ಮನೆ ಕಟ್ಟಲು ಯಾರಿಗೆ ಆಸೆ ಇರಲ್ಲ ಹೇಳಿ ನೋ ಹಗಲು ರಾತ್ರಿ ದುಡಿದು ಬಂದ್ ಹಣವನ್ನು ಜೋಡಿಸಿ ಇಟ್ಟು ನಾವು ನಮ್ಮ ಕನಸಿನ ಮನೆಯನ್ನು ಕಟ್ಟಲು ಮುಂದಾಗುತ್ತೇವೆ ಆದರೆ ಈ ಕನಸು ನಮ್ಮ ಹಣದ ಕೊರತೆಯಿಂದಾಗಿ ಒಂದು ಸಲ ನನಗೂ ಆಗಲು ತುಂಬಾನೇ ದಿನಗಳು ಅಥವಾ ವರ್ಷಗಳ ಕಾಲ ಹಿಡಿಯುತ್ತದೆ ಹೀಗಾಗಿ ನಾವು ನಮ್ಮ ಬ್ಯಾಂಕಿನ ಹತ್ತಿರ ಸಾಲ ಅಥವಾ ಯಾರಾದರೂ ಸ್ನೇಹಿತರಿಂದ ಸಹ ಸಾಲ ಪಡೆದು ಮನೆ ಕಟ್ಟಲು ಮುಂದಾಗುತ್ತೇವೆ ಆದರೆ ಆ ಹಣದ ಕೊರತೆಯಿಂದಾಗಲು ನಾವು ಅರ್ಧಕ್ಕೆ ಮನೆ ನಿಲ್ಲಿಸುವಂತಹ ಪರಿಸ್ಥಿತಿ ಕೂಡ ಎದುರಾಗುತ್ತದೆ.
ಇವತ್ತಿನ ಮಾಹಿತಿಯಲ್ಲಿ ನಿಮಗೆ ಕರ್ನಾಟಕದ ಸರಕಾರದಿಂದ ಮನೆ ಕಟ್ಟಲು ಯಾವ ಸಹಾಯ ಆಗುತ್ತದೆ ಎಂದು ನೀವು ಇಲ್ಲಿ ತಿಳಿಯಬಹುದು .ಮೋದಿ ಸರ್ಕಾರದಿಂದ ಹಲವಾರು ಯೋಜನೆಗಳು ಕೂಡ ಇದ್ದಾವೆ ಅದರಲ್ಲಿ ಪ್ರಧಾನ ಮಂತ್ರಿ ಗೃಹ ಯೋಜನ ಕೂಡ ಒಂದು ಇದರಿಂದ ಕೂಡ ಹಲವಾರು ಜನ ಸಹಾಯ ಪಡೆದವರು ಕೂಡ ಇದ್ದಾರೆ. ಕರ್ನಾಟಕ ಬಡ್ಡಿ ರಹಿತ ಗೃಹ ಸಾಲ 2022, ಯಾರಾದರೂ ತಮ್ಮ ಸ್ವಂತ ಮನೆ ಹೊಂದುವ ಕನಸನ್ನು ನನಸಾಗಿಸಬಹುದು.
ಎಲ್ಲವೂ ಯೋಜನೆಯಂತೆ ನಡೆದರೆ, ಸರ್ಕಾರವು ಅಸ್ತಿತ್ವದಲ್ಲಿರುವ ವಸತಿ ಸಬ್ಸಿಡಿಗಳನ್ನು ತೆಗೆದುಹಾಕುತ್ತದೆ ಎಂದು ನಿರ್ಧಾರಗಳನ್ನು ಕೂಡ ನೀಡುತ್ತಿದ್ದಾರೆ. ರಾಜ್ಯದ ವಸತಿ ರಹಿತ ಬಿಪಿಎಲ್ ಕುಟುಂಬದವರಿಗೆ ಸರ್ಕಾರವು ಸಿಹಿ ಸುದ್ದಿ ನಡೆಯಿತು ವಿವಿಧ ವಸತಿಯ ಯೋಜನೆ ಸಬ್ಸಿಡಿ ಎರಡು ಪಟ್ಟು ಹೆಚ್ಚಳ ಮಾಡುವ ಚಿಂತನೆ ನಡೆಸಿದೆ.
