WhatsApp Group Join Now

ಹೌದು ಗ್ಯಾಸ್ಟ್ರಿಕ್ ಮತ್ತು ಎದೆ ಉರಿ ಅನ್ನೋದು ಇತ್ತೀಚಿನ ದಿನಗಳಲ್ಲಿ ಸಾಮಾನ್ಯವಾಗಿ ಕಾಡುವಂತ ಮತ್ತು ದಿನ ನಿತ್ಯ ಕಾಡುವ ಸಮಸ್ಯೆಯಾಗಿದೆ. ಆದರೆ ಈ ಸಮಸ್ಯೆಗೆ ಪದೇ ಪದೇ ಆಸ್ಪತ್ರೆಗೆ ಹೋಗಲು ಸಾಧ್ಯವಿಲ್ಲ. ಅದಕ್ಕೆ ಚಿಂತೆ ಮಾಡುವ ಅಗತ್ಯವಿಲ್ಲ ನಿಮ್ಮ ಮನೆಯಲ್ಲಿಯೇ ಈ ಸಮಸ್ಯೆಗೆ ಪರಿಹಾರವನ್ನು ಕಂಡುಕೊಳ್ಳಬಹುದಾಗಿದೆ.

ಹಾಗಾದರೆ ಈ ಸಮಸ್ಯೆ ಬರದಂತೆ ಏನು ಮಾಡಬೇಕು,ಏನು ಮಾಡಬಾರದು: ಅತಿಯಾಗಿ ಟೀ, ಕಾಫಿ, ಮಾರುಕಟ್ಟೆಯಲ್ಲಿ ಸಿಗುವ ತಂಪುಪಾನೀಯಗಳನ್ನು ಸೇವಿಸಬೇಡಿ ಕಾರಣ ಹೆಚ್ಚು ಸೇವನೆ ಮಾಡುವುದರಿಂದ ಈ ಸಮಸ್ಯೆಗಳು ಎದುರಾಗುತ್ತವೆ.

ಮಧ್ಯಪಾನ ಮತ್ತು ಧೂಮಪಾನಗಳೆರಡೂ ಎದೆಯುರಿ ಸಮಸ್ಯೆಯನ್ನು ಹೆಚ್ಚಿಸುತ್ತವೆ ಮತ್ತು ಅತಿಯಾದ ಕೊಬ್ಬಿನಂಶವಿರುವ ಪದಾರ್ಥಗಳನ್ನು ಸೇವಿಸಬೇಡಿ.

ಅತಿಯಾದ ಉಪ್ಪಿನಂಶವಿರುವ ಪದಾರ್ಥಗಳ ಸೇವನೆ ಒಳ್ಳೆಯದಲ್ಲ.ಮಸಾಲೆಯುಕ್ತ, ಎಣ್ಣೆಯಲ್ಲಿ ಕರಿದ ಆಹಾರ, ಹುರಿದ ಪದಾರ್ಥಗಳ ಸೇವನೆ ಮಾಡಬೇಡಿ.

ಈ ರೀತಿಯಾದ ಸಮಸ್ಯೆಗಳು ಬಾರದಂತೆ ಇರಲು ನಿಗದಿತ ಸಮಯಕ್ಕೆ ಸರಿಯಾಗಿ ಊಟ, ಉಪಹಾರ ಸೇವನೆ ಮಾಡಿ. ಪ್ರತಿದಿನ 8-10 ಗಂಟೆ ನಿದ್ರೆ ಮಾಡಿ. ಪ್ರತಿದಿನ 3-4 ಲೀಟರ್‌ ನೀರು ಕುಡಿಯಿರಿ.

ಅಷ್ಟೇ ಅಲ್ಲದೆ ನಾವು ತಿನ್ನುವ ಆಹಾರದಲ್ಲಿ ಹಣ್ಣು, ತರಕಾರಿ ಮತ್ತಿತರ ನಾರಿನಂಶವಿರುವ ಪದಾರ್ಥಗಳನ್ನು ಸೇವಿಸುವುದರ ಜೊತೆಗೆ ಧಾನ್ಯಗಳು ಹಾಗೂ ಬೇಳೆಕಾಳುಗಳ ಸೇವನೆಗೆ ಹೆಚ್ಚು ಮಹತ್ವ ಕೊಡುವುದರ ಮೂಲಕ ಇಂತಹ ಸಮಸ್ಯೆಗಳಿಗೆ ಹೇಳಿ ಗುಡ್ ಬಾಯ್.

WhatsApp Group Join Now

Leave a Reply

Your email address will not be published. Required fields are marked *