ನಾವು ಒಂದೇ ಕಡೆ ಕುಳಿತುಕೊಂಡು ನಿರಂತರವಾಗಿ ಕೆಲಸ ಮಾಡುವುದರಿಂದ ತಲೆ ನೋವು, ಬೆನ್ನು ನೋವು, ಕುತ್ತಿಗೆ ನೋವು, ತಲೆಯಲ್ಲಿ ಕೆಟ್ಟ ನೀರು ಸಂಗ್ರಹವಾಗುವುದು ಈ ರೀತಿಯ ಸಮಸ್ಯೆಗಳು ಏರ್ಪಡುತ್ತದೆ. ಈ ಸಮಸ್ಯೆಗಳನ್ನು ನಿವಾರಣೆ ಮಾಡಬೇಕು ಅಂತ ಮಾತ್ರೆ, ಇಂಜೆಕ್ಷನ್ ಗಳನ್ನು ತೆಗೆದುಕೊಳ್ಳುವ ಬದಲು ಮನೆಯಲ್ಲಿಯೇ ಸುಲಭವಾಗಿ ಈ ಒಂದು ತಂತ್ರವನ್ನು ಮಾಡಿದರೆ ಎಲ್ಲಾ ನೋವಿನಿಂದ ಉಪಶಮನ

ಎಂಬುದು ತಿಳಿಯುತ್ತದೆ. ಇದಕ್ಕೆ ಬೇಕಾಗಿರುವುದು ಕೇವಲ ಎರಡೇ ಪದಾರ್ಥಗಳು ಒಂದು ಹಳೆಯ ಬಟ್ಟೆ ಹಾಗೂ ಇನ್ನೊಂದು ರೊಟ್ಟಿ ಕಲ್ಲು. ಈ ಎರಡು ಪದಾರ್ಥಗಳನ್ನು ಬಳಸಿಕೊಂಡು ಯಾವ ರೀತಿಯಾಗಿ ನೀವು ನಿಮ್ಮ ನೋವನ್ನು ಉಪಶಮನ ಮಾಡಿಕೊಳ್ಳಬಹುದು ಎಂಬುದನ್ನು ಎಂದು ನಿಮಗೆ ಸಂಕ್ಷಿಪ್ತವಾಗಿ ತಿಳಿಸುತ್ತೇವೆ. ಮೊದಲಿಗೆ ಗ್ಯಾಸ್ ಅನ್ನು ಆನ್ ಮಾಡಿ ಅದರ ಮೇಲೆ ರೊಟ್ಟಿ ಕಲ್ಲನ್ನು ಇಟ್ಟು ಹತ್ತು ನಿಮಿಷಗಳ ಕಾಲ.

ಹೈ ಫ್ಲೇಮ್ ನಲ್ಲಿ ಇದನ್ನು ಚೆನ್ನಾಗಿ ಕಾಯಿಸಿ ಕೊಳ್ಳಬೇಕು. ತದನಂತರ ಮನೆಯಲ್ಲಿ ಯಾವುದಾದರೂ ಹಳೆಯದಾದಂತಹ ಗಟ್ಟಿಯಾದ ಕಾಟನ್ ಬಟ್ಟೆ ಟರ್ಕಿ ಟವಲ್ ತೆಗೆದುಕೊಂಡು ಈ ಒಂದು ದೋಸೆ ಕಾವಲಿಯ ಮೇಲೆ ಇಡಬೇಕು. ನಂತರ ಇದರ ಶಾಖವನ್ನು ನಿಮಗೆ ಯಾವ ಭಾಗದಲ್ಲಿ ನೋವು ಇರುತ್ತದೆ ಆ ಭಾಗದಲ್ಲಿ ಐದರಿಂದ ಹತ್ತು ನಿಮಿಷಗಳ ಕಾಲ ಇದರ ಶಾಖವನ್ನು ನೀಡಬೇಕು.

ಹೀಗೆ ಮಾಡುವುದರಿಂದ ನೋವಿನಿಂದ ಉಪಶಮನ ಎಂಬುದು ದೊರೆಯುತ್ತದೆ. ವಾರದಲ್ಲಿ ಮೂರು ಬಾರಿ ಈ ರೀತಿ ನೀವು ಮಾಡುತ್ತಾ ಬಂದರೆ ಇಂತಹ ನೋವುಗಳಿಂದ ನೀವು ಪರಿಹಾರವನ್ನು ಪಡೆಯಬಹುದಾಗಿದೆ‌. ಇದರ ಜೊತೆಗೆ ತಲೆಯಲ್ಲಿ ಕೆಟ್ಟ ನೀರು ಸಂಗ್ರಹವಾಗಿದ್ದರೆ ಈ ರೀತಿ ಶಾಖ ನೀಡುವುದರಿಂದ ಆ ಕೆಟ್ಟ ನೀರು ಕೂಡ ಆಚೆ ಬರುತ್ತದೆ‌.

ಸೂಚನೆ: ನಾವು ಹಾಕುವ ಎಲ್ಲ ಮಾಹಿತಿಗಳು ನಮ್ಮ ಸ್ವಂತ ಅನುಭವದ ಮತ್ತು ನಮ್ಮ ಅನಿಸಿಕೆ ಅಭಿಪ್ರಾಯಗಳಲ್ಲ ಕೇವಲ ಸಂಗ್ರಹದ ಮಾಹಿತಿಗಳು ಮಾತ್ರ ಯಾವುದೇ ಭಿನ್ನಾಭಿಪ್ರಾಯಗಳ ವಿಚಾರಗಳಿಗೆ ನಾವು ಜವಾಬ್ದರರಲ್ಲ.

Leave a Reply

Your email address will not be published. Required fields are marked *