಿವುಚಿ ಶೋಧಿಸಿ ಇಟ್ಟುಕೊಳ್ಳಿ, ಇದನ್ನು ಸ್ವಲ್ಪ ನೀರಿನ ಜೊತೆ ಸೇರಿಸಿ. ಗ್ಯಾಸ್ ಮೇಲೆ ಪಾತ್ರೆ ಇತ್ತು ಅದಕ್ಕೆ ತುಪ್ಪ, ಸಾಸಿವೆ, ಕರಿಬೇವು, ಇಂಗು ಹಾಕಿ ನಂತರ ನೀರು ಸೇರಿಸಿದ ಹುಣಸೆ ಹಣ್ಣಿನ ರಸ, ಬೆಲ್ಲ, ಸಾರಿನ ಪುಡಿ, ಕಾಳು ಮೆಣಸಿನ ಪುಡಿ ಹಾಗೂ ಜೀರಿಗೆ ಪುಡಿ ಹಾಕಿ ಉಪ್ಪು ಹಾಕಿ ಚೆನ್ನಾಗಿ ಕುದಿಸಿ. ಮೇಲೆ ಕೊತ್ತಂಬರಿ ಸೊಪ್ಪು ಉದುರಿಸಿದರೆ ಸಾರು ಸವಿಯಲು ಸಿದ್ಧ. ಶುಭದಿನ.