ಸಾಮಾನ್ಯಾವಾಗಿ ನೆಗಡಿಯಾಗಿ,ಕೆಮ್ಮು ಉಂಟಾಗಿ ಅತಿಯಾಗಿ ಕೆಮ್ಮುತ್ತಿರುವಾಗ ಎದೆನೋವು ಕಾಣಿಸಿಕೊಳ್ಳುತ್ತದೆ. ಹೃದಯದ ಎಡ ಹಾಗೂ ಬಲಭಾಗಗಳಲ್ಲಿ ರಕ್ತ ಸಂಚಾರ ಆಗದೆ ಎದೆನೋವು ಆಗುತ್ತದೆ. ಶ್ವಾಸಕೋಶದಲ್ಲಿ ಆಮ್ಲಜನಕ ಕಡಿಮೆ ಆದಾಗ ಎದೆನೋವು ಬರುತ್ತದೆ. ಆಗ ನೀವು ಭಯಪಡದೆ ಸುಲಭವಾದ ರೀತಿಯಲ್ಲಿ ಅದಕ್ಕೆ ಪರಿಹಾರ ಕಂಡುಕೊಳ್ಳಬಹುದಾಗಿದೆ. ನಿಮಗೆ ಎದೆನೋವು ಉಂಟಾದಾಗ ಈ ರೀತಿ ಮಾಡಿದರೆ ಎದೆನೋವು ಕ್ಷಣಾರ್ಧದಲ್ಲಿ ಮಾಯವಾಗುತ್ತದೆ.
ಎದೆನೋವು ಶಮನವಾಗಲು ದಾಳಿಂಬೆ ಹಣ್ಣನ್ನು ತಿನ್ನುವ ಅಭ್ಯಾಸ ಮಾಡಿಕೊಂಡರೆ ಕೆಮ್ಮಿನಿಂದ ಉಂಟಾದ ನೋವು ಕಡಿಮೆಯಾಗುತ್ತದೆ. ಗ್ಲಿಸರಾಲ್ ನೈಟ್ರೇಟ್, ಸಾರ್ ಬಿಟಲ್ ಎಂಬ ಮಾತ್ರೆ ಚೀಪುತ್ತಿದ್ದರೆ ಹೃದಯದ ತೊಂದರೆಯಿಂದ ಉಂಟಾದ ಎದೆನೋವು ನಿವಾರಣೆ ಆಗುವುದು.
ಎಳನೀರಿನಲ್ಲಿ ಕೊಟ್ಟುಮಬಾರಿ ಸೊಪ್ಪನ್ನು ಅರೆದು,ಏಲಕ್ಕಿ, ಸಕ್ಕರೆ ಬೆರೆಸಿ ಕುಡಿಯುತ್ತಿದ್ದರೆ ನೋವು ಪರಿಹಾರವಾಗುವುದು. ಮಜ್ಜಿಗೆಯಲ್ಲಿ ಎಳೆಸೀಬೆಕಾಯಿಯ ಕಷಾಯವನ್ನು ಸಿದ್ದಪಡಿಸಿ ಆರಿಸಿ ಕುಡಿದರೆ ಎದೆನೋವು ನಿವಾರಣೆ ಆಗುವುದು.
ಹಸಿ ಕೊಟ್ಟುಮಬಾರಿ ಬೀಜವನ್ನು ಕುಟ್ಟಿ ಪುಡಿ ಮಾಡಿ ಒಂದು ಚಮಚ ಪುಡಿಗೆ ಒಂದು ಲೋಟ ನೀರು ಹಾಕಿ ಚೆನ್ನಾಗಿ ಕಿವುಚಿ ಶೋಧಿಸಿ ಹಾಲು ಸಕ್ಕರೆ ಬೆರೆಸಿ ಕುಡಿಯುವ ಶೀತ ಕಷಾಯದಿಂದ ಎದೆನೋವು ಕಡಿಮೆಯಾಗುತ್ತದೆ.