ವಾರದಲ್ಲಿ 7 ದಿನಗಳಿವೆ ಅದರಲ್ಲಿ ಭಾನುವಾರ ಬಂದರೆ ಸಾಕು ರಜೆ ಬಂತು ಅಂತ ಮಕ್ಕಳಿಂದ ದೊಡ್ಡವರು ಸಂಭ್ರಮಿಸುತ್ತೇವೆ. ಆದರೆ ಭಾನುವಾರವೇ ರಜೆ ಏಕೆ.? ಅಷ್ಟಕ್ಕೂ ಈ ಪದ್ದತಿಯನ್ನು ಜಾರಿಗೆ ತಂದಂತ ಆ ಮಹಾನ್ ವ್ಯಕ್ತಿ ಯಾರು.? ಮತ್ತು ಇದರ ಹಿಂದಿರುವ ಕಾರಣವೇನು ಅನ್ನೋದನ್ನ ತಿಳಿಯೋಣ ಬನ್ನಿ.
ಇವತ್ತಿನ ದಿನದಲ್ಲಿ ಭಾನುವಾರ ರಜೆ ದಿನವಾಗಿ ಪಡೆಯುತ್ತಿರಲು ಕಾರಣ ಅಂದ್ರೆ ಈ ಮಹಾನ್ ವ್ಯಕ್ತಿ, ಇವರ ಹೆಸರು ನಾರಾಯಣ ಮೇಘಾಜಿ ಲೊಕೊಂಡೆ. ಇವರು ಹುಟ್ಟಿದ್ದು 1848 ರಲ್ಲಿ ಮರಣ ಹೊಂದಿದ್ದು 1897 ರಲ್ಲಿ ಈ ಸಮಯದಲ್ಲಿ ನಾವು ಬ್ರಿಟಿಷರ ಆಳ್ವಿಕೆಯಲ್ಲಿದ್ದೆವು ಎಂಬುದು ನಮಗೆ ನಿಮಗೆ ತಿಳಿದಿರುವ ವಿಷಯ. ಅಂತಹ ಸಂದರ್ಭದಲ್ಲಿ ಈ ಮೇಘಾಜಿ ಲೊಕೊಂಡೆ ಎಂಬುವವರು ಸತ್ಯ ಶೋಧನಾ ಉದ್ಯಮದಲ್ಲಿ ಕಾರ್ಯಕರ್ತರಾಗಿದ್ದರು, ಮತ್ತು ಕಾರ್ಮಿಕರ ನಾಯಕರು ಸಹ ಆಗಿದ್ದರು.
ಭಾನುವಾರ ದಿನ ರಜೆಯನ್ನು ತರಲು ಒಂದು ಕಾರಣವಿದೆ: ಬ್ರಿಟಿಷರು ನಮ್ಮ ದೇಶವನ್ನು ಆಳುತ್ತಿದ್ದ ವೇಳೆಯಲ್ಲಿ ಇವರು ಈ ರೀತಿ ಕೇಳುತ್ತಾರೆ, ನಮಗೆ ವಾರದಲ್ಲಿ ಒಂದು ದಿನವಾದರೂ ರಜಾ ದಿನವಾಗಿ ಬೇಕು. ಸಮಾಜಕ್ಕೆ ನಾವು ಏನಾದರು ಕೊಡುಗೆಯನ್ನ ನೀಡಲು ನಮಗೆ ಒಂದು ದಿನವಾದರೂ ರಜಾ ಬೇಕು ಎಂದು ಬ್ರಿಟಿಷರ ಹತ್ತಿರ ಮನವಿಯನ್ನ ಮಾಡಿದರು. ಆದರೆ ಬ್ರಿಟಿಷ್ ಸರಕಾರ ಈ ಒಂದು ಬೇಡಿಕೆಯನ್ನ ಒಪ್ಪುವುದಿಲ್ಲ.
ಇದಕ್ಕೆ ಸುಮ್ಮನಿರದ ನಾರಾಯಣ ಮೇಘಾಜಿ ಲೊಕೊಂಡೆಯವರು ಸತತ ಎಂಟು ವರ್ಷಗಳ ಕಾಲ ರಜಾ ದಿನವನ್ನ ಪಡೆಯುವುದಕ್ಕಾಗಿ ಹೋರಾಟವನ್ನ ಮಾಡುತ್ತಾರೆ. ಇದಕ್ಕಾಗಿ ಅವರು ತಮ್ಮ ಕೆಲಸಕ್ಕೆ ರಾಜೀನಾಮೆ ನೀಡುತ್ತಾರೆ. ಇದಾದ ಬಳಿಕ ಹೋರಾಟ ಬಹಳ ತೀವ್ರ ರೂಪವನ್ನ ಪಡೆಯುತ್ತದೆ. ಆ ಸಂದರ್ಭದಲ್ಲಿ ಬ್ರಿಟಿಷ್ ಸರಕಾರ ಈ ಒಂದು ಬೇಡಿಕೆಗೆ ಮಣಿದು, ಭಾನುವಾರವನ್ನು ರಜಾ ದಿನ ಎಂದು ಘೋಷಣೆ ಮಾಡುತ್ತದೆ.
ಅಂದು ಅವರು ಪಟ್ಟಿದ ಶ್ರಮಕ್ಕೆ ಇಂದು ನಮೆಲ್ಲರಿಗೂ ಭಾನುವಾರದ ದಿನ ರಜೆ ದಿನವಾಗಿ ಸಿಗುತ್ತಿದೆ, ಬಹಳಷ್ಟು ಜನಕ್ಕೆ ಈ ವಿಚಾರ ಗೊತ್ತಿರೋದಿಲ್ಲ ಭಾನುವಾರದ ದಿನ ರಜೆಯನ್ನು ಯಾಕೆ ಮಾಡುತ್ತಾರೆ ಅಂದ್ರೆ ಬೇರೆ ರೀತಿಯ ಕಾರಣಗಳನ್ನು ಹೇಳುತ್ತಾರೆ, ಈ ಮಾಹಿತಿ ಇಷ್ಟ ಆದಲ್ಲಿ ಇತರರಿಗೂ ಹಂಚಿಕೊಳ್ಳಿ.