ಜೀವನ ಶೈಲಿ ಬದಲಾದಂತೆ ನಮ್ಮ ದೇಹದ ಆರೋಗ್ಯದ ಪರಿಸ್ಥಿತಿ ಸಹ ಬದಲಾಗುತ್ತದೆ. ಇನ್ನು ಹಾರ್ಟ್ ಅಟ್ಯಾಕ್ ಯಾರಿಗೆ ಯಾವಾಗ ಆಗುತ್ತೋ ಗೊತ್ತಿಲ್ಲ.
ದೇಹಕ್ಕೆ ಹೃದಯಾಘಾತ ಹೇಗೆ? ಬರುತ್ತದೆ ಎಂದು ಹೇಳುವುದಿಲ್ಲ ಇದ್ದಕ್ಕಿದ್ದಂತೆ ಹಾರ್ಟ್ ಅಟ್ಯಾಕ್ ಆಗಿ ಹೋಗಿಬಿಟ್ಟ ಎಂದು ಹೇಳುವ ಮಾತನ್ನ ಕೇಳಿರುತ್ತೇವೆ.
ಹೃದಯಾಘಾತ ಉಂಟಾಗುವ ಸ್ವಲ್ಪ ದಿನಗಳಿಗಿಂತ ಮುಂಚೆ ನಿಮಗೆ ನಿದ್ದೆ ಸರಿಯಾಗಿ ಬರುವುದಿಲ್ಲ. ಆಗ ಇಂತಹ ಸ್ಥಿತಿಯನ್ನು ಇನ್ಸೋಮ್ನಿಯ ಎಂದು ಕರೆಯಲಾಗುತ್ತದೆ.
ಮೆದುಳಿನಲ್ಲಿ ಒತ್ತಡ, ನೋವಿದ್ದಂತೆ ಭಾಸವಾಗುತ್ತದೆ. ಸಾಮಾನ್ಯವಾಗಿ ಕಾಣಿಸಿ ಕೊಳ್ಳುವುಕ್ಕಿಂತ ಅಧಿಕ ಮಾನಸಿಕ ಒತ್ತಡ ಹೃದಯಾಘಾತ ಮುಂಚೆ ನಿಮಗೆ ಕಾಣಿಸಿಕೊಳ್ಳುತ್ತದೆ.
ಹೊಟ್ಟೆ ನೋವು, ಜೀರ್ಣಕ್ರಿಯೆ ಸರಿಯಾಗಿ ಆಗದಿರುವುದು ಸೇರಿದಂತೆ ಇನ್ನು ಮುಂತಾದ ಲಕ್ಷಣಗಳು ಕೂಡ ಕಂಡು ಬರುತ್ತದೆ.
ಗಲ್ಲ, ಕುತ್ತಿಗೆ, ಭುಜ, ಕಿವಿಯ ಹತ್ತಿರ ನೋವು ಉಂಟಾಗುತ್ತದೆ. ಕುತ್ತಿಗೆ ಮತ್ತು ಭುಜದ ನೋವು ದೇಹದ ಎಡ ಭಾಗದಲ್ಲಿ ಕಾಣಿಸಿಕೊಳ್ಳುತ್ತದೆ.
ಮನೆ ಕೆಲಸ ಮಾಡುವಾಗ ಅಥವಾ ಮನೆ ಮೆಟ್ಟಿಲು ಹತ್ತುವಾಗ ಉಸಿರಾಟಕ್ಕೆ ಕಷ್ಟವಾಗುವುದು.
ಚಳಿಯಾಗುವುದು, ಹೆಚ್ಚು ವಿಪರೀತ ಬೆವರುವುದು, ನಿಶ್ಯಕ್ತಿ, ಜ್ವರ ಬಂದಂತೆ ಅನಿಸುವುದು ಈ ಎಲ್ಲಾ ಲಕ್ಷಣಗಳು ಕಂಡುಬರುತ್ತದೆ.
ಅನೇಕರಿಗೆ ವಾಂತಿ, ವಾಕರಿಕೆ ಆಗಬಹುದು. ಹೀಗಾದಾಗ ರೋಗಿ ಗೊಂದಲಕ್ಕೆ ಬೀಳಬಹುದು. ತನಗಾಗಿರುವುದು ಪುಟ್ಟ ಸಮಸ್ಯೆ, ಹೃದಯಕ್ಕೆ ಸಂಬಂಧಿಸಿದ್ದಲ್ಲ ಎಂದು ತಣ್ಣನೆ ಕುಳಿತುಕೊಳ್ಳಬಹುದು.
ಈ ಎಲ್ಲಾ ಲಕ್ಷಣಗಳೊಟ್ಟಿಗೆ ಬಂದರೆ ಎದೆಯುರಿ ಖಂಡಿತಾ ಕಾಣಿಸಿಕೊಳ್ಳುತ್ತದೆ. ಅದರಲ್ಲೂ ಡಯಾಬಿಟೀಸ್ ಇದ್ದವರು, ಕೊಲೆಸ್ಟೆರಾಲ್ ಹೊಂದಿದವರು, ಧೂಮಪಾನ- ಮದ್ಯಪಾನದಂಥ ಚಟವುಳ್ಳವರಿಗೆ ಇಂಥ ಲಕ್ಷಣ ಕಂಡಕೂಡಲೇ ಹೃದಯ ಕೈಕೊಡಬಹುದು.
ದೇಹದ ಎದೆಯ ಎಡಭಾಗದಲ್ಲಿ ನಿಮಗೆ ಯಾವುದೇ ರೀತಿಯ ಅಸಹಜ ನೋವು ಕಾಣಿಸಿ ಕೊಂಡರೂ ವೈದ್ಯರನ್ನು ಭೇಟಿ ಮಾಡುವುದು ಒಳ್ಳೆಯದು. ಹೀಗೆಇದರ ಬಗ್ಗೆ ನೀವು ಸ್ವಲ್ಪ ಹೆಚ್ಚರ ವಹಿಸಬೇಕಾಗುತ್ತದೆ.