ಎಲ್ಲರಿಗೂ ನಮಸ್ಕಾರ ಇವತ್ತು ಆಸಿಡಿಟಿ ಮತ್ತು ಹೊಟ್ಟೆ ಉಬ್ಬರಕ್ಕೆ ಸಿಂಪಲ್ ಮನೆಮದ್ದು ಏನು ಅಂತ ಹೇಳಿ ಕೊಡುತ್ತೇವೆ ಸುಮಾರು ಜನ ನಾವು ಆಫೀಸಿಗೆ ಹೋಗುತ್ತೇವೆ ಕೆಲಸಕ್ಕೆ ಹೋಗುತ್ತೇವೆ ಅಲ್ಲೆಲ್ಲ ನಾವು ಶುಂಠಿ ನೀರು ಆಗಲಿ ಜೀರಿಗೆ ನೀರು ಆಗಲಿ ಕುಡಿಯುವುದಕ್ಕೆ ಆಗುವುದಿಲ್ಲ. ಹೊಟ್ಟೆ ಉಬ್ಬರ ಅಥವಾ ಗ್ಯಾಸ್ ಸಮಸ್ಯೆಯಿಂದ ಬಳಲುವವರು ಅರ್ಧ ಟೀ ಚಮಚ ಇಂಗ್ ಅನ್ನು ಒಂದು ಲೋಟ ಮಜ್ಜಿಗೆಗೆ ಅಥವಾ ಉಗುರು ಬೆಚ್ಚಗಿನ ನೀರಿನಲ್ಲಿ ಸೇರಿಸಿ ಕುಡಿಯಬಹುದು.
ಈ ವಿಧಾನದಿಂದ ಬಹುಬೇಗ ಗ್ಯಾಸ್ ಸಮಸ್ಯೆಯನ್ನು ನೀವು ನಿವಾರಿಸಿಕೊಳ್ಳಬಹುದು. ಇಂಗು ನಿಮ್ಮ ಹೊಟ್ಟೆಯಲ್ಲಿ ಹೆಚ್ಚುವರಿ ಅನಿಲವನ್ನು ಉತ್ಪಾದಿಸುವ ಕರುಳಿನ ಬ್ಯಾಕ್ಟೀರಿಯಾದ ಬೆಳವಣಿಗೆಯನ್ನು ತಡೆಯುತ್ತದೆ. ನಮ್ಮ ದೇಹದ ಜೀರ್ಣಕ್ರಿಯೆ ಚೆನ್ನಾಗಿದ್ದರೆ ಶೇಕಡಾ 80ರಷ್ಟು ಕಾಯಿಲೆಗಳನ್ನು ನಾವು ತಡೆಗಟ್ಟಬಹುದು ಅದರಲ್ಲೂ ಈ ಗ್ಯಾಸ್ಟಿಕ್ ಸಮಸ್ಯೆ ಇದ್ದರಂತೂ ಅದರ ಜೊತೆಗೆ ಎದೆ ಉರಿ ಉಳಿತೇಗು ಸರಿಯಾದ ನಿದ್ದೆಯನ್ನು ಮಾಡುವುದಕ್ಕೆ ಆಗುವುದಿಲ್ಲ ಹೀಗೆ ಒಂದಲ್ಲ ಒಂದು ಶುರುವಾಗಿ ಬಿಡುತ್ತದೆ.
ಇದಕ್ಕೆ ಸಿಂಪಲ್ ಆಗಿ ಪರಿಹಾರ ಎಂದರೆ ಎಲ್ಲರ ಮನೆಯಲ್ಲೂ ಜೀರಿಗೆ ಇದ್ದೇ ಇರುತ್ತದೆ ಇದನ್ನು ನೀವು ಊಟ ಆದ ಮೇಲೆ 10 ರಿಂದ 15 ಕಾಳುಗಳನ್ನು ಬಾಯಲ್ಲಿ ಹಾಕಿಕೊಂಡು ಚೆನ್ನಾಗಿ ಅಗಿದು ತಿಂದು ಬಿಡಿ ಯಾವುದೇ ಕಾರಣಕ್ಕೂ ಉಗಿಯುವುದಕ್ಕೆ ಹೋಗಬೇಡಿ. ನೀವು ತಿಂದಿರುವಂತಹ ಆಹಾರ ಸುಲಭವಾಗಿ ಜೀರ್ಣವಾಗಿ ಬಿಡುತ್ತದೆ. ಜೀರಿಗೆಯನ್ನು ಒಂದು ಸಣ್ಣ ಕವರ್ನಲ್ಲಿ ಅಥವಾ ಪೇಪರ್ ನಲ್ಲಿ ಹಾಕಿಕೊಂಡು ನಿಮ್ಮ ಜೊತೆಯಲ್ಲಿಟ್ಟುಕೊಳ್ಳಿ ನೀವು ಎಲ್ಲಿ ಊಟ ಮಾಡಲಿ ಊಟ ಆದಮೇಲೆ ಹತ್ತರಿಂದ ಹದಿನೈದು ಕಾಳು ಜೀರಿಗೆಯನ್ನು ತಿಂದು ನೀರು ಕುಡಿಯಿರಿ.
ಇದರಿಂದ ನೀವು ಏನೇ ಊಟ ಮಾಡಿದರೂ ಸುಲಭವಾಗಿ ಜೀರ್ಣವಾಗುವುದರ ಜೊತೆಗೆ ಗ್ಯಾಸ್ಟಿಕ್ ಕೂಡ ನಿಮ್ಮ ಹತ್ತಿರ ಸುಳಿಯುವುದಿಲ್ಲ. ನಿಮಗೆ ಗ್ಯಾಸ್ಟಿಕ್ ಇರಲಿ ಬಿಡಲಿ ಜೀರಿಗೆ ತಿನ್ನುವುದನ್ನು ಅಭ್ಯಾಸ ಮಾಡಿಕೊಂಡರೆ ನಮ್ಮ ದೇಹದ ಜೀರ್ಣಶಕ್ತಿ ಚೆನ್ನಾಗಿ ನಾವು ಆರೋಗ್ಯದಿಂದ ಇರುತ್ತೇವೆ.ಶುಂಠಿಯು ಆಯುರ್ವೇದದಲ್ಲಿ ಅತ್ಯುತ್ತಮ ಔಷಧಿ ಮೂಲ ಎಂದು ಗುರುತಿಸಲಾಗಿದೆ.
ಇದು ವಿವಿಧ ಆರೋಗ್ಯ ಸಮಸ್ಯೆಗಳನ್ನು ಬಹುಬೇಗ ನಿವಾರಿಸುವುದು. ಗ್ಯಾಸ್ ಸಮಸ್ಯೆ ಅಥವಾ ಹೊಟ್ಟೆ ಉಬ್ಬರದ ಸಮಸ್ಯೆ ಹೊಂದಿರುವ ವ್ಯಕ್ತಿಗಳು ಶುಂಠಿಯ ಪರಿಹಾರ ಕಂಡುಕೊಳ್ಳಬಹುದು. ತಾಜಾ ಶುಂಠಿಯ ತುರಿಯನ್ನು ನಿಂಬೆ ರಸದೊಂದಿಗೆ ಸೇರಿಸಿ, ಸೇವಿಸಬೇಕು. ಈ ಕ್ರಮವನ್ನು ಊಟದ ನಂತರ ಸೇವಿಸಿದರೆ ಉತ್ತಮ ಪರಿಹಾರ ನೀಡುವುದು.