ಕಪ್ಪು ದ್ರಾಕ್ಷಿ ವೈನ್ ತಯಾರಿಕೆಗೆ ಮಾತ್ರ ಸೀಮಿತವಲ್ಲ, ಹಲವು ಆರೋಗ್ಯ ಸಮಸ್ಯೆಗಳ ನಿವಾರಣೆಗೆ ಉತ್ತಮ. ರಕ್ತದಲ್ಲಿನ ಕೊಬ್ಬಿನ ಅಂಶವನ್ನು ಕಡಿಮೆಗೊಳಿಸಿ ಗ್ಲೂಕೋಸ್ ಮತ್ತು ಇನ್ಸುಲಿನ್ ಅಂಶವನ್ನು ನಿಯಂತ್ರಿಸುತ್ತದೆ.
100 ಗ್ರಾಂ ದ್ರಾಕ್ಷಿಯಲ್ಲಿನ ಅಂಶಗಳು, 104 ಕ್ಯಾಲೊರಿ, 1.09 ಗ್ರಾಂ ಪ್ರೊಟೀನ್, 0.24 ಗ್ರಾಂ ಕೊಬ್ಬು, 1.4 ಗ್ರಾಂ ನಾರಿನಂಶ, 4.8 ಮಿ.ಗ್ರಾಂ ವಿಟಮಿನ್ ಸಿ, 10 ಮೈಕ್ರೊ ಗ್ರಾಂ ವಿಟಮಿನ್ ಎ,288 ಮಿಲಿ ಗ್ರಾಂ ಪೊಟಾಷಿಯಂ, 0.54 ಮಿಲಿ ಗ್ರಾಂ ಕಬ್ಬಿಣಾಂಶ
100 ಗ್ರಾಂ ದ್ರಾಕ್ಷಿ ಸೇವಿಸುವುದರಿಂದ ಆಗುವ ಲಾಭಗಳು: ಚರ್ಮಕ್ಕೆ ಸುಕ್ಕು ಬರುವುದನ್ನೂ ತಡೆಗಟ್ಟುತ್ತದೆ. ಕಪ್ಪು ದ್ರಾಕ್ಷಿಯಿಂದ ಹೊಟ್ಟೆಯ ಬೊಜ್ಜನ್ನು ಸುಲಭವಾಗಿ ಕರಗಿಸಬಹುದು. ಇದರಲ್ಲಿ ಬಿ ಕಾಂಪ್ಲೆಕ್ಸ್, ತಾಮ್ರಾಂಶ, ಕಬ್ಬಿಣಾಂಶ, ಸೆಲೆನಿಯಂ ಅಂಶ ಹೆಚ್ಚಿಗೆ ಇದ್ದು ರೋಗ ನಿರೋಧಕ ಶಕ್ತಿ ಹೆಚ್ಚಿಸುತ್ತದೆ. ಕಪ್ಪುದ್ರಾಕ್ಷಿ ಮೂತ್ರ ಸಂಬಂಧಿ ಸೋಂಕುಗಳನ್ನು ತಡೆಗಟ್ಟಿ, ಮೂತ್ರ ಸೋಂಕನ್ನು ಉಂಟು ಮಾಡುವ ಬ್ಯಾಕ್ಟೀರಿಯಾ ವಿರುದ್ಧ ಹೋರಾಡುತ್ತದೆ.
ಒಂದು ಲೋಟ ಕಪ್ಪುದ್ರಾಕ್ಷಿಯ ರಸಕ್ಕೆ ಒಂದು ಚಮಚ ಜೇನುತುಪ್ಪ ಸೇವಿಸುತ್ತಾ ಬಂದರೆ ರಕ್ತ ಹೆಚ್ಚಾಗುತ್ತದೆ. ಇದರಲ್ಲಿನ ನೀಲಿ ಅಂಶ ಬ್ಯಾಕ್ಟೀರಿಯಾಗಳ ಜೊತೆ ಹೋರಾಡುತ್ತದೆ. ಈ ದ್ರಾಕ್ಷಿಯಲ್ಲಿನ ಮ್ಯಾಲಿಕ್ ಆಸಿಡ್ ಹಲ್ಲುಗಳ ಬಣ್ಣ ಮಾಸುವುದನ್ನು ನೈಸರ್ಗಿಕವಾಗಿ ತಡೆಯುತ್ತದೆ. ಇದರ ಬೀಜದ ಸತ್ವವು ಕ್ಯಾನ್ಸರ್ ಉಂಟು ಮಾಡುವ ತಲೆ ಮತ್ತು ಕುತ್ತಿಗೆ ಎಲುಬಿನ ಕಾರ್ಸಿನೋಮಾ ಕೋಶಗಳಿಂದ ಆರೋಗ್ಯವಂತ ಕೋಶಗಳಿಗೆ ಹಾನಿಯಾಗದಂತೆ ತಡೆಗಟ್ಟುತ್ತವೆ.