ಹೌದು ಇನ್ನೇನು ಬೇಸಿಗೆ ಸಮಯ ಶುರುವಾಗಿದೆ ಹಾಗಾಗಿ ಎಲ್ಲೆಡೆ ನಿಮಗೆ ನಿಂಬೆ ಹಣ್ಣಿನ ಶರಬತ್ ಹೆಚ್ಚಾಗಿ ಸಿಗುತ್ತದೆ ಯಾಕೆ ಅಂದ್ರೆ ಯಾವುದೇ ಮನೆಗೆ ಹೋದರು ನಿಮಗೆ ಕುಡಿಯೋಕೆ ಕೊಡುವುದು ಈ ನಿಂಬೆ ಹಣ್ಣಿನ ಶರಬತ್ ಹಾಗಾಗಿ ನೀವು ಈ ನಿಂಬೆಹಣ್ಣಿನ ಶರಬತ್ ಬಗ್ಗೆ ತಿಳಿದುಕೊಳ್ಳುವುದು ಉತ್ತಮ.
ನಿಂಬೆ ಹಣ್ಣು ದೇಹಕ್ಕೆ ಉತ್ತಮವಾದದ್ದು ಇದರಲ್ಲಿ ಹಲವು ಆರೋಗ್ಯಕರ ಅಂಶಗಳಿವೆ, ನೀವು ಗಮನಿಸಿದ್ದರಾ.? ಮನೆಗೆ ಯಾರಾದರೂ ಅತಿಥಿಗಳು ಬನದಾಗ ನಿಂಬೆಹಣ್ಣಿನ ಶರಬತ್ ಅನ್ನು ಮಾಡಿ ಕೊಡಲಾಗುತ್ತದೆ, ಇದರಲ್ಲಿ ದೇಹಕ್ಕೆ ತಂಪು ಮಾಡುವಂತ ಗುಣಗಳು ಹಾಗು ದೇಹದ ಉಷ್ಣತೆ ಮಟ್ಟವನ್ನು ಕಡಿಮೆ ಮಾಡುವ ಅಂಶವಿದೆ.
ಅಷ್ಟೇ ಅಲ್ಲದೆ ನಿಂಬೆಹಣ್ಣನ್ನು ಒಂದು ಗ್ಲಾಸ್ ನೀರಿನಲ್ಲಿ ಹಾಕಿ ಅದಕ್ಕೆ ಸಕ್ಕರೆ ಹಾಗು ಸ್ವಲ್ಪ ಪುದಿನವನ್ನು ಹಾಕಿ ತಯಾರಿಸಿ ಕುಡಿಯೋದ್ರಿಂದ ದೇಹಕ್ಕೆ ಹೆಚ್ಚಿನ ಲಾಭವಿದೆ. ಬೇಸಿಗೆ ದಿನಗಳಲ್ಲಿ ನಿಂಬೆಹಣ್ಣಿನ ಶರಬತ್ ಅನ್ನು ತಯಾರಿಸಿ ಅದಕ್ಕೆ ಸ್ವಲ್ಪ ಪುದಿನವನ್ನು ಹಿಸುಕಿ ಹಾಕಿದರೆ ನಾಲಿಗೆ ರುಚಿಯನ್ನು ಹೆಚ್ಚುಸುವುದರ ಜತೆಗೆ ದೇಹಕ್ಕೆ ತಂಪು ನೀಡುತ್ತದೆ.
ಇದರ ಸೇವನೆಯಿಂದ ಅಜೀರ್ಣತೆ ಹಾಗು ಕಣ್ಣು ಉರಿ, ಕೈ ಕಾಲಿನ ಪಾದಗಳು ಉರಿಯಾಗುವುದು, ಸಹ ಕಡಿಮೆಯಾಗುವುದು. ಉರಿ ಮೂತ್ರ ಮುಂತಾದ ಸಮಸ್ಯೆಗೆ ಕಡಿವಾಣ ಹಾಕುತ್ತದೆ ಈ ನಿಂಬೆಹಣ್ಣು. ಇನ್ಯಾಕೆ ತಡ ಬೇಸಿಗೆ ಕಾಲ ಶುರುವಾಗಿದೆ, ನಿಂಬೆಹಣ್ಣಿನ ಶರಬತ್ ಮಾಡಿ ದೇಹಕ್ಕೆ ಉತ್ತಮ ಆರೋಗ್ಯವನ್ನು ವೃದ್ಧಿಸಿಕೊಳ್ಳಿ.