WhatsApp Group Join Now

ಇನ್ನೊಬ್ಬ ಮಹಿಳೆಗೆ ಬರೋಬ್ಬರಿ 190 ಕೋಟಿ ಯ ಲಾಟರಿ ಹೊಡೆಯಿತು. ಆಕೆಯ ಸಂತೋಷಕ್ಕೆ ಮಿತಿಯೇ ಇರಲಿಲ್ಲ ಇನ್ನೇನು ನಾನು ದೊಡ್ಡ ಶ್ರೀಮಂತಿ ಆಗಿಯೇ ಬಿಟ್ಟೆ ಅನ್ನುವಷ್ಟರಲ್ಲಿ ಆಕೆ ಮಾಡಿದ ಒಂದೇ ಒಂದು ಚಿಕ್ಕ ತಪ್ಪು ನೂರ ತೊಂಬತ್ತು ಕೋಟಿ ಹಣ ಆಕೆಯಿಂದ ದೂರ ಸರಿಯುವಂತೆ ಆಯ್ತು. ಆಗ ಆ ಮಹಿಳೆ ಮಾಡಿದ್ದೇನು ಗೊತ್ತಾ. ಅಮೆರಿಕದ ಕ್ಯಾಲಿಫೋರ್ನಿಯಾ ಗೆ ಸೇರಿದ ಸಾಮಾನ್ಯ ಮಹಿಳೆ 26 ಮಿಲಿಯನ್ ಡಾಲರ್ ಬಹುಮಾನದ ಮೊತ್ತವನ್ನು ಹೊಂದಿದ್ದ ಅಂದರೆ 190 ಕೋಟಿ ಬಹುಮಾನ ಹೊಂದಿದ್ದ ಲಾಟರಿ ಟಿಕೆಟ್ ಅನ್ನು ಖರೀದಿ ಮಾಡಿದರು. ಹಾಗೆ ಆ ಲಾಟರಿ ಟಿಕೆಟ್ ಅನ್ನು ತನ್ನ ಡೈರಿಯಲ್ಲಿ ಬರೆದುಕೊಂಡಳು. ಹಾಗೆ ಜೋಪಾನವಾಗಿ ಲ್ಯಾಟರಿ ಟಿಕೆಟ್ ಅನ್ನು ತನ್ನ ಪ್ಯಾಂಟ್ ಜೇಬಿನಲ್ಲಿ ಇಟ್ಟುಕೊಂಡು ಮನೆಗೆ ಹೋದಳು. ಕೆಲವು ದಿನಗಳ ನಂತರ ಪ್ಯಾಂಟ್ ಜೇಬಿನಲ್ಲಿ ಲ್ಯಾಟರಿ ಟಿಕೆಟ್ ಅನ್ನು ಇಟ್ಟಿರುವುದನ್ನು ಮರೆತ ಆಕೆ ಪ್ಯಾಂಟನ್ನು ವಾಷಿಂಗ್ ಮಿಷನ್ ಗೆ ಹಾಕಿ ಚೆನ್ನಾಗಿ ವಾಶ್ ಮಾಡಿದ್ದಾರೆ.

ಕೆಲವು ವಾರ ಕಳೆದ ಮೇಲೆ ಲಾಟರಿ ರಿಸಲ್ಟ್ ಅನ್ನು ಪೇಪರಲ್ಲಿ ನೋಡಿದ ಮಹಿಳೆಗೆ ಎಲ್ಲಿಲ್ಲದ ಸಂತೋಷ. ಆಕೆ ಖರೀದಿಸಿದ ಲಾಟರಿ ಟಿಕೆಟ್ಗೆ ನೂರ ತೊಂಬತ್ತು ಕೋಟಿ ಲಾಟರಿ ಹೊಡೆದಿತ್ತು. ಆದರೆ ಲಾಟರಿ ಟಿಕೆಟ್ ಹುಡುಗಿನ ಆಕೆಗೆ ಅವಳಿಗೆ ಒಂದು ಚೂರು ಕೂಡ ಸಿಗಲಿಲ್ಲ. ಆಗ ನೇರವಾಗಿ ಲಾಟರಿ ಆಫೀಸಿಗೆ ಹೋಗಿ ಈ ನಂಬರ್ ನಾನೇ ಖರೀದಿಸಿದ್ದು ಎಂದು ಹೇಳಿ ಬರೆದುಕೊಂಡಿದ್ದ ನಂಬರ್ ತೋರಿಸಿದಳು. ಅಷ್ಟೆಲ್ಲದೆ ತಾನು ಖರೀದಿ ಮಾಡಿರುವುದಕ್ಕೆ ಸಾಕ್ಷಿಯಾಗಿ ಖರೀದಿಸಿದ ಶಾಪ್ನ ಸಿಸಿಟಿವಿ ಫೋಟೋಗಳನ್ನು ತೆಗೆದುಕೊಂಡು ಕೂಡ ಕೊಟ್ಟಳು. ಆದರೂ ಕೂಡ ಆಕೆಗೆ ಹಣ ಸಿಗಲಿಲ್ಲ ಕಾರಣ ನಿಯಮದ ಪ್ರಕಾರ ಟಿಕೆಟ್ನ ಒಂದು ತುಣುಕು ಆದರೂ ತೋರಿಸಬೇಕು. 1 2 ನಂಬರ್ ಕಾಣುವಂತೆ ಇರಬೇಕು. ಟಿಕೆಟ್ ಮಾರಾಟ ಮಾಡಿದ ಅಂಗಡಿಯವನಿಗೆ ಸುಮಾರು ಒಂದು ಕೋಟಿ ಬೋನಸ್ ಸಿಕ್ತು. ಆದರೆ ಈ ಮಹಿಲಿಗೆ ಒಂದು ನಯಾಪೈಸಿ ಕೂಡ ಸಿಗಲಿಲ್ಲ.

WhatsApp Group Join Now

Leave a Reply

Your email address will not be published. Required fields are marked *