ನಮ್ಮ ದೇಹ ಆರೋಗ್ಯವಾಗಿರಲು ನಮ್ಮ ಮೂಳೆಗಳ ಬಲವು ಕೂಡ ಬೇಕಾಗುತ್ತದೆ ಮೂಳೆಗಳು ಗಟ್ಟಿಯಾಗಿದ್ದರೆ ಮಾತ್ರ ನಾವು ಆರಾಮವಾಗಿ ಇರಬಹುದು ಆರಾಮವಾಗಿ ಚಲಿಸಬಹುದು. ಒಮ್ಮೆ ಮೂಳೆಗಳು ಬಲಿಷ್ಟವಾಗಿಲ್ಲದೆ ಹೋದರೆ ನಾವು ಅನೇಕ ಸಮಸ್ಯೆಗಳನ್ನ ಎದುರಿಸಬೇಕಾಗುತ್ತದೆ ಉದಾಹರಣೆಗೆ ಜಾಯಿಂಟ್ ಪೈನ್ ಕಾಲು ನೋವು ಮೊಣಕೈ ನೋವು ಈ ದೇಹದ ತುಂಬಾ ನೋವುಗಳು ಕಾಣಿಸಿಕೊಳ್ಳುತ್ತವೆ. ಆದ್ದರಿಂದ ನಾವು ಮೂಳೆಗಳನ್ನ ಗಟ್ಟಿಯಾಗಿಟ್ಟುಕೊಳ್ಳುವುದು ಪ್ರಮುಖವಾಗಿದೆ. ವಯಸ್ಸಾದ ಮೇಲಂತೂ ನೋವುಗಳು ಮೂಳೆ ಸವೆತದಿಂದ ನೋವುಗಳು ಸಾಮಾನ್ಯವಾಗಿ ಕಾಣಿಸಿಕೊಳ್ಳುತ್ತವೆ. ಆದರೆ ನೀವು ಇದನ್ನು ಕೂಡ ತಡೆಗಟ್ಟಬಹುದು. ಹಾಗಾದರೆ ಏನು ಮಾಡಬೇಕು ಅಂತ ತಿಳಿದುಕೊಳ್ಳೋಣ ಬನ್ನಿ.
ಮೂಳೆಗಳು ಗಟ್ಟಿಯಾಗಿರಲು ದೇಹಕ್ಕೆ ಅಗತ್ಯವಾದ ಕ್ಯಾಲ್ಸಿಯಂ ಬೇಕು. ಅಷ್ಟೇ ಅಲ್ಲದೆ ಇದರ ಹೊರತಾಗಿ ಅನೇಕ ಜೀವಸತ್ವಗಳು ಬೇಕಾಗುತ್ತವೆ ವಿಟಮಿನ್ ಡಿ ಈ ರೀತಿಯ ಜೀವಸತ್ವಗಳು ಕೆಲವು ಬಗೆ ವಿಟಮಿನ್ ಗಳು ಪೋಟಾಸಿಯಂ ಗಳು ಮತ್ತೆ ಮೆಗ್ನಿಷಿಯಂಗಳು ಇದೆಲ್ಲ ರೀತಿ ಆ ಪೋಷಕಾಂಶಗಳು ದೇಹಕ್ಕೆ ಬೇಕಾಗುತ್ತವೆ. ಇದೆಲ್ಲ ಬೇಕು ಅಂತಂದ್ರೆ ನಾವು ದಿನನಿತ್ಯ ಈ ಪೋಷಕಾಂಶ ಯುಕ್ತ ಆಹಾರವನ್ನು ಸೇವಿಸಬೇಕು ಆಹಾರದ ಕಡೆ ಗಮನಹರಿಸಬೇಕು.
ಹಾಗಾದ್ರೆ ನಮ್ಮ ಮೂಳೆಗಳನ್ನ ಗಟ್ಟಿಯಾಗಿಡಲು ಸಹಕಾರಿಯದ ಆಹಾರ ಪದಾರ್ಥಗಳ ಬಗ್ಗೆ ಪೂರ್ತಿ ಮಾಹಿತಿಯನ್ನ ತಿಳಿದುಕೊಳ್ಳೋಣ ಮೊದಲನೆಯದಾಗಿ ಸಿಹಿ ಗೆಣಸು, ಈ ಸಿಹಿ ಗೆಣಸು ಎಲ್ಲರಿಗೂ ಗೊತ್ತಿರುವಂತಹ ಒಂದು ತರಕಾರಿ. ಇದು ಮೂಳೆಗಳು ಮತ್ತು ಕೀಲುಗಳನ್ನ ಗಟ್ಟಿಯಾಗಿ ಇರಿಸುತ್ತದೆ. 30 ವರ್ಷದ ನಂತರ ದೇಹದಲ್ಲಿ ಕ್ಯಾಲ್ಸಿಯಂ ಪ್ರಮಾಣ ಕಮ್ಮಿ ಆಗುತ್ತಾ ಹೋಗುತ್ತದೆ.
ಒಂದು ವೇಳೆ ನಮ್ಮ ದೇಹದಲ್ಲಿ ಪೊಟ್ಯಾಶಿಯಂ ಮತ್ತು ಮೆಗ್ನೇಶಿಯಂ ಸಾಕಷ್ಟು ಪ್ರಮಾಣದಲ್ಲಿ ಇದ್ದರೆ ಕ್ಯಾಲ್ಸಿಯಂ ಅನ್ನು ಬಂಧಿಸಿಟ್ಟುಕೊಳ್ಳುತ್ತವೆ ಮತ್ತು ವಿಟಮಿನ್ ಡಿ ಯನ್ನ ಸಮತೋಲನದಲ್ಲಿಡುತ್ತವೆ. ಆದಷ್ಟು ನಿಮ್ಮ ಆಹಾರದಲ್ಲಿ ಸಿಹಿಗೆಣಸನ್ನ ಸೇವಿಸಿ. ಇನ್ನು ದ್ರಾಕ್ಷಿ ಹಣ್ಣು ನಿಮಗೆಲ್ಲರಿಗೂ ಗೊತ್ತಿದೆ ದ್ರಾಕ್ಷಿ ಹಣ್ಣು ಮಕ್ಕಳಿಗಂತೂ ತುಂಬಾ ಪ್ರೀತಿ ನಿಮ್ಮ ಮೂಳೆಗಳು ವಯಸ್ಸಾಗುವವರೆಗೂ ಮೂಳೆಗಳ ಆರೋಗ್ಯವನ್ನು ಸರಿಯಾಗಿ ಇಟ್ಟುಕೊಳ್ಳಲು ದ್ರಾಕ್ಷಿ ಹಣ್ಣು ಪ್ರಮುಖವಾಗಿದೆ. ಇದು ಸಿಟ್ರಸ್ ಆಮ್ಲವನ್ನು ಹೊಂದಿದೆ. ಇದರಲ್ಲಿ ವಿಟಮಿನ್ ಸಿ ಹೇರಳವಾಗಿರುವುದರಿಂದ ಮೂಳೆ ಮೂಳೆಯ ಸವಕಳಿಕೆಯನ್ನು ಕಮ್ಮಿ ಮಾಡುತ್ತದೆ.
ಇನ್ನು ಅಂಜೂರ ಹಣ್ಣು, ನಿಮ್ಮ ಮೂಳೆಗಳು ಮತ್ತು ಸಂದು ಕೀಲು ಅಂತ ಹೇಳ್ತಿವಲ್ವ ಗಟ್ಟಿ ಆಗಿರಬೇಕು ಕಬ್ಬಿಣದಂತೆ ಗಟ್ಟಿ ಆಗಿರಬೇಕು ಅಂತ ಅಂದ್ರೆ ನಿಮ್ಮ ಆಹಾರದಲ್ಲಿ ದಿನನಿತ್ಯ ಆದಷ್ಟು ಅಂಜೂರದ ಹಣ್ಣುಗಳನ್ನ ಸೇವಿಸುತ್ತಾ ಬನ್ನಿ ಇದರಲ್ಲಿ ಪೊಟ್ಯಾಶಿಯಂ ಮೆಗ್ನೀಷಿಯಂ ಹೇರಳವಾಗಿರುವುದರಿಂದ ನಮ್ಮ ಮೂಳೆಗಳನ್ನ ಬಲಪಡಿಸಲು ಸಹಾಯಮಾಡುತ್ತದೆ.
ಇನ್ನು ಊಟದ ಜೊತೆ ಸಾಕಷ್ಟು ಹಸಿರು ಸೊಪ್ಪನ್ನ ಸೇವಿಸಿ. ಇದರಿಂದ ದೇಹಕ್ಕೆ ಬೇಕಾದಂತಹ ಪೋಷಕಾಂಶಗಳು ಸಿಗುತ್ತವೆ ಅಷ್ಟೇ ಅಲ್ಲದೆ ರಕ್ತವನ್ನು ಕೂಡ ಇದು ಶುದ್ದಿಗೊಳಿಸುತ್ತವೆ. ದಿನನಿತ್ಯ ಹಸಿರು ಸೊಪ್ಪು ಹಸಿರು ತರಕಾರಿ ಹಣ್ಣುಗಳನ್ನು ತಿನ್ನುವುದರಿಂದ ಮೂಳೆಯು ನೀವು ಇರುವವರೆಗೂ ಕೂಡ ಗಟ್ಟಿಯಾಗಿರುತ್ತದೆ ಯಾವುದೇ ರೀತಿಯ ಸಮಸ್ಯೆ ಬರುವುದಿಲ್ಲ ಯಾವ ನೋವು ಕೂಡ ನಿಮ್ಮನ್ನು ಕಾಡುವುದಿಲ್ಲ. ನೀವು ಈ ರೀತಿ ಅಭ್ಯಾಸಗಳನ್ನು ರೂಡಿಸಿಕೊಳ್ಳಬೇಕಷ್ಟೆ ನಮ್ಮ ಮಾಹಿತಿ ಇಷ್ಟವಾದಲ್ಲಿ ಲೈಕ್ ಮಾಡಿ ಹಾಗೂ ಶೇರ್ ಮಾಡಿ.