ಸಮಸ್ಯೆ ನಿಮ್ಮದು ಪರಿಹಾರ ನಮ್ಮದು ಬೇರೆ ಜೋತಿಷಿಗಳಲ್ಲಿ ನಿಮ್ಮ ಸಮಸ್ಯೆ ಆಗಲಿಲ್ಲ ಅಂದ್ರೆ ಒಮ್ಮೆ ನಮ್ಮನು ಭೇಟಿ ಮಾಡಿ ಕೇವಲ ಒಂದೇ ದಿನದಲ್ಲಿ ಪರಿಹಾರ ಶತಸಿದ್ಧ, ಉಚಿತ ಭವಿಷ್ಯ ಉಚಿತ ಪರಿಹಾರ. ಶ್ರೀ ಚಕ್ರ ಪುಣ್ಯಕ್ಷೇತ್ರ ಧರ್ಮಸ್ಥಳ ಮಂಜುನಾಥ ಸ್ವಾಮಿ ಆರಾಧಕರು ಪಂಡಿತ್ ಕಾರ್ತಿಕ್ ಭಟ್ ಅವರಿಂದ ಇಂದೇ ಸಂಪರ್ಕಿಸಿ ಪಂಡಿತ್ ಕಾರ್ತಿಕ್ ಭಟ್: 9008144054.
ಹಿಂದೂ ಧರ್ಮದಲ್ಲಿ ದೇವರಲ್ಲಿ ಪ್ರಾರ್ಥಿಸಲು ವಿಭಿನ್ನ ವಿಧಾನಗಳಿವೆ. ಅದರಲ್ಲಿ ಮಂತ್ರಗಳನ್ನೂ ಜಪಿಸುವುದು ಪ್ರಭಾವಶಾಲಿಯೂ ಹೌದು ಮತ್ತು ಮನಸ್ಸನ್ನು ಕೂಡ ಬೇಗ ನಿಯಂತ್ರಿಸುತ್ತದೆ. ಬೇರೆ ಬೇರೆ ಮಂತ್ರಗಳನ್ನು ಜಪಿಸುವುದರಿಂದ ಬೇರೆ ಬೇರೆ ರೀತಿಯ ಲಾಭಗಳಿವೆ. ಮಂತ್ರ ಜಪಿಸುವಾಗ ಮಾಲೆಯನ್ನು ಹಿಡಿಯುತ್ತಾರೆ. ಬೇರೆ ಬೇರೆ ರೀತಿಯ ಮಾಲೆಗಳನ್ನೂ ಹಿಡಿಯುತ್ತಾರೆ. ಹಾಗಾದರೆ ಈ ಮಾಲೆಯ ಮಹತ್ವವೇನು ಮತ್ತು ಯಾಕೆ ಹಿಡಿಯುತ್ತಾರೆ ಗೊತ್ತಾ.?
ರುದ್ರಾಕ್ಷಿ: ಈ ಮಾಲೆಯನ್ನು ಹಿಡಿದು ಎಲ್ಲಾ ಮಂತ್ರಗಳನ್ನೂ ಸುಲಭವಾಗಿ ಜಪಿಸಬಹುದು. ಇನ್ನು ಶಿವನಿಗೆ ರುದ್ರಾಕ್ಷಿ ಪ್ರಿಯ. ಆದುದರಿಂದ ಮಹಾಮೃತ್ಯುಂಜಯ ಮಂತ್ರ ಜಪಿಸಲು ರುದ್ರಾಕ್ಷಿ ಮಾಲೆ ಬಳಸಲಾಗುತ್ತದೆ. ಜತೆಗೆ ಬೇರೆ ದೇವರ ಮಂತ್ರವನ್ನೂ ಈ ಮಾಲೆ ಬಳಸಿ ಪಠಿಸಬಹುದು.
ಸ್ಫಟಿಕ: ಸ್ಪಟಿಕ ಮಾಲೆಯ ಪ್ರಯೋಗದಿಂದ ಧನ ಪ್ರಾಪ್ತಿಯಾಗುತ್ತದೆ. ಜೊತೆಗೆ ಮನಸ್ಸಿನ ಏಕಾಗ್ರತೆ ಹೆಚ್ಚುತ್ತದೆ. ಲಕ್ಷ್ಮಿ ದೇವಿಯನ್ನು ಜಪಿಸಲು ಈ ಮಾಲೆ ಬಳಸಲಾಗುತ್ತದೆ. ಅಧಿಕ ರಕ್ತದೊತ್ತಡ ಇರವವರು ಈ ಮಾಲೆ ಬಳಸಬೇಕು.
ಹಳದಿ: ಹಳದಿ ಬಣ್ಣದ ಮಾಲೆ ಹಿಡಿದು ಜಪಿಸಿದರೆ ಮನಸ್ಸಿನ ಇಚ್ಛೆ ಪೂರ್ತಿಯಾಗುತ್ತದೆ. ಬೃಹಸ್ಪತಿ ಮತ್ತು ಬಾಗಲಾಮುಖಿ ದೇವಿ ಮಂತ್ರ ಜಪಿಸುವಾಗಲೂ ಈ ಮಾಲೆ ಬಳಸಬೇಕು. ಹಳದಿ ಮಾಲೆಯಿಂದ ವಿದ್ಯೆ, ಸಂತಾನ ಮತ್ತು ಜ್ಞಾನ ಪ್ರಾಪ್ತಿಯಾಗುತ್ತದೆ.
ಚಂದನ: ದುರ್ಗಾ ದೇವಿಯ ಮಂತ್ರ ಜಪಿಸಲು ಕೆಂಪು ಚಂದನ ಹಾಗೂ ಕೃಷ್ಣಾ ಮಂತ್ರ ಜಪಿಸಲು ಬಿಳಿ ಚಂದನ ಬಳಸುತ್ತಾರೆ.
ತುಳಸಿ : ತುಳಸಿ ಮಾಲೆ ದೇವಿ ಮತ್ತು ಶಿವನ ಮಂತ್ರ ಜಪಿಸಲು ಬಳಕೆಯಾಗುತ್ತದೆ. ತುಳಸಿ ಮಾಲೆ ಧರಿಸಿದರೆ ಜೀವನ ಸುಖಮಯವಾಗುತ್ತದೆ ಎಂಬ ನಂಬಿಕೆ ಇದೆ.