ಕುರಿ ಕಾಯುವವರಿಗೆ ಅಥವಾ ರೈತರ ಮನೆಯಲ್ಲಿ ಕುರಿ ಮೇಕೆ ಹಸು ದನ. ಇದೇ ರೀತಿ ಯಾವುದಾದರೂ ಪ್ರಾಣಿಯನ್ನ ನೀವು ಒಂದು ವೇಳೆ ಸಾಕ್ತಾ ಇದ್ದರೆ ಅಂತ ಒಂದು ರೈತರಿಗೆ ಅಥವಾ ಕುರಿಗಾರರಿಗೆ ಸರ್ಕಾರದ ಕಡೆಯಿಂದ ಅನುಗ್ರಹ ಕೊಡುಗೆ ಯೋಜನೆ ಅಂತ ಮಾಡಲಾಗಿದೆ. ಈ ಯೋಜನೆಯಲ್ಲಿ ₹2500, ₹5000 ಮತ್ತು ₹10,000 ಹಣವನ್ನು ಪಡೆಯುವಂತಹ ಅನುಗ್ರಹ ಕೊಡುಗೆ ಯೋಜನೆಯನ್ನು ಸರ್ಕಾರ ಆರಂಭ ಮಾಡಲಾಗಿದೆ. ಹಾಗಾದ್ರೆ ಈ ಒಂದು ಅನುಗ್ರಹ ಕೊಡುಗೆ ಯೋಜನೆ ಅಂದ್ರೆ ಏನು? ಯೋಜನೆ ಮೂಲಕ ತಾವು 10,000 ತನಕ ಸಹಾಯಧನ ಹೇಗೆ ಪಡೆಯಬಹುದು?

ಶ್ರೀ ಪಂಚಮುಖಿ ಜೋತಿಷ್ಯ ಪಂಡಿತ್ ಶ್ರೀ ಗಣೇಶ್ ಕುಮಾರ್ ಎಲ್ಲ ಕಷ್ಟಗಳಿಗೂ ಫೋನಿನ ಮೂಲಕ ಪರಿಹಾರ ನೀಡುತ್ತಾರೆ 22 ವರ್ಷಗಳ ಸುದೀರ್ಘ ಅನುಭ ಹೊಂದಿರುವ ಸುಪ್ರಸಿದ್ದ ಜ್ಯೋತಿಷ್ಯರು, ಸಮಸ್ಯೆ ಯಾವುದೇ ಇರಲಿ ಇವರಲ್ಲಿ ಖಂಡಿತ ನಿಮ್ಮ ಸಮಸ್ಯೆಗೆ ಪರಿಹಾರ ಸಿಗುತ್ತದೆ. ಕೇರಳ ಕಲ್ಕತ್ತಾದ ಸಾವಿರಾರು ವರ್ಷಗಳ ಪ್ರಾಚೀನ ನಾಡಿ ಗ್ರಂಥ ಆದರದಿಂದ ನಿಮ್ಮ ಸಮಸ್ಯೆಗಳನ್ನು ಶಾಶ್ವತವಾಗಿ ಪರಿಹಾರ ಮಾಡುತ್ತಾರೆ ಫೋನ್ ಅಥವಾ ವಾಟ್ಸಪ್ ಮಾಡಿ 9880444450.

ಅದರ ಅರ್ಹತೆಗಳು ಏನು ಅರ್ಜಿಯನ್ನು ಸಲ್ಲಿಸುವುದು ಹೇಗೆ ಅರ್ಜಿ ಸಲ್ಲಿಸಿಕ್ಕೆ ಬೇಕಾಗುವಂತಹ ದಾಖಲಾತಿಗಳು ಏನು ಅಂತ ಕಂಪ್ಲೀಟ್ ಮಾಹಿತಿ ನಿಮಗೆ ತಿಳಿಸಿಕೊಡುತ್ತೇವೆ. ಸರ್ಕಾರವು ಈ ಯೋಜನೆ ಮೂಲಕ ಕುರಿ ಮೇಕೆ, ಹಸು, ಎಮ್ಮೆ ಮತ್ತು ಎತ್ತುಗಳು ಆಕಸ್ಮಿಕವಾಗಿ ಮರಣ ಹೊಂದಿದರೆ ಅಂತಹ ಸಂದರ್ಭದಲ್ಲಿ ಮಾಲೀಕರಿಗೆ ಪರಿಹಾರ ಧನ ಅಂತ ಕೊಡ್ತಾ ಇದ್ದಾರೆ. ಹಾಗಾದ್ರೆ ಯಾವ ರೀತಿಯಾಗಿ ಸಹಾಯಧನ ಕೊಡ್ತಾರೆ ಅಂತ ನೋಡೋದಾದ್ರೆ ಕುರಿ ಅಥವಾ ಮೇಕೆಯನ್ನು ಸಾಕಿದ ಮೂರರಿಂದ ಆರು ತಿಂಗಳ ಒಳಗಾಗಿ ಮರಣವನ್ನು ಹೊಂದಿದರೆ ಅಂತ ಒಂದು ಕುರಿ ಅಥವಾ ಮೇಕೆಗೆ ತಲಾ ₹2500 ಕೊಡ್ತಾರೆ. ಹಾಗೆ ಮಾಲಿಕರು ಸಾಕಿ ದಂತ ಕುರಿ ಮೇಕೆ ಆಗಿರಬಹುದು.

ಆರು ತಿಂಗಳ ಮೇಲ್ಪಟ್ಟ ಇದ್ರೆ ಅಂತ ಒಂದು ಕುರಿ ಮೇಕೆಗೆ 5000 ರೂಪಾಯಿಗಳನ್ನು ಕೊಡ್ತಾರೆ ಮತ್ತು ಹಸು, ಎಮ್ಮೆ ಅಥವಾ ಎತ್ತುಗಳು ಏನಾದ್ರು ಆಕಸ್ಮಿಕವಾಗಿ ಮರಣ ಹೊಂದಿದರೆ ₹10,000 ಪರಿಹಾರವನ್ನ ಮಾಲೀಕರಿಗೆ ನೀಡುತ್ತಾರೆ. ಈಗ ಅದಕ್ಕೆ ಕೆಲವೊಂದಿಷ್ಟು ಅರ್ಹತೆಗಳು ಸರ್ಕಾರದ ಕಡೆಯಿಂದ ವಿಧಿಸಲಾಗಿದೆ ಹಾಗಾಗಿ ಅರ್ಹತೆಗಳು ಯಾವ್ಯಾವು ಎಂದು ನಾವು ತಿಳಿದುಕೊಳ್ಳೋಣ ಅದು ಏನಪ್ಪ ಅಂದ್ರೆ ಮರಣಿಸಿದ ಕುರಿ ಮೇಕೆಗಳ ಶವ ಪರೀಕ್ಷೆಗೆ ಮೊದಲು ಮತ್ತು ಶವಪರೀಕ್ಷೆ ನಂತರದ ಭಾವಚಿತ್ರಗಳಲ್ಲಿ ಫಲಾನುಭವಿ ಮತ್ತು ಶವ ಪರೀಕ್ಷೆ ನಡೆಸಿದ ಪಶುವೈದ್ಯರು ಇರುವ ಜಿ.ಪಿ.ಆರ್.ಎಸ್ ಭಾವಚಿತ್ರಗಳನ್ನು ತೆಗೆದು ಶವ ಪರೀಕ್ಷೆ ನಡೆಸಿದ ಪಶುವೈದ್ಯರು ಧೃಢೀಕರಿಸುವುದು.

ಮರಣಿಸಿದ ಕುರಿ ಮೇಕೆಗಳ ಭಾವಚಿತ್ರಗಳನ್ನು ಸಂಬಂಧಪಟ್ಟ ಪಶುವೈದ್ಯರು, ಸಹಾಯಕ ನಿರ್ದೇಶಕರು ಪರಿಶೀಲಿಸಿ ಸಲ್ಲಿಸುವುದು ಹಾಗೂ ಮರಣಿಸಿದ ಕುರಿ ಮೇಕೆಗಳ ಭಾವಚಿತ್ರಗಳಿಗೆ ಸಂಬಂಧಿಸಿದಂತೆ ಶವ ಪರೀಕ್ಷೆ ನಡೆಸಿದ ಪಶುವೈದ್ಯರೇ ವೈಯಕ್ತಿಕ ಜವಾಬ್ದಾರರಾಗಿರುತ್ತಾರೆ. ಮರಣೋತ್ತರ ವರದಿಯಲ್ಲಿ ಫಲಾನುಭವಿಯ ಪೂರ್ಣ ವಿಳಾಸ, ಕುರಿ ಮೇಕೆಗಳು ಮರಣಿಸಿದ ದಿನಾಂಕ, ಶವ ಪರೀಕ್ಷೆ ದಿನಾಂಕ, ಕುರಿ ಮೇಕೆ ವಯಸ್ಸು, ಪರಿಹಾರ ವ್ಯಾಪ್ತಿಗೆ ಒಳಪಡುವ ಪ್ರಕರಣಗಳಲ್ಲಿ ದುರಣಿಸಿದ್ದಕ್ಕೆ ಸೂಕ್ತ ಕಾರಣಗಳನ್ನು ಸ್ಪಷ್ಟವಾಗಿ ನಮೂದಿಸುವುದು. ಮರಣೋತ್ತರ ವರದಿ, ಫೋಟೋಗಳು, ಫಲಾನುಭವಿ ಅರ್ಜಿ, ಆಧಾರ್ ಲಿಂಕ್‌ಡ್ ಬ್ಯಾಂಕ್ ಖಾತೆ ಮತ್ತು ಮುಂಗಡ ಹಣ ಸಂದಾಯ ರಶೀದಿಯಲ್ಲಿ ಫಲಾನುಭವಿಗಳ ಸಹಿ, ಪೂರ್ಣ ವಿಳಾಸ ಹಾಗೂ ಅಗತ್ಯ ದಾಖಲಾತೆಗಳೊಂದಿಗೆ ತಪ್ಪದೇ ವೋಚರ್‌ಗಳನ್ನು ದೃಢೀಕರಿಸಿ ನಿಗಮದ ಜಿಲ್ಲಾ ಅನುಷ್ಠಾನಾಧಿಕಾರಿಗಳಿಗೆ ಸಲ್ಲಿಸುವುದು. ಇನ್ನು ಹೆಚ್ಚಿನ ಮಾಹಿತಿಗಾಗಿ ನಿಮ್ಮ ಸಮೀಪ ಇರುವಂಥ ಪಶು ಆಸ್ಪತ್ರೆಗೆ ಒಮ್ಮೆ ಭೇಟಿ ನೀಡಿ

https://youtu.be/N84U7GZcGu0

Leave a Reply

Your email address will not be published. Required fields are marked *