ತಾಳ್ಮೆ ಒಂದಿದ್ದರೆ ಸಾಕು ಜಗತ್ತನ್ನೇ ಗೆಲ್ಲಬಹುದು ಎನ್ನುತ್ತಾರೆ. ತಾಳ್ಮೆ ಹಾಗೂ ಕಠಿಣ ಪರಿಶ್ರಮ, ಓದಿನಲ್ಲಿ ಆಸಕ್ತಿ ಹಿಡಿದಿಟ್ಟುಕೊಂಡವರು ಇನ್ನೇನೆಲ್ಲಾ ಸಾಧಿಸಬಹುದು ಎಂಬುದಕ್ಕೆ ರಾಜಸ್ತಾನ ಮೂಲದ ಪ್ರೇಮ್ ಸುಖ್ ದೇಲು ಎಂಬುವರು ಸಾಕ್ಷಿಯಾಗಿದ್ದಾರೆ. ಸರ್ಕಾರದ ಪ್ರಥಮ ದರ್ಜೆ ಸಹಾಯ, ದ್ವಿತೀಯ ದರ್ಜೆ ಸಹಾಯಕ ಹುದ್ದೆಗಳನ್ನು ಪಡೆಯಬೇಕು ಅಂದ್ರೇನೆ ಎರಡು ಮೂರು ವರ್ಷ ಓದಲು ಸುಸ್ತಾಗುವ ಆಕಾಂಕ್ಷಿಗಳು ಇದ್ದಾರೆ. ಸರ್ಕಾರ ಸರಿಯಾದ ಸಮಯಕ್ಕೆ ನೋಟಿಫಿಕೇಶನ್ ಬಿಡುಗಡೆ ಮಾಡಲ್ಲ. ಇತ್ತ ಆರ್ಥಿಕ ಪರಿಸ್ಥಿತಿ ಹಾಗೂ ವಯಸ್ಸು ಮೀರುವ ಎಲ್ಲ ಸಮಸ್ಯೆಗಳಿಂದ ಅಭ್ಯರ್ಥಿ ಹುದ್ದೆ ಪಡೆಯುವ ತನಕ ಓದಲು ಆಗೋದಿಲ್ಲ ಎಂಬೆಲ್ಲ ಸಮಸ್ಯೆಗಳು ಹೇಳುವವರು ಇದ್ದಾರೆ.
ಆದರೆ ನಾವು ಇಂದು ತಿಆಸುತ್ತಿರುವ ಐಪಿಎಸ್ ಅಧಿಕಾರಿಯೊಬ್ಬರು ಮೊದಲು ಪಡೆದಿದ್ದು ದ್ವಿತೀಯ ಪಿಯುಸಿ ಆಧಾರಿತ ವಿಲೇಜ್ ಅಕೌಂಟಂಟ್ ಹುದ್ದೆ. ಕೊನೆಗೆ ಅವರು ತಮ್ಮ ಗುರಿ ಮುಟ್ಟದ್ದು ಐಪಿಎಸ್ ಆಗುವವರೆಗೆ. 6 ವರ್ಷದಲ್ಲಿ ಒಟ್ಟು 12 ಸರ್ಕಾರಿ ಹುದ್ದೆಗಳನ್ನು ಗಿಟ್ಟಿಸಿದ್ದ ಭೂಪ ಇವರು. ಪ್ರೇಮ್ ಸುಖ್ ದೇಲು, ರಾಜಸ್ತಾನ ರಾಜ್ಯದ ಬಿಕನೆರ್ ಮೂಲದವರು. ಒಂದು ರೈತ ಕುಟುಂಬದಲ್ಲಿ ಇವರು ಜನಿಸಿದರು. ಮೊದಲಿಗೆ ತಮ್ಮ ಕಠಿಣ ಶ್ರಮ ದಿಂದ ಪಾರಿ ಆದರು. ಪಾರಿ ಎಂದರೆ ಗ್ರಾಮ ಲೆಕ್ಕಿಗ ಹುದ್ದೆ. ಅವರು ಆ ಹುದ್ದೆಗೆ ತೃಪ್ತಿಪಟ್ಟುಕೊಂಡವರಲ್ಲ. ಅವರ ಕನಸು ಯುಪಿಎಸ್ಸಿ ಪರೀಕ್ಷೆ ಪಾಸ್ ಮಾಡುವುದಾಗಿತ್ತು. ಹಾಗೂ ಐಪಿಎಸ್ ಆಗುವುದಾಗಿತ್ತು.
ಪ್ರೇಮ್ ಸುಖ್ ತಂದೆ ಒಬ್ಬ ರೈತರು. ಅವರ ಕುಟುಂಬದ ಆರ್ಥಿಕ ಪರಿಸ್ಥಿತಿ ಅಷ್ಟೊಂದು ಸೌಂಡ್ ಮಾಡುವ ಆಗಿರಲಿಲ್ಲ. ಆದ್ದರಿಂದ ಅವರ ತಂದೆ ವ್ಯವಸಾಯದ ಜತೆಗೆ ಒಂಟಿ ಕಾರ್ಟ್ ಅನ್ನು ನಡೆಸುತ್ತಿದ್ದರು. ಒಂದು ಸ್ಥಳದಿಂದ ಇನ್ನೊಂದು ಸ್ಥಳಕ್ಕೆ ಒಂಟೆ ಮೇಲೆ ಜನರನ್ನು ಸಾಗುತ್ತಿದ್ದರು. ಇದನ್ನೆಲ್ಲಾ ಗಮನಿಸುತ್ತಿದ್ದ ಪ್ರೇಮ್ ಆರ್ಥಿಕ ಪರಿಸ್ಥಿತಿ ಇಂದ ತಮ್ಮ ಕುಟುಂಬವನ್ನು ಮೇಲೆತ್ತುವ ಜತೆಗೆ ಸಾಧನೆ ಮಾಡುವ ಕನಸು ಕಟ್ಟಕೊಂಡರು. ಆದ್ದರಿಂದ ಚಿಕ್ಕನಿಂದಲೇ ಓದಿ ಸಾಧನೆ ಮಾಡುವ ಕನಸು ಕಟ್ಟಕೊಂಡಿದ್ದರಂತೆ.ಪ್ರೇಮ್ ಸುಖ್ ದೇಲು 10ನೇ ತರಗತಿವರೆಗೂ ಸಹ ಸರ್ಕಾರಿ ಶಾಲೆಯಲ್ಲಿಯೇ ತಮ್ಮ ಸ್ವಂತ ಗ್ರಾಮದಲ್ಲ ಓದಿದವರು. ನಂತರದಲ್ಲಿ ಬಕನೆರ್ನ ಸರ್ಕಾರಿ ದುಂಗರ್ ಕಾಲೇಜಿನಲ್ಲಿ ಓದಿದರು.
ಸ್ನಾತಕೋತ್ತರ ಪದವಿ ಅನ್ನು ಇತಿಹಾಸ ವಿಷಯದಲ್ಲಿ ವ್ಯಾಸಂಗ ಮಾಡಿ ಗೋಲ್ಡ್ ಮೆಡಲ್ ಸಹ ಪಡೆದಿದ್ದರು. ಎಂಎ ಮುಗಿಸಿದ ವರ್ಷದಲ್ಲೇ ಯುಜಿಸಿ ಎನ್ಇಟಿ ಪಾಸ್ ಜತೆಗೆ ಜೆಆರ್ಎಫ್ ಅರ್ಹತೆ ಪಡೆದಿದ್ದರು.ಪ್ರೇಮ್ ಸುಖ್ ಹಿರಿಯ ಅಣ್ಣ ರಾಜಸ್ತಾನದಲ್ಲಿ ಕಾನ್ಸ್ಟೇಬಲ್ ಆಗಿದ್ದರು. ಇವರಿಂದಲೇ ಸ್ಪರ್ಧಾತ್ಮಕ ಪರೀಕ್ಷೆ ತೆಗೆದುಕೊಳ್ಳಲು ಸ್ಫೂರ್ತಿಗೊಂಡಿದ್ದ ಪ್ರೇಮ್ ರವರು, 2010 ರಲ್ಲಿ ಪದವಿ ಮುಗಿಸುತ್ತಿದ್ದಂತೆ ಗ್ರಾಮ ಲೆಕ್ಕಿಗ ಹುದ್ದೆಗೆ ಅರ್ಜಿ ಸಲ್ಲಿಸಿದ್ದರು. ಆ ಹುದ್ದೆ ಗಿಟ್ಟಿಸಿದ್ದರು ಸಹ. ನಂತರ ತಮ್ಮ ಸಾಮರ್ಥ್ಯ ಅರಿತ ಅವರು ಗ್ರಾಮ ಲೆಕ್ಕಿಗ ಹುದ್ದೆ ಕರ್ತವ್ಯ ನಿರ್ವಹಿಸುತ್ತಲೇ ಮಾಸ್ಟರ್ ಡಿಗ್ರಿ ಪಾಸ್ ಮಾಡಿದ್ದು, ಎನ್ಇಟಿ ಪಾಸ್ ಮಾಡಿದ್ದು.
ನಂತರದಲ್ಲಿ, ಪ್ರೇಮ್ ಸುಖ್ ರಾಜಸ್ತಾನ ಗ್ರಾಮ ಸೇವಕ್ ಪರೀಕ್ಷೆ ಬರೆದು ಎರಡನೇ ರಾಂಕ್ ಪಡೆದರಂತೆ. ನಂತರ ಅಸಿಸ್ಟಂಟ್ ಜೈಲರ್ ಪರೀಕ್ಷೆಯನ್ನು ಪಾಸ್ ಮಾಡಿದರಂತೆ. ಈ ಹುದ್ದೆಗೆ ನಿಯೋಜನೆಗೊಳ್ಳುವ ಮುಂಚಿತವಾಗಿಯೇ ರಾಜಸ್ತಾನ ಪೊಲೀಸ್ ಸಬ್ಇನ್ಸ್ಪೆಕ್ಟರ್ ಹುದ್ದೆ ಪರೀಕ್ಷೆ ಫಲಿತಾಂಶ ಪ್ರಕಟಗೊಂಡು, ಅದರಲ್ಲೂ ಇವರು ಆಯ್ಕೆಯಾಗಿದ್ದರು. ಇವುಗಳಲ್ಲದೇ `ಉಪನ್ಯಾಸಕ ಹುದ್ದೆಗೆ ಆಯ್ಕೆ ಆಗಿದ್ದರು. ನಂತರದಲ್ಲಿ ಭಾರತ ನಾಗರೀಕ ಸೇವೆಗಳ ಪರೀಕ್ಷೆಗೆ ಓದಲು ಆರಂಭಿಸಿದರಂತೆ. ಕಾಲೇಜಿನಲ್ಲಿ ಉಪನ್ಯಾಸಕ ವೃತ್ತಿ ಮಾಡುತ್ತಲೇ ಯುಪಿಎಸ್ಸಿ’ಗೆ ಓದುತ್ತಿದ್ದ ಪ್ರೇಮ್, ರಾಜಸ್ತಾನ ಪಬ್ಲಿಕ್ ಸರ್ವೀಸ್ ಕಮಿಷನ್ ಪರೀಕ್ಷೆ ಪಾಸ್ ಮಾಡಿ ತಾಹಶೀಲ್ದಾರ್ ಆಗಿ ಆಯ್ಕೆಯಾಗಿದ್ದರು.
ಆದರೂ ಸಹ ಯುಪಿಎಸ್ಸಿ’ಗೆ ಓದುವುದನ್ನು ನಿಲ್ಲಿಸಿರಲಿಲ್ಲ. ಎರಡನೇ ಪ್ರಯತ್ನದಲ್ಲಿ ಯುಪಿಎಸ್ಸಿ ಪರೀಕ್ಷೆ ಪಾಸ್ ಮಾಡಿ 170 ರಾಂಕ್ ನೊಂದಿಗೆ ಐಪಿಎಸ್ ಅಧಿಕಾರಿ ಆದರು ಪ್ರೇಮ್ ಸುಖ್ ಸಕ್ಸಸ್ ಅನ್ನೋದು ನಿಂತ ನೀರಲ್ಲ. ಅದೊಂದು ಜರ್ನಿ ಎಂದು ಭಾವಿಸಿ, ಅವರು ವಿಎ ಹುದ್ದೆಗೆ ತೃಪ್ತಿ ಪಟ್ಟುಕೊಳ್ಳದೇ ಓದಿದ್ದೇ ಅವರನ್ನು ಐಪಿಎಸ್ ಹುದ್ದೆ ವರೆಗೆ ಕರೆದುಕೊಂಡು ಹೋದಿದ್ದು. ಸರ್ಕಾರಿ ಶಾಲೆಯಲ್ಲಿ ಓದಿದ ವಿದ್ಯಾರ್ಥಿಯ ಅವರಾಗಿದ್ದು, ಅವರು ಈ ಹಂತ ತಲುಪಲು ಅವರ ತಾಳ್ಮೆ, ಪರಿಶ್ರಮ, ಓದಿನಲ್ಲಿ ಆಸಕ್ತಿ ಇರುವುದೇ ಕಾರಣವಾಗಿದೆ.