ಶಿರಡಿ ಸಾಯಿಬಾಬಾ ಅನೇಕ ಅನೇಕ ಭಕ್ತರಿಂದ ಸಾಯಿಬಾಬಾ ರವರು ಸದ್ಗುರು, ಒಬ್ಬ ಸಂತ, ಒಬ್ಬ ಪಕೀರ ಅಥವ ಅವತಾರ ಪುರುಷ. ಸಾಯಿಬಾಬಾನನ್ನು ಗುರುವಾರ ದಿನ ಮೊರೆ ಹೋದರೆ ಸಾಕು ಎಂತಹ ಬೇಡಿಕೆಗಳು ಸಹ ಈಡೇರುತ್ತವೆ. ಶಿರಡಿ ಸಾಯಿಬಾಬಾ ಎಂದರೆ ಎಲ್ಲರಿಗು ಅಚ್ಚು ಮೆಚ್ಚು. ಗುರುವಾರ ದಿನ ಕೆಲವು ನಿಯಮಗಳನ್ನು ಅನುಸರಿಸಿ ಪೂಜೆ ಮಾಡಿದರೆ ಭಕ್ತರ ಇಷ್ಟಾರ್ಥಗಳನ್ನೆಲ್ಲ ನೆರವೇರಿಸುತ್ತಾರೆ ಎಂಬುದು ನಂಬಿಕೆ.
ಗುರುವಾರದಂದು ಬಾಬಾರಿಗೆ ಯಾವ ರೀತಿಯಲ್ಲಿ ಪೂಜೆ ಮಾಡಬೇಕು, ಯಾವ ರೀತಿಯಲ್ಲಿ ತಮ್ಮ ಹರಕೆಯನ್ನು ನೆರವೇರಿಸಬೇಕು, ಯಾವ ನ್ಯೆವೇದ್ಯಗಳನ್ನು ಅರ್ಪಿಸಿದರೆ ತಮ್ಮ ಬೇಡಿಕೆಗಳು ಈಡೇರುತ್ತವೆ ಎಂಬುದನ್ನು ಈ ಕೆಳಕಂಡಂತೆ ನೋಡೋಣ.
ಗುರುವಾರದಂದು ಸಾಯಿಬಾಬಾಗೆ ಸುಗಂಧಭರಿತ ಯಾವುದೇ ಹೂವುಗಳನ್ನು ಬಾಬಾರಿಗೆ ಮನಸಾ, ವಾಚಾ, ಕರ್ಮೇಣ ಸಮರ್ಪಿಸದರೆ ಆತ ಸಂತೃಪ್ತಿಗೊಳ್ಳುತ್ತಾನೆ. ಯಾವುದೇ ಬಗೆಯ ಹಣ್ಣುಗಳನ್ನು ಸಮರ್ಪಿಸಿದರು ಮನೋಕಾಮನೆಗಳನ್ನು ಈಡೇರುಸುತ್ತಾನೆ. ಸಾಯಿಬಾಬಾ ಗೆ ಅತಿ ಪ್ರಿಯವಾದ ನ್ಯೆವೇದ್ಯವೆಂದರೆ ಅದು ಹಲ್ವ ಮತ್ತು ಪಾಲಕ್ ಸೊಪ್ಪಿನಿಂದ ತಯಾರಿಸಿದ ಯಾವುದೇ ಪದಾರ್ಥ ಆತನಿಗೆ ಇಷ್ಟವಾದ ಖಾದ್ಯ, ಇವುಗಳನ್ನು ಸಮರ್ಪಿಸಿದರೆ ಮನಸ್ಸಿನ ಇಚ್ಚೆಯನ್ನು ನೆರವೇರಿಸುತ್ತಾನೆ ಎಂದು ನಂಬಿಕೆ. ಎಲ್ಲ ಬಗೆಯ ಸಿಹಿ ತಿಂಡಿಗಳು ಅವರವರ ಇಷ್ಟಾರ್ಥಗಳನ್ನು ಈಡೇರಿಸುವಲ್ಲಿ ಪ್ರಮುಖವಾಗಿ ಕೆಲಸ ಮಾಡುತ್ತವೆ.
ಈ ರೀತಿಯಾಗಿ ಸಾಯಿಬಾಬಾರಿಗೆ ಪ್ರಸಾದವನ್ನು ಸಮರ್ಪಿಸಿದರೆ ಭಕ್ತರ ಇಷ್ಟಾರ್ಥಗಳನ್ನು ನೆರವೇರಿಸುತ್ತಾರೆ. ಭಕ್ತರಿಗೆ ಸದೃಢ ಮನಸ್ಸು ನೀಡಿ ಸನ್ಮಾರ್ಗದಿಂದ ನಡೆಯಲು ಆತ್ಮವಿಶ್ವಾಸ ತುಂಬುತ್ತದೆ.