ಸಾಮಾನ್ಯವಾಗಿಬಿಪಿ ಬಗ್ಗೆ ನೀವು ಮಿಸ್ ಮಾಡದೆ ತಿಳಿದುಕೊಳ್ಳಿ ಏಂಕೆದರೆ ಪ್ರತಿಯೊಬ್ಬರಿ ಗೂ ಯಾವಾಗಲೋ ಒಮ್ಮೆಮ್ಮೆ ಎದುರಾಗುವ ಆರೋಗ್ಯ ಸಮಸ್ಯೆ ಎಂದರೆ ಹೈಬಿಪಿ, ಅಥವಾ ಲೋ ಬಿಪಿ.
ನಾವು ಸೇವಿಸುವ ಆಹಾರ ಅಭ್ಯಾಸಗಳು, ಜೀವನಶೈಲಿ, ಅಧಿಕ ಒತ್ತಡ ಕಾರಣ ಸಹ ಒಂದು ಸಮಸ್ಯೆ. ಅದೇ ರೀತಿ ಉಪ್ಪು ಹೆಚ್ಚಾಗಿ ಸೇವಿಸುವುದು, ಅನುವಂಶೀಯತೆ ಕಾರಣದಿಂದ ಬಿಪಿ (ರಕ್ತದ ಒತ್ತಡ) ಸಮಸ್ಯೆಗಳು ಬರುವ ಅಪಾಯ ಕಾದಿದೆ.
ಮೂತ್ರಕೋಶಗಳ ಸಮಸ್ಯೆ, ಹೃದ್ರೋಗ ಸಮಸ್ಯೆಗಳು ಬರುವ ಸಾಧ್ಯತೆಗಳಿವೆ. ಈ ವಿಚಾರದಲ್ಲಿ ಎಚ್ಚರ ವಹಿಸಿ. ಸಾಮಾನ್ಯವಾಗಿ ನಿಮ್ಮ ವಯಸ್ಸಿಗೆ ತಕ್ಕಂತೆ ಬಿಪಿ ಎಷ್ಟು ಇರಬೇಕು ಎಂಬುದನ್ನು ತಿಳಿದುಕೊಳ್ಳಿ.
ನಿಮ್ಮ ದೇಹದಲ್ಲಿ ಅಧಿಕ ರಕ್ತದ ಒತ್ತಡ ಎಂದ ಕೂಡಲೆ ಎಲ್ಲರಿಗೂ120/80 ನೆನಪಿಗೆ ಬರುತ್ತದೆ. ಯಾಕೆಂದರೆ ಅದು ಸಾಮಾನ್ಯ ರಕ್ತದ ಒತ್ತಡದ ಮಾನದಂಡಕ್ಕೆ ತಕ್ಕಂತೆ ಯುವತಿ ಯುವತಿಯರಿಗೆ (20-40 ವರ್ಷಗಳವರಿಗೆ) ಸಾಮಾನ್ಯ ಬಿಪಿ 120/80ಗೆ ಒಂದು ಸಂಖ್ಯೆ ಅತ್ತಿತ್ತ ಇರಬೇಕು. ವಯಸ್ಸು ಹೆಚ್ಚಾಗುತ್ತಾ ಸಾಮಾನ್ಯ ರಕ್ತದ ಒತ್ತಡ 130/85ಕ್ಕೆಬರುತ್ತದೆ.
ಇನ್ನು ಹೇಳಬೇಕಾದರೆ ಸಾಮಾನ್ಯವಾಗಿ ಚಿಕ್ಕಮಕ್ಕಳಿಗೆ ಸಾಮಾನ್ಯ ರಕ್ತದ ಒತ್ತಡ ಹುಟ್ಟಿದಾಗ 90/60 ಇದ್ದು ಅದು ಕ್ರಮೇಣ ಹೆಚ್ಚಾಗುತ್ತದೆ. ಅದೇ ರೀತಿ ಈ ಕೆಳಗಿನ ಚಾರ್ಟ್‌ನಲ್ಲಿ ವಯಸ್ಸಿಗೆ ತಕ್ಕಂತೆ, ಎಷ್ಟು ರಕ್ತದ ಒತ್ತಡ ಇರಬೇಕು ಎಂಬುದನ್ನು ತಿಳಿಸಿದ್ದಾರೆ ಒಮ್ಮೆ ಗಮನಿಸಿ. ನಿಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಿ.