ಸುಗಂಧರಾಜ ಹೂವು ಇದು ಹೆಸರೆ ಸೂಚಿಸುವಂತೆ ಪರಿಮಳ ವಾಸನೆ ಬೀರುವಂತಹ ಒಂದು ಹೂವು. ಈ ಹೂವನ್ನು ರೈತರು ತಮ್ಮ ತೋಟಗಳಲ್ಲಿ ಮತ್ತು ಹೊಲಗಳಲ್ಲಿ ವಾಣಿಜ್ಯ ಬೆಳೆಯಾಗಿ ಬೆಳೆಯುತ್ತಾರೆ. ಸುಗಂಧರಾಜ ಹೂವನ್ನು ಹಾರಗಳಿಗೆ ಹೆಚ್ಚಿನದಾಗಿ ಬಳಸುತ್ತಾರೆ. ಆದರೆ ಈ ಸುಗಂಧರಾಜ ಹೂವಿನಲ್ಲಿ ಹಲವಾರು ರೋಗಗಳನ್ನು ಗುಣಪಡಿಸುವಂತಹ ವಿಶಿಷ್ಟ ಶಕ್ತಿಯನ್ನು ಹೊಂದಿದೆ.
ಸುಗಂಧರಾಜದ ಗಡ್ಡೆಯು ವಾಂತಿ ಉಂಟು ಮಾಡುತ್ತಲ್ಲದೆ ಮೂತ್ರಸ್ರಾವ ಹೆಚ್ಚಿಸುತ್ತದೆ. ಮೇಹರೋಗದಿಂದ ಬಳಲುವವರು ಗಡ್ಡೆಗಳನ್ನು ಒಣಗಿಸಿ ಪುಡಿ ಮಾಡಿ ಜೇನುತುಪ್ಪದೊಂದಿಗೆ ಬೆರೆಸಿ ಸೇವಿಸುವುದರಿಂದ ಅದನ್ನು ವಾಸಿಮಾಡಬಹುದು.
ಚಿಕ್ಕಮಕ್ಕಳಲ್ಲಿ ಮೈಮೇಲೆ ಗುಳ್ಳೆಗಳಿದ್ದಾಗ ಗದ್ದೆಯನ್ನು ಅರಿಶಿನ ಮತ್ತು ಬೆಣ್ಣೆಯೊಂದಿಗೆ ಅರೆದು ಲೇಪಿಸುವದರಿಂದ ರೋಗವು ವಾಸಿಯಾಗುತ್ತದೆ.
ಉರಿಮೂತ್ರವಿರುವಾಗ ಸುಗಂಧರಾಜ ಬೇರನ್ನು ಚೆನ್ನಾಗಿ ಕುಟ್ಟಿ ಅರೆದು ಅದರಿಂದ ಕಷಾಯ ತಯಾರಿಸಿ ಕುಡಿಯುವದರಿಂದ ಉರಿಮೂತ್ರವು ಕಮ್ಮಿಯಾಗುತ್ತದೆ. ವೀರ್ಯವೃದ್ಧಿಗೂ ಇದು ಉತ್ತಮವಾದುದು. ಸುಗಂಧರಾಜ ಬೇರಿನ ಪುಡಿಯನ್ನು ಜೇನುತುಪ್ಪದೊಂದಿಗೆ ಮಿಶ್ರಣ ಮಾಡಿ ಸೇವಿಸಬೇಕು.
ಕಿವಿ ನೋವಿನಿಂದ ಬಳಲುವವರು ಸುಗಂಧರಾಜ ಬೀಜದ ರಸ ತಯಾರಿಸಿ ಸಲ್ಪ ಬಿಸಿ ಮಾಡಿ ಕಿವಿಗೆ ಹಾಕಿಕೊಳ್ಳುವುದರಿಂದ ನೋವು ಶಮನವಾಗುತ್ತದೆ. ಸುಗಂಧರಾಜ ಬೀಜಗಳನ್ನು ಅರೆದು ಗಾಯಗಳಿಗೆ ಲೇಪಿಸುವುದರಿಂದ ಗಯಾ ವಾಸಿಯಾಗುತ್ತದೆ.
ಸುಗಂಧರಾಜ ಗದ್ದೆಯನ್ನು ಚಿಕ್ಕ ಚಿಕ್ಕ ತುಂಡು ಮಾಡಿ ಅಕ್ಕಿಗಂಜಿಯಲ್ಲಿ ಕುದಿಸಿ ಸ್ವಲ್ಪ ಕಾಳು ಮೆಣಸಿನಪುಡಿ ಬೆರಸಿ ಹಸುವಿಗೆ ಕುದಿಸಬೇಕು. ಇದರಿಂದ ಹಸು ವಿಷಭಾದೆಯಿಂದ ಪಾರಾಗುತ್ತದೆ.