ಪರಿಶಿಷ್ಟರು ಸಾಮಾನ್ಯ ವರ್ಗದವರು ಸೇರಿದಂತೆ ಎಲ್ಲರಿಗೂ ಗ್ರಾಮೀಣ ಪ್ರದೇಶದಲ್ಲಿ 3 ಲಕ್ಷ ರೂಪಾಯಿ ಮತ್ತು ನಗರ ಪ್ರದೇಶದಲ್ಲಿ ನಾಲ್ಕು ಲಕ್ಷ ರೂಪಾಯಿ ಸಹಾಯಧನ ನೀಡಲು ಚಿಂತನೆ ನಡೆದಿದೆ ಪ್ರಸ್ತುತ ಗ್ರಾಮೀಣ ಭಾಗದಲ್ಲಿ 1,20,000 ಹಾಗೂ ನಗರ ಪ್ರದೇಶದಲ್ಲಿ 2.70 ಲಕ್ಷ ರೂಪಾಯಿ ಸಬ್ಸಿಡಿ ನೀಡಲಾಗುತ್ತಿದೆ ಹೀಗೆ ಒಂದೊಂದು ಯೋಜನೆಗಳ ಸಬ್ಸಿಡಿಯನ್ನು ಗ್ರಾಮೀಣ ಭಾಗದಲ್ಲಿ 1.20,000 ಇಂದ 3 ಲಕ್ಷ ರೂಪಾಯಿ ನಗರ ಪ್ರದೇಶದಲ್ಲಿ 2.70 ಲಕ್ಷ ರೂಪಾಯಿಯಿಂದ 4 ಲಕ್ಷ ರೂಪಾಯಿಗೆ ಹೆಚ್ಚಳ ಮಾಡಲಾಗುವುದು ಯಾವುದೇ ಮನೆ ನಿರ್ಮಾಣಕ್ಕೆ ಕನಿಷ್ಠ 5 ಲಕ್ಷ ಅಗತ್ಯವಿದೆ ಸರ್ಕಾರದ ಸಬ್ಸಿಡಿ ಸಾಕಾಗುತ್ತಿಲ್ಲ.
ಏಕೆಂದರೆ ಬಡವರು ಮನೆ ನಿರ್ಮಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ ಹೀಗಾಗಿ ವಸತಿ ಯೋಜನೆ ಗಳ ಸಬ್ಸಿಡಿ ಮೊತ್ತ ಹೆಚ್ಚಳಕ್ಕೆ ಸರ್ಕಾರ ಕ್ರಮ ಕೈಗೊಂಡಿರುವಾಗಿ ವಸತಿ ಸಚಿವ ಸೋಮಣ್ಣ ಹೇಳಿದ್ದಾರೆ ನಗರ ಪ್ರದೇಶದ ಬಿಪಿಎಲ್ ಕುಟುಂಬಗಳಿಗೆ ಮಂಜೂರಾದ ಮನೆಗಳಿಗೆ ಸಾಮಾನ್ಯ ವರ್ಗದವರಿಗೆ 2.70 ಲಕ್ಷ ರೂಪಾಯಿ ಪರಿಶಿಷ್ಟರಿಗೆ 3,50,000 ಸಬ್ಸಿಡಿ ಇದೆ, ಕೇಂದ್ರ ಸರ್ಕಾರ ಎಲ್ಲಾ ವರ್ಗದ ಫಲಾನುಭವಿಗಳಿಗೆ ಏಕರೂಪದ ಸಬ್ಸಿಡಿ ನೀಡುತ್ತಿತ್ತು ರಾಜ್ಯದಲ್ಲಿಯೂ ಅದೇ ನಿಯಮ ಪಾಲಿಸಲಾಗುವುದು ಎಂದು ಹೇಳಲಾಗಿದೆ.
ಗ್ರಾಮೀಣ ಪ್ರದೇಶದ ಬಿಪಿಎಲ್ ಕುಟುಂಬದವರಿಗೆ ವಸತಿ ಯೋಜನೆ ಅಡಿ ಮಂಜೂರಾದ ಮನೆಗಳಿಗೆ ಕೇಂದ್ರ ಸರ್ಕಾರ 72,000 ರಾಜ್ಯ ಸರ್ಕಾರ 48000 ಸೇರಿ 1.20000 ಸಹಾಯಧನ ನೀಡುತ್ತಿದೆ. ಈ ಮೊತ್ತವನ್ನು ಎಲ್ಲ ವರ್ಗದ ಫಲಾನುಭವಿಗಳಿಗೆ ಸಮಾನಾಗಿ 3 ಲಕ್ಷ ರೂಪಾಯಿ ಏರಿಕೆ ಮಾಡಲು ಮುಂದಾಗಿದ್ದು ಸರ್ಕಾರವೇ ಹೆಚ್ಚುವರಿ ಮೊತ್ತ ಹಾಕಿದೆ ಎಂದು ಹೇಳಲಾಗಿದೆ.