ಕೃಷಿಯಲ್ಲಿ ಡ್ರ್ಯಾಗನ್ ಹಣ್ಣಿನ ಕೃಷಿ ಮಾಡುವುದರಿಂದ ಹೆಚ್ಚಿನ ಲಾಭ ಗಳಿಸಬಹುದು. ಹಾಗಾದರೆ ಡ್ರ್ಯಾಗನ್ ಹಣ್ಣಿನ ಕೃಷಿಯನ್ನು ಹೇಗೆ ಮಾಡುವುದು, ಅದರಿಂದ ಎಷ್ಟು ಲಾಭ ಬರುತ್ತದೆ ಮುಂತಾದ ಮಾಹಿತಿಯನ್ನು ಈ ಲೇಖನದಲ್ಲಿ ನೋಡೋಣ. ಹಾವೇರಿ ಜಿಲ್ಲೆಯ ಬಸಾಪುರ ಎಂಬ ಗ್ರಾಮದಲ್ಲಿ ಯಲ್ಲಪ್ಪ ಎಂಬ ರೈತ ತನ್ನ ಎರಡು ಎಕರೆ ಜಮೀನಿನಲ್ಲಿ 10 ಗುಂಟೆ ಜಾಗದಲ್ಲಿ ಮಗನ ಸಲಹೆಯಿಂದ ಡ್ರ್ಯಾಗನ್ ಬೆಳೆದಿದ್ದಾರೆ. ಅವರು ಕೃಷಿ ಅಧಿಕಾರಿಗಳಿಂದ ಸಲಹೆ ಪಡೆದು ಕಾಗವಾಡದಲ್ಲಿ ಬೆಳೆದ ಡ್ರ್ಯಾಗನ್ ಬೆಳೆಯನ್ನು ನೋಡಿ ಯಲ್ಲಪ್ಪ ಅವರಿಗೆ ಖುಷಿಯಾಗಿ ಅಲ್ಲಿಂದ ಸಸಿಗಳನ್ನು ತಂದು ತಮ್ಮ ಜಮೀನಿನಲ್ಲಿ ಬೆಳೆಸಿದರು.

ಅವರು 200 ಕಲ್ಲಿನ ಕಂಭಗಳನ್ನು ನಿಲ್ಲಿಸಿ ಒಂದು ಕಂಭಕ್ಕೆ ನಾಲ್ಕು ಸಸಿಗಳನ್ನು ಬೆಳೆಸಿದರು. ಮಣ್ಣನ್ನು ಕೆದರಿ ತಿಪ್ಪೆ ಗೊಬ್ಬರ ಹಾಕಿ ಸಸಿ ನೆಡಬೇಕು. ನಂತರ ಬೆಳವಣಿಗೆ ಹೊಂದುತ್ತಿದ್ದಂತೆ ಹುರಿಯಿಂದ ಕಂಭಕ್ಕೆ ಕಟ್ಟಬೇಕು ಮೇಲೆ ಒಂದು ಟೈಯರ್ ಹಾಕಿ ಕೊಡೆ ಆಕಾರದಲ್ಲಿ ಟೈಯರ್ ಮೇಲೆ ಗಿಡ ಹೂವು ಬಿಡುತ್ತದೆ. ಅವರು ಹನಿ ನೀರಾವರಿ ಮೂಲಕ ಡ್ರ್ಯಾಗನ್ ಬೆಳೆಗೆ ನೀರನ್ನು ಹಾಯಿಸುತ್ತಿದ್ದಾರೆ ವರ್ಷಕ್ಕೊಮ್ಮೆ ಜೂನ್ ಜುಲೈ ತಿಂಗಳಿನಲ್ಲಿ ತಿಪ್ಪೆ ಗೊಬ್ಬರ ಹಾಕುತ್ತಾರೆ.

ಈ ಹಣ್ಣಿನಲ್ಲಿ ಎರಡು ರೀತಿ ಇರುತ್ತದೆ ರೆಡ್ ಮತ್ತು ವೈಟ್. ಈ ಬೆಳೆಗೆ ಹೆಚ್ಚಿನ ನೀರು ಅವಶ್ಯಕತೆಯಿಲ್ಲ ವಾರಕ್ಕೆ ಅರ್ಧ ತಾಸು ನೀರು ಸಾಕು ಅಲ್ಲದೆ ಈ ಬೆಳೆಗೆ ಸಾವಯವ ಗೊಬ್ಬರವನ್ನು ಹಾಕಿದ್ದಾರೆ. ಅವರು 10 ಗುಂಟೆ ಜಾಗದಲ್ಲಿ ಡ್ರ್ಯಾಗನ್ ಬೆಳೆಯಿಂದ 2-3 ಲಕ್ಷ ರೂಪಾಯಿ ಆದಾಯ ಗಳಿಸುತ್ತಿದ್ದಾರೆ. ಮಾರ್ಕೆಟ್ ನಲ್ಲಿ ಒಂದು ಡ್ರ್ಯಾಗನ್ ಹಣ್ಣಿಗೆ 70 ರೂಪಾಯಿ ಇದೆ. ಯಲ್ಲಪ್ಪ ಅವರು ಮಾರ್ಕೆಟ್ ಗೆ ಹಣ್ಣುಗಳನ್ನು ತೆಗೆದುಕೊಂಡು ಹೋಗುವುದಿಲ್ಲ ಖರೀದಿಸುವವರು ಯಲ್ಲಪ್ಪ ಅವರ ಜಮೀನಿಗೆ ಭೇಟಿ ನೀಡಿ ಹಣ ಕೊಟ್ಟು ಖರೀದಿಸುತ್ತಾರೆ.

ಅವರು ತಮ್ಮ ಜಮೀನಿನಲ್ಲಿ ಡ್ರ್ಯಾಗನ್ ಹಣ್ಣಿನೊಂದಿಗೆ ಬಾಳೆ, ಅಡಿಕೆ, ಮುಳಗಾಯಿ ಬೆಳೆದಿದ್ದಾರೆ. ಒಬ್ಬ ಮನುಷ್ಯನಿಂದ ಡ್ರ್ಯಾಗನ್ ಬೆಳೆಯನ್ನು ನಿರ್ವಹಣೆ ಮಾಡಬಹುದು. ಡ್ರ್ಯಾಗನ್ ಗಿಡಗಳು ಹೂ ಬಿಟ್ಟ ನಂತರ 35ರಿಂದ 40 ದಿನಗಳ ಒಳಗೆ ಹಣ್ಣು ಬಿಡುತ್ತದೆ. ಈ ಬೆಳೆಗೆ ಹೆಚ್ಚಿನ ರೋಗದ ಕಾಟ ಇರುವುದಿಲ್ಲ ಇರುವೆಗಳು ಹೂವಿಗೆ ಬರುತ್ತದೆ ಆದ್ದರಿಂದ ಎಣ್ಣೆಯನ್ನು ಸಿಂಪಡಿಸಬೇಕು. ಡ್ರ್ಯಾಗನ್ ಹಣ್ಣು ಸೇವಿಸುವುದರಿಂದ ಕ್ಯಾನ್ಸರ್, ಟಿಬಿ ರೋಗಕ್ಕೆ ರಾಮಬಾಣವಾಗಿದೆ ಅಲ್ಲದೆ ಗರ್ಭಿಣಿ ಮಹಿಳೆಯರಿಗೆ ಈ ಹಣ್ಣು ಒಳ್ಳೆಯದು. ಡ್ರ್ಯಾಗನ್ ಹಣ್ಣು ಕಟ್ ಮಾಡಿದ ನಂತರ ಆ ಗರಿಯಲ್ಲಿ ಇರುವ ಫಲವತ್ತಾದ ಸಸಿಗಳನ್ನು ಕಟ್ ಮಾಡಿ ಒಂದು ಕೆಜಿ ಪ್ಯಾಕೆಟ್ ನಲ್ಲಿ ತಿಪ್ಪೆ ಗೊಬ್ಬರ ಮತ್ತು ಮಣ್ಣನ್ನು ಹಾಕಿ ಸಸಿಯನ್ನು ಇಟ್ಟು ನೀರು ಹಾಕಿ ಹಾಗೆಯೇ ಇಡಬೇಕು ಒಂದು ತಿಂಗಳ ನಂತರ ಚಿಗುರು ಬರುತ್ತದೆ ಅದನ್ನು ರೈತರು ಬೆಳೆಸಬಹುದಾಗಿದೆ. ಈ ಸಸಿಗಳನ್ನು ನವೆಂಬರ್ ತಿಂಗಳಿನಿಂದ ಜನವರಿ ತಿಂಗಳಿನವರೆಗೆ ನೆಡಬಹುದು, ಒಂದು ವರೆ ವರ್ಷಕ್ಕೆ ಫಲ ಕೊಡುತ್ತದೆ.

ಮಳೆ ಬಿದ್ದರೆ ಇದು ಹೂವು ಬಿಡುತ್ತದೆ. ಈ ಬೆಳೆ ಒಮ್ಮೆ ನಾಟಿ ಮಾಡಿದರೆ 30 ವರ್ಷ ಫಲ ಕೊಡುತ್ತದೆ. ರಾಸಾಯನಿಕ ಗೊಬ್ಬರ ಬಳಕೆಯಿಂದ ಭೂಮಿಯ ಫಲವತ್ತತೆ ನಾಶವಾಗುತ್ತದೆ ಎಂಬುದು ಯಲ್ಲಪ್ಪ ಅವರ ಅಭಿಪ್ರಾಯವಾಗಿದೆ. ಯಲ್ಲಪ್ಪ ಅವರು ಡ್ರ್ಯಾಗನ್ ಬೆಳೆ ಬೆಳೆಯಲು ಹೆಚ್ಚಿನ ಬಂಡವಾಳ ಬೇಕು ಆದರೆ ನಂತರ ಉತ್ತಮ ಆದಾಯ ಪಡೆಯಬಹುದು ಎಂದು ಹೇಳಿದರು ಅಲ್ಲದೆ ಅವರು ಮೊದಲಿನಿಂದ ಬೆಳೆಯುತ್ತಿರುವ ಬೆಳೆಗಳನ್ನು ಬೆಳೆದು ಲಾಸ್ ಮಾಡಿಕೊಳ್ಳುವ ಬದಲು ಜಮೀನಿನಲ್ಲಿ ಹೊಸ ಬೆಳೆಗಳನ್ನು ಬೆಳೆಯುವ ಮೂಲಕ ಆದಾಯ ಗಳಿಸಬಹುದು ಎಂದು ರೈತರಿಗೆ ಸಲಹೆ ನೀಡಿದ್ದಾರೆ. ನಾವು ಬೆವರ ಹನಿ ಹರಿಸಿದರೆ ಭೂಮಿ ತಾಯಿ ನಮ್ಮ ಕೈ ಹಿಡಿಯುತ್ತಾಳೆ. ಸರ್ಕಾರದ ಸಹಾಯಧನ ನಂಬಿಕೊಂಡು ಕೂರುವುದಕ್ಕಿಂತ, ನೌಕರಿ ಹಿಂದೆ ಹೋಗುವ ಬದಲು ಯುವಕರು ಇಂತಹ ಹೊಸ ಹೊಸ ವ್ಯವಸಾಯವನ್ನು ಮಾಡುವುದರಿಂದ ಆದಾಯದ ಜೊತೆಗೆ ತೃಪ್ತಿಯು ಸಿಗುತ್ತದೆ. ಈ ಮಾಹಿತಿಯನ್ನು ಎಲ್ಲ ರೈತರಿಗೂ ತಿಳಿಸಿ ಡ್ರ್ಯಾಗನ್ ಹಣ್ಣು ಆರೋಗ್ಯಕರ ಹಣ್ಣಾಗಿದ್ದು ಅದನ್ನು ಬೆಳೆಯುವುದರಿಂದ ಆರ್ಥಿಕವಾಗಿ ಲಾಭ ಗಳಿಸಬಹುದು.

ಸೂಚನೆ: ನಾವು ಹಾಕುವ ಎಲ್ಲ ಮಾಹಿತಿಗಳು ನಮ್ಮ ಸ್ವಂತ ಅನುಭವದ ಮತ್ತು ನಮ್ಮ ಅನಿಸಿಕೆ ಅಭಿಪ್ರಾಯಗಳಲ್ಲ ಕೇವಲ ಸಂಗ್ರಹದ ಮಾಹಿತಿಗಳು ಮಾತ್ರ ಯಾವುದೇ ಭಿನ್ನಾಭಿಪ್ರಾಯಗಳ ವಿಚಾರಗಳಿಗೆ ನಾವು ಜವಾಬ್ದರರಲ್ಲ.

Leave a Reply

Your email address will not be published. Required fields are marked *