ನಾವು ಕೆಲವೊಮ್ಮೆ ಮನೆಯಲ್ಲಿ ಆರಾಮವಾಗಿ ಸುಮ್ಮನೆ ಕುಳಿತಿದ್ದಾಗ ಅಥವಾ ಇತರರ ಜೊತೆ ಮಾತನಾಡುತ್ತಾ ಇರಬೇಕಾದರೆ ಅಥವಾ ನಮ್ಮ ಯಾವುದೇ ಒಂದು ಕೆಲಸದಲ್ಲಿ ನಿರತರಾಗಿ ಕಾಲ ಕಳೆಯುತ್ತಿರುವ ಸಂದರ್ಭದಲ್ಲಿ ಇದಕ್ಕಿದ್ದಂತೆ ನಮ್ಮ ಹೊಟ್ಟೆ ಗುರು ಅಂತ ಶಬ್ದ ಮಾಡಲು ಪ್ರಾರಂಭ ಮಾಡುತ್ತದೆ. ಇಂತಹ ಸಮಯದಲ್ಲಿ ನಾವು ಒಬ್ಬರೇ ಇದ್ದರೆ ಏನು ಸರಿ ಅಪ್ಪಿ ತಪ್ಪಿದ್ ಬೇರೆ ನಮ್ಮ ಸ್ನೇಹಿತರು ಅಥವಾ ಮೇಲಾಧಿಕಾರಿಗಳು ಸಹದ್ಯೋಗಿಗಳ ಜೊತೆ ಇದ್ದರೆ ಅಂತೂ ನಮ್ಮ ಪಾಡು ಕೇಳುವುದೇ ಬೇಡ.
ಮುಜುಗರಕ್ಕೆ ಒಳಗಾಗಬೇಕಾಗುತ್ತದೆ ಆದರೆ ಇದು ಬೇಕೆಂದು ನಾವೇ ಮಾಡಿಕೊಂಡ ಸಮಸ್ಯೆ ಏನಲ್ಲ. ತಾನಾಗಿಯೇ ಹೊಟ್ಟೆಯಿಂದ ಉತ್ಪತ್ತಿಯಾಗುವ ಇಂತಹ ಶಬ್ದಕ್ಕೆ ಏನು ಮಾಡಬೇಕು. ಇದಕ್ಕೆ ಕಾರಣವೇನು ನಮ್ಮ ಹೊಟ್ಟೆ ಆರೋಗ್ಯವನ್ನು ಸರಿಯಾಗಿ ಕಾಪಾಡಿಲ್ಲ ಎಂಬುದರ ಸೂಚನೆಗೆ ಇದನ್ನು ತಿಳಿದುಕೊಳ್ಳುವ ಮೊದಲು
ಸಾಮಾನ್ಯವಾಗಿ ನಮ್ಮ ಹೊಟ್ಟೆಯಲ್ಲಿ ಶಬ್ದ ಒಂದು ಕೇಳಿಸುತ್ತದೆ ಹಾಗಾದರೆ ಇದಕ್ಕೆ ಕಾರಣವೇನು. ಹೊಟ್ಟೆ ಹಸಿವು ಕರುಳಿನಲ್ಲಿ ಕಟ್ಟಿಕೊಂಡಿರುವಂತೆ ಆಗಿರುವುದು ಜಠರನಾಳದ ಸೋಂಕು. ಆಹಾರದ ಅಲರ್ಜಿ ಇರಿಟೇಬಲ್ ಸಿಂಡ್ರೋಮ್ ಗ್ಯಾಸ್ ಸ್ಟ್ರಿಕ್ಟ್. ಹಾಗಿದ್ದರೆ ಈ ಹೊಟ್ಟೆಯಲ್ಲಿ ಉತ್ಪತ್ತಿಯಾಗುವ ಈ ಶಬ್ದಕ್ಕೆ ಏನು ಮಾಡಬೇಕು ನಾವು ಕೆಲವೊಂದು ಟಿಪ್ಸ್ ಗಳನ್ನು ಅನುಸರಿಸುವ ಮೂಲಕ ನಮ್ಮ ಹೊಟ್ಟೆಯಿಂದ ಬರುವ ಶಬ್ದವನ್ನು ಮೊದಲು ಹೊಟ್ಟೆ ಸಮಸ್ಯೆಯನ್ನು ಕಡಿಮೆ ಮಾಡಿಕೊಳ್ಳಬೇಕು.
ನೀರು ಕುಡಿಯಿರಿ ಎಂದಾದರೂ ನಿಮಗೆ ಹೊಟ್ಟೆಯಲ್ಲಿ ಶಬ್ದ ಬರುವ ಅನುಭವ ಉಂಟಾದರೆ ತಕ್ಷಣವೇ ಒಂದು ನೋಟ ನೀರು ಕುಡಿಯಿರಿ. ಇದು ನಿಮ್ಮ ಹೊಟ್ಟೆಗೂ ಒಳ್ಳೆಯದು ಮತ್ತು ನಿಮ್ಮ ಜೀರ್ಣಾಂಗದ ಆರೋಗ್ಯಕ್ಕೂ ಒಳ್ಳೆಯದು. ಕೆಲವೊಮ್ಮೆ ಹೊಟ್ಟೆ ಕಾಲಿ ಇದ್ದರೆ ಈ ರೀತಿ ಶಬ್ದ ಬರುತ್ತದೆ. ಹಾಗಾಗಿ ಹೊಟ್ಟೆ ತುಂಬಾ ನೀರು ಕುಡಿದು ನೀವು ಶಬ್ದವನ್ನು ಕಡಿಮೆ ಮಾಡಿಕೊಳ್ಳಬಹುದು. ಇನ್ನು ಕೆಲವೊಮ್ಮೆ ನಾವು ಸಾಕಷ್ಟು ನೀರು ಕುಡಿಯದೇ ಇರುವುದು ಕೂಡ ಹೊಟ್ಟೆಯಿಂದ ಶಬ್ದ ಬರಲು ಒಂದು ದೊಡ್ಡ ಸೂಚನೆ ಆಗಿರುತ್ತದೆ ನಿಧಾನವಾಗಿ ನೀರು ಕುಡಿಯುವುದರಿಂದ ನಿಮ್ಮ ಹೊಟ್ಟೆಯಲ್ಲಿನ ಗಾಳಿ ಕಡಿಮೆಯಾಗಿ ಹೊಟ್ಟೆಗೆ ಸಂಬಂಧಪಟ್ಟ ಶಬ್ದಗಳು ನಿವಾರಣೆಯಾಗುತ್ತದೆ.
ಏನಾದರೂ ಆಹಾರ ಸೇವಿಸಿ ನಿಮ್ಮ ಹೊಟ್ಟೆ ತುಂಬಾ ಹಸಿಯುತ್ತಿದ್ದರೆ ಅದು ಕೂಡ ಹೊಟ್ಟೆಯಿಂದ ಬರುವ ಶಬ್ದಕ್ಕೆ ಒಂದು ಕಾರಣವಾಗಿರಬಹುದು. ಹಾಗಾಗಿ ಹೊಟ್ಟೆಯಿಂದ ಬರುವ ಶಬ್ದಗಳು ನಿಮಗೆ ಆಹಾರ ತಿನ್ನಲು ಹೇಳುವ ಕರೆಗಂಟೆ ಆಗಿರಬಹುದು. ಈ ಸಮಯದಲ್ಲಿ ನಿಮಗೆ ತಕ್ಷಣವೇ ಯಾವುದೇ ಆರೋಗ್ಯಕರವಾದ ಆಹಾರ ಸಿಕ್ಕಿದರು ಅದನ್ನು ಸೇವಿಸಿ